ಹಲವು ವಿಧಗಳಲ್ಲಿ ಮನುಷ್ಯನನ್ನು ಬಾಧಿಸುವ ಕ್ಯಾನ್ಸರ್ ಕಾಯಿಲೆಯನ್ನು ಪ್ರಾರಂಭದಲ್ಲಿ ಪತ್ತೆಹಚ್ಚಿ, ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಿ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ವೆನ್‍ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಸದಾಶಿವ ಶಾನುಭಾಗ್ ಅವರು ಹೇಳಿದರು.
ಮನೆಯವರು, ಸ್ನೇಹಿತರು, ಆ ಪರಿಸರದಲ್ಲಿರುವವರು ರೋಗಿಗೆ ಆತ್ಮವಿಶ್ವಾಸ ತುಂಬಬೇಕು, ಇದು ಕೂಡ ಕಾನ್ಸರ್ ಗುಣಪಡಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಈ ರೋಗಕ್ಕೆ ಬದಲಾಗುತ್ತಿರುವ ಜೀವನ ಶೈಲಿ ಅತ್ಯಂತ ಪ್ರಮುಖ ಕಾರಣವೆನ್ನಬಹುದು, ಅಸಾಂಕ್ರಮಿಕ ರೋಗವಾಗಿದೆ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಮೊದಲಾದ ಹೃದಯದ ಕಾಯಿಲೆ ಮೊದಲಾದವುಗಳಿಂದ ಜನರು ಸಾವನ್ನಪ್ಪುವ ಪ್ರಮಾಣ ಹೆಚ್ಚಾಗಿದೆ ಎಂದವರು ಹೇಳಿದರು.
ಮಕ್ಕಳಿಗೆ ಎಳವೆಯಿಂದಲೇ ಉತ್ತಮ ಜೀವನದ ಪದ್ಧತಿಗಳನ್ನು ತಿಳಿಸಿಕೊಡಬೇಕು, ಊಟ ಬಲ್ಲವನಿಗೆ ರೋಗವಿಲ್ಲವೆನ್ನುವಂತೆ ಉತ್ತಮ ಆಹಾರ ಶೈಲಿಯನ್ನು ಅವರಿಗೆ ತಿಳಿಸಿಕೊಟ್ಟು, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು, ರೋಗ ಲಕ್ಷಣಗಳನ್ನು ತಿಳಿದುಕೊಳ್ಳುವುದರಿಂದಲೂ ಕ್ಯಾನ್ಸರ್‍ನಿಂದ ಗೆಲ್ಲಲು ಸಾಧ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ತಿಳಿಸಿದರು.
ವೆನ್ಲಾಕ್‍ನ ಫಾರ್ಮಸಿ ಅಧಿಕಾರಿ ನಿರ್ಮಲಾ ಜಿ.ಪಾಯಸ್ ಮಾತನಾಡಿ, ಮಹಿಳೆಯರು 40 ವರ್ಷದ ಬಳಿಕ ತಿಂಗಳಿಗೊಮ್ಮೆ ಸ್ವ ಪರೀಕ್ಷೆ ಮಾಡಿಕೊಳ್ಳಬೇಕು. ಬದಲಾವಣೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂದರು.
ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಸುಧಾಕರ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಡಾ. ಸಿ.ಎ.ಶಾಂತರಾಮ ಶೆಟ್ಟಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…