ಭಾರತದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳು ಈಗ ಹೆಚ್ಚಾಗುತ್ತಿವೆ. ಕರ್ನಾಟಕದ ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ ಹಾಗೂ ಕೇರಳದ ಕೆಲವು ಕಡೆ ಬೆಳೆಯುತ್ತಿದ್ದ ಅಡಿಕೆ ಇಂದು ದೇಶದ ಹಲವು ಕಡೆ ಬೆಳೆಯಲಾಗುತ್ತಿದೆ. ಅಸ್ಸಾಂ, ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ವಾಣಿಜ್ಯ ಬೆಳೆಯಾಗಿ ವಿಸ್ತರಣೆಗೊಂಡಿದೆ. ಈ ನಡುವೆ ಅಡಿಕೆ ಕಳ್ಳಸಾಗಾಣಿಕೆಯೂ ನಡೆಯುತ್ತಿದೆ. ಆಗಾಗ ಈ ಕಳ್ಳಸಾಗಾಣಿಕೆ ಪತ್ತೆಯಾದರೂ ಈ ಪ್ರಕರಣದ ಪ್ರಮುಖ ಆರೋಪಿಗಳು ಪತ್ತೆಯಾಗುತ್ತಿಲ್ಲ. ಅದೇ ಪಕ್ಕದ ಎಲ್ಲಾ ದೇಶಗಳಲ್ಲೂ ಇಂತಹ ಪ್ರಕರಣಗಳಲ್ಲಿ ಆರೋಪಿಯನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ…!
ಸರ್ಕಾರ ಅಧಿಕೃತ ಮಾಹಿತಿಯ ಪ್ರಕಾರ ಈ ಹಣಕಾಸು ವರ್ಷದಲ್ಲಿ ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಳ್ಳಲು ಅಥವಾ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾಗ 6,760.8 ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ತಿಳಿಸಿದ್ದರು. ಇಂತಹ ಪ್ರಕರಣಗಳಲ್ಲಿ ಒಟ್ಟು 416 ಪ್ರಕರಣಗಳು ದಾಖಲಾಗಿವೆ. ಹಾಗಿದ್ದರೂ ಈ ಕಳ್ಳಸಾಗಾಣಿಕೆಯ ಆರೋಪಿಗಳು ಪತ್ತೆಯಾಗುತ್ತಿಲ್ಲ. ಅಡಿಕೆಯಂತಹ ವಸ್ತುಗಳು ಅಂತರಾಷ್ಟ್ರೀಯ ಮಟ್ಟದ ಕಳ್ಳಸಾಗಾಣಿಕೆಯಾದರೂ ಆರೋಪಿಗಳು ಏಕೆ ಪತ್ತೆಯಾಗುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಒಂದಲ್ಲ, ಎರಡಲ್ಲ 400 ಕ್ಕೂ ಹೆಚ್ಚು ಪ್ರಕರಣಗಳು ನಡೆದರೂ ಅಡಿಕೆ ಕಳ್ಳಸಾಗಾಣಿಕೆಯ ಸಂಸ್ಥೆಯೋ..? ವ್ಯಕ್ತಿಯೋ… ? ಪ್ರಭಾವಿಗಳೋ…? ಎಂಬುದೂ ತಿಳಿಯುತ್ತಿಲ್ಲ. ಬಹುತೇಕ ಎಲ್ಲಾ ಪ್ರಕರಣದಲ್ಲೂ ಲಾರಿ ಚಾಲಕರು, ಸಿಬಂದಿಗಳು ಬಂಧನಕ್ಕೆ ಒಳಗಾಗುತ್ತಾರೆ, ಅದರ ಹಿಂದೆ , ಸಾಗಾಟದ ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿಲ್ಲ.
ಅಡಿಕೆ ಮಾರುಕಟ್ಟೆ ಸದ್ಯ ಉತ್ತಮವಾಗಿದೆ. ಧಾರಣೆ ಏರಿಕೆ ಅಥವಾ ಸ್ಥಿರತೆಗೆ ಅಡಿಕೆ ಆಮದು, ಅಡಿಕೆ ಕಳ್ಳಸಾಗಾಣಿಕೆ ತಡೆಯಾಗಲೇಬೇಕು. ಇಲ್ಲದೇ ಇದ್ದರೆ ಅಡಿಕೆ ಬೆಳೆ ವಿಸ್ತರಣೆಯ ಪರಿಣಾಮಗಳು ಕೆಲವು ವರ್ಷಗಳಲ್ಲಿ ಸರಿಯಾಗಿ ಬೆಳೆಗಾರರ ಮೇಲೆ ಪರಿಣಾಮ ಬೀರಲಿದೆ. ಈಗಿನ ಧಾರಣೆ ಸ್ಥಿರತೆಯಾಗಬೇಕಾದರೆ ಈಗಲೇ ಸರಿಯಾದ ಕ್ರಮಗಳ ಅಗತ್ಯ ಇದೆ.
ಉಳಿದ ಎಲ್ಲಾ ದೇಶಗಳಲ್ಲೂ ಅಡಿಕೆ ಅಥವಾ ಯಾವುದೇ ವಸ್ತುಗಳ ಕಳ್ಳಸಾಗಾಣಿಕೆ ಪ್ರಕರಣಗಳು ಗಂಭೀರವಾಗಿ ಪರಿಗಣಿಸ್ಪಡುತ್ತದೆ. ಈಚೆಗೆ ಪಾಕಿಸ್ತಾನಕ್ಕೆ ಕಳ್ಳಸಾಗಾಣಿಕೆಯ ಮೂಲಕ ಅಡಿಕೆ ಆಮದು ಮಾಡಿಕೊಂಡ ಉದ್ಯಮಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಅಲ್ಲಿನ ಸರ್ಕಾರ. ಕಸ್ಟಮ್ಸ್ ಆಕ್ಟ್, 1979 ರ ಸೆಕ್ಷನ್ 171 ರ ಅಡಿಯಲ್ಲಿ ಉದ್ಯಮಿಯನ್ನು ಬಂಧಿಸಲಾಗಿತ್ತು. ಪ್ರಾಥಮಿಕ ತನಿಖೆಯ ಸಮಯದಲ್ಲಿ, ಉದ್ಯಮಿ 2010 ರಿಂದ ಆಮದು ಮತ್ತು ರಫ್ತಿನಲ್ಲಿ ತನ್ನ ದೀರ್ಘಕಾಲದ ವ್ಯಾಪಾರವನ್ನು ಮಾಡುತ್ತಿದ್ದರು. ಈಚೆಗೆ ಇಂಡೋನೇಷ್ಯಾದ ಸಂಸ್ಥೆಯೊಂದಿಗೆ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿದ್ದರೂ ಅಡಿಕೆ ಸಾಗಾಣಿಕೆ ಮಾಡಿದ ಹಿನ್ನೆಲೆಯಲ್ಲಿ ಕೇಸು ದಾಖಲಾಗಿತ್ತು.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…