ಸುಳ್ಯ ತಾಲೂಕಿನ ಗುತ್ತಿಗಾರಿನ ಕೆನರಾ ಬ್ಯಾಂಕ್ ಸಿಬಂದಿಗಳಿಂದ ಅಸಮರ್ಪಕ ಸೇವೆಯ ಬಗ್ಗೆ ಗ್ರಾಹಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಬಗ್ಗೆ ಗುತ್ತಿಗಾರು ವರ್ತಕ ಸಂಘವು ಸಂಬಂಧಿತ ಅಧಿಕಾರಿಗಳನ್ನು ಎಚ್ಚರಿಸಿತ್ತು. ಅದಾದ ಬಳಿಕವೂ ಇಲ್ಲಿನ ವ್ಯವಸ್ಥೆ ಸುಧಾರಣೆಯಾಗಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಮಂಗಳವಾರ ಬೆಳಗ್ಗೆ 10.30 ರ ವರೆಗೆ ಬ್ಯಾಂಕ್ ಮುಂದೆ ಜನರು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು, ಕಾರಣ, ಬ್ಯಾಂಕ್ ಬಾಗಿಲು ತೆರೆಯಲು ವಿಳಂಬ…!.
ಗುತ್ತಿಗಾರಿನಲ್ಲಿ ಕೆನರಾ ಬ್ಯಾಂಕ್ ಅಸಮರ್ಪಕ ಸೇವೆಯ ಬಗ್ಗೆ ಗ್ರಾಹಕರು ದೂರು ನೀಡುತ್ತಿದ್ದರೂ ಸರಿಯಾದ ಸ್ಪಂದನೆ ಲಭ್ಯವಾಗುತ್ತಿಲ್ಲ. ಇದೀಗ ಈ ಅಸಮಾಧಾನ ಹೋರಾಟದ ಹಾದಿ ತಲುಪಿದೆ. ಗುತ್ತಿಗಾರಿನಲ್ಲಿ ವರ್ತಕ ಸಂಘವು ಇದರ ನೇತೃತ್ವ ವಹಿಸಿಕೊಂಡಿದೆ. ಎರಡು ದಿನಗಳ ಹಿಂದೆ ಸಭೆಯಲ್ಲಿ ಕೂಡಾ ನಿರ್ಧಾರ ಮಾಡಿ ಬ್ಯಾಂಕ್ ಅವ್ಯವಸ್ಥೆ ಬಗ್ಗೆ ದೂರು ನೀಡಲು ನಿರ್ಧಾರ ಮಾಡಲಾಗಿತ್ತು. ಅದಾದ ಬಳಿಕವೂ ಇಲ್ಲಿನ ವ್ಯವಸ್ಥೆ ಸುಧಾರಣೆಯಾಗಿಲ್ಲ. ಮಂಗಳವಾರ ಬ್ಯಾಂಕ್ ಬಾಗಿಲು ತೆರೆದು ಸೇವೆ ಆರಂಭಕ್ಕೆ 10.30 ಆದರೂ ಆಗಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…