Advertisement
Opinion

ಡಬ್ಬದ ಪ್ರೊಟೀನ್ ಮತ್ತು ಸ್ವಾಭಾವಿಕ ಪ್ರೋಟೀನ್ ಇದರಲ್ಲಿ ಯಾವುದು ಉತ್ತಮ?

Share

 ಜಿಮ್‌ಗೆ(Gym) ಹೋಗುವ ಅನೇಕರು ಮಾಂಸ ಖಂಡ(muscle)ಪುಷ್ಟಿಗಾಗಿ ಅಲ್ಲಿ ದೊರೆಯುವ ಹಾಲಿನ ಪ್ರೋಟೀನ್‌ನನ್ನು(Milk Protein) ಡಬ್ಬಗಟ್ಟಲೆ ಸೇವಿಸುತ್ತಾರೆ! ಜಿಮ್‌ಗಳು ಎರಡನೇ ಆಲೋಚನೆಯಿಲ್ಲದೆ “ಯಾವುದೇ ಅಡ್ಡಪರಿಣಾಮಗಳಿಲ್ಲ(side effect)” ಎಂದು ಹೇಳುತ್ತ ಬೇಕಾಬಿಟ್ಟಿಯಾಗಿ ಈ ಪ್ರೋಟೀನ್ ಡಬ್ಬಗಳನ್ನು ಮಾರಾಟ ಮಾಡುತ್ತವೆ! ಆದರೆ, ಈ ಆಹಾರವು(Food) ಭಾರತೀಯ ಉಪಖಂಡದಲ್ಲಿ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟಕರವಾಗಿದೆ. ವಾಸ್ತವವಾಗಿ ಇದು ಜೀರ್ಣಾಂಗ ವ್ಯವಸ್ಥೆಯ(Digestion system) ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಹೆಚ್ಚು ವ್ಯಾಯಾಮ(Exercise) ಮಾಡುವವರು ಈ ಪ್ರೋಟೀನ್ ಅಂದರೆ ಅಮೃತ ಎಂದುಕೊಳ್ಳುತ್ತಾರೆ! ಆದರೆ, ಅದರ ದೂರಗಾಮಿ ಪರಿಣಾಮಗಳ ದೃಷ್ಟಿಯಿಂದ, ಇದನ್ನು ಇಷ್ಟೊಂದು ಅಧಿಕ ಪ್ರಮಾಣದಲ್ಲಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

Advertisement
Advertisement
Advertisement

ನಮ್ಮ ಭಾರತೀಯ ಸ್ವಾಭಾವಿಕ ಹಾಗೂ ಪಾರಂಪರಿಕ ಆಹಾರ ಪದ್ಧತಿಯಲ್ಲಿ ನಮಗೆ ಸಾಕಷ್ಟು ಪ್ರೋಟೀನ್ ಲಭ್ಯವಿರುವ ಪದಾರ್ಥಗಳು ಹೇರಳವಾಗಿವೆ. ಇವು ಆರೋಗ್ಯವನ್ನು ನೀಡುವುದಲ್ಲದೆ ಯಾವುದೇ ದುಷ್ಪರಿಣಾಮ ಕೂಡ ಬೀರುವುದಿಲ್ಲ. ಹೆಚ್ಚು ವ್ಯಾಯಾಮ ಮಾಡುವವರ ಮಾಂಸ ಖಂಡಗಳ ಪುಷ್ಟಿ ಗಾಗಿ ಭಾರತೀಯ ಆಹಾರ ಪದ್ಧತಿಯಲ್ಲಿನ ಕೆಲವು ಉತ್ತಮ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.

Advertisement
  1. ಅಶ್ವಗಂಧ ಚೂರ್ಣ + ಕಪಿಕಚ್ಚು ಚೂರ್ಣ + ಶ್ವೇತ ಮುಸ್ಲಿ ಚೂರ್ಣ ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಹಾಲಿನೊಂದಿಗೆ ಬೆರೆಸಿ ಪ್ರತಿದಿನ ಸೇವಿಸಬೇಕು. ತುಂಬಾ ಪ್ರಯೋಜನಕಾರಿ.
  2. 2 ಚಮಚ ಅಶ್ವಗಂಧಾರಿಷ್ಟ + 2 ಚಮಚ ದ್ರಾಕ್ಷಾರಿಷ್ಟ = ರಾತ್ರಿ ಮಲಗುವಾಗ ಒಂದು ಲೋಟ ತಣ್ಣೀರಿನಲ್ಲಿ ಸೇವಿಸಬೇಕು.
  3. ದೇಹಕ್ಕೆ ಮಸಾಜ್ ಮಾಡಲು ಮಹಾಮಾಶ್ ತೈಲ, ಅಶ್ವಗಂಧ ತೈಲವನ್ನು ಬಳಸುವುದು.
  4. 3 ಕೆಜಿ ಜೋಳ + ಅರ್ಧ ಕೆಜಿ ಸೋಯಾಬೀನ್ + 2 ಕೆಜಿ ರಾಗಿ ಒಟ್ಟಿಗೆ ಹಿಟ್ಟು ಮಾಡಿ ದಿನನಿತ್ಯ ಇದರಿಂದ ರೊಟ್ಟಿ ತಯಾರಿಸಿ ತಿನ್ನಬೇಕು.
  5. ಒಂದು ಕೆಜಿ ಅಕ್ಕಿ + ಅರ್ಧ ಕೆಜಿ ಸೋಯಾಬೀನ್ + ಅರ್ಧ ಕೆಜಿ ಸಂಪೂರ್ಣ ಹೆಸರು ಕಾಳು ಇವುಗಳನ್ನು ಬೇರೆ ಬೇರೆಯಾಗಿ ಹುರಿದು, ರವೆ ತಯಾರಿಸಿಕೊಂಡು ಇಡಬೇಕು. ಪ್ರತಿದಿನ ಈ ರವೆಯಿಂದ ಕೇಸರಿ ಬಾತ್ (ಶಿರಾ) ತಯಾರಿಸಿ ಸೇವಿಸಬೇಕು.
  6. ಹುರಿದ ಕಡಲೆ ಬೇಳೆ (ಪುಟಾಣಿ) 200 ಗ್ರಾಂ + ಹುರಿದ (ನೆಲ)ಕಡಲೆ ಕಾಳು 200 ಗ್ರಾಂ + ಎಳ್ಳು 100 ಗ್ರಾಂ ಪುಡಿ ಮಾಡಿ ಈ ಮಿಶ್ರಣವನ್ನು ದಿನದಲ್ಲಿ ನಿಮಗೆ ಹಸಿವಾದಾಗಲೆಲ್ಲಾ ತಿನ್ನಿ. ಇದು ಉತ್ತಮ ಟಾನಿಕ್!! 7) ಒಣ ಹಣ್ಣುಗಳು (ಡ್ರೈಫ್ರೂಟ್ಸ್) ಮತ್ತು ಒಣದ್ರಾಕ್ಷಿಗಳನ್ನು ತಿನ್ನುವುದು!

ಸಂಕಲನೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

14 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

14 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

1 day ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

1 day ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

1 day ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago