ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಪಂ ವ್ಯಾಪ್ತಿಯ ಮರಸಂಕ ಎಂಬಲ್ಲಿ ಮಹಿಳೆಯೊಬ್ಬರಿಗೆ ಅನಾರೋಗ್ಯ ಕಂಡುಬಂದಾಗ ಆಸ್ಪತ್ರೆಗೆ ಸಾಗಿಸಲು ಹೊಳೆಯಲ್ಲಿ ಸ್ಟ್ರೆಚರ್ ಮೂಲಕ ಸಾಗಾಟ ಮಾಡುವ ವಿಡಿಯೋ ಹಾಗೂ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಅತ್ಯಂತ ದಯನೀಯ ಸ್ಥಿತಿಯ ದರ್ಶನವಾಗಿದೆ. ಸಚಿವ ಎಸ್ ಅಂಗಾರ ಅವರ ತವರು ಕ್ಷೇತ್ರದಲ್ಲಿ ಈ ದೃಶ್ಯ ಕಂಡುಬಂದಿರುವುದು ದುರಂತವಾಗಿದೆ. ಕಳೆದ 25 ವರ್ಷಗಳಿಂದ ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇಂತಹದ್ದೊಂದು ಸಮಸ್ಯೆ ಇದ್ದೂ ಪರಿಹಾರ ಆಗದೇ ಇರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಜಾಲ್ಸೂರು ಗ್ರಾಮದ ಮರಸಂಕ ಪ್ರದೇಶದಲ್ಲಿ ಸುಮಾರು 9 ಮನೆಗಳು ಇವೆ. ಇಲ್ಲಿನ ಜನರು ಜಾಲ್ಸೂರಿಗೆ ಬರಬೇಕಾದರೆ ಇದೇ ಮರಸಂಕದ ಹೊಳೆ ದಾಟಿ ಬರಬೇಕಾಗಿದೆ. ಆದರೆ ಇಲ್ಲಿ ಸಮರ್ಪಕವಾದ ಸೇತುವೆ ಇಲ್ಲ. ಇಲ್ಲೊಂದು ಕಿಂಡಿಅಣೆಕಟ್ಟು ಸಹಿತವಾದ ದಾರಿ ಇದೆ. ಆದರೆ ಮಳೆಗಾಲದಲ್ಲಿ ಇದರಲ್ಲಿ ಪಾಚಿ ಹಿಡಿದ ಸ್ಥಿತಿಯಲ್ಲಿ ದಾಟಿ ಬರಲು ಕಷ್ಟವಾಗುತ್ತದೆ. ಅಲ್ಲದೆ ಮರಸಂಕದಿಂದ ಸ್ವಲ್ಪ ದೂರದಲ್ಲಿ ಈ ಕಿಂಡಿಅಣೆಕಟ್ಟು ಇದೆ, ಮಹಿಳೆಯರಿಗೆ , ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ ಇಲ್ಲಿ ಹೋಗಲು ಕಷ್ಟವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಯಾವುದೇ ವಾಹನಗಳು ಇಲ್ಲಿನ 9 ಮನೆಗಳಿಗೆ ಸಂಪರ್ಕ ಮಾಡುವುದಿಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ಸಂಕಷ್ಟ ಎದುರಿಸಬೇಕಾಗಿತ್ತು. ಇದಕ್ಕಾಗಿ ಹಲವು ಬಾರಿ ಜನಪ್ರತಿನಿಧಿಗಳಿಗೆ ಇಲಾಖೆಗಳಿಗೆ ಇಲ್ಲಿನ ಜನರು ಮನವಿ ಮಾಡಿದ್ದರು. ಪ್ರತೀ ಬಾರಿ ಚುನಾವಣೆಯ ಸಂದರ್ಭ ಭರವಸೆಗಳು ಸಿಗುತ್ತವೆ, ಆದರೆ ಅದಾದ ಬಳಿಕ ಭರವಸೆಗಳು ಮರೆಯಾಗುತ್ತವೆ ಎನ್ನುತ್ತಾರೆ ಇಲ್ಲಿನ ಜನ. ಹೀಗಾಗಿ ಈಗ ಭರವಸೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದಾರೆ ಇಲ್ಲಿನ ಜನ. ಕಳೆದ ಬಾರಿ ಕೂಡಾ ಭರವಸೆ ದೊರೆತು ಕಾಮಗಾರಿ ನಡೆಸಲಾಗುತ್ತದೆ ಎನ್ನುವ ಹೊತ್ತಿಗೆ ಅನುದಾನಗಳು ಸಾಕಾಗದು ಎಂದು ನೆನೆಗುದಿಗೆ ಬಿದ್ದಿತ್ತು. ಸ್ಥಳೀಯ ಪಂಚಾಯತ್‌ನಲ್ಲಿ ಕೂಡಾ ಈ ಬಗ್ಗೆ ಪ್ರಸ್ತಾಪವಾಗಿತ್ತು. ಅನೇಕ ವರ್ಷಗಳಿಂದಲೂ ಈ ಸಮಸ್ಯೆ ಇದೆ. ಆದರೆ ಇದುವರೆಗೂ ಪರಿಹಾರ ಮಾತ್ರಾ ಆಗಿಲ್ಲ.
ಕಳೆದ ಅನೇಕ ವರ್ಷಗಳಿಂದ ನಮಗೊಂದು ಸೇತುವೆ ಮಾಡಿಕೊಡಿ ಎಂದು ಮನವಿ ಮಾಡುತ್ತಲೇ ಇದ್ದೇವೆ, ಆದರೆ ಇದುವರೆಗೂ ಭರವಸೆ ಮಾತ್ರಾ ಸಿಕ್ಕಿದೆ, ಪೂರ್ಣಪ್ರಮಾಣದ ಸೇತುವೆ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರಾದ ಸತೀಶ್ ನಾಯ್ಕ್.
Advertisement
ಸುಳ್ಯದಲ್ಲಿ ಅನೇಕ ಕಡೆಗಳಲ್ಲಿ ಈ ರೀತಿಯ ಭರವಸೆಗಳು ಮಾತ್ರಾ ಲಭ್ಯವಾಗುತ್ತಿದೆ. ಪ್ರಧಾನಿಗಳಿಗೆ ಪತ್ರ ಬರೆದರೂ ಇಲ್ಲಿ ಯಾವುದೇ ಫಲಿತಾಂಶಗಳು ಲಭ್ಯವಾಗುತ್ತಿಲ್ಲ. ಸುಳ್ಯದಲ್ಲಿ ಮಾತ್ರಾ ಹೀಗೇಕೆ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಸಚಿವರ ಕ್ಷೇತ್ರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದರೂ ಏಕೆ ಸೂಕ್ತ ರೀತಿಯ ಸ್ಪಂದನೆ ಸಿಗುತ್ತಿಲ್ಲ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…