ಜಾರ್ಖಂಡ್ ರಾಜ್ಯದ ಜಮ್ತಾರಾ ಪಟ್ಟಣದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ, ಜಾರ್ಖಂಡ್’ನ ಗೋಡಂಬಿ ನಗರ ಎಂದು ಕರೆಯಲ್ಪಡುವ ನಲಾ ಎಂಬ ಹಳ್ಳಿಯಿದೆ. ಈ ನಲಾ ಗ್ರಾಮದಲ್ಲಿ ಗೋಡಂಬಿಗಳನ್ನು ತರಕಾರಿಯಂತೆ ಪ್ರತಿ ಕೆಜಿ ಗೆ 20 ರಿಂದ 30 ರೂ ಗಳಿಗೆ ಮಾಡಲಾಗುತ್ತಿದೆ. ಅಂದರೆ ತರಕಾರಿಗಳನ್ನು ಮಾರಕಟ್ಟೆಯಿಂದ ಯಾವ ಕೆಜಿಗೆ ತೆಗೆದುಕೊಳ್ಳುತೇವೆ ಆದರಂತೆ ಇಲ್ಲಿ ಗೊಡಂಬಿಗಳನ್ನು ತೆಗೆದುಕೊಳ್ಳಲಾಗುತ್ತದೆ. ದೇಶದೆಲ್ಲೆಡೆ ದುಬಾರಿ ಬೆಲೆಗೆ ಗೋಡಂಬಿ ಮಾರಾಟವಾಗುತ್ತಿದ್ದೆ ಇಲ್ಲಿ ಮಾತ್ರಾ ಇಷ್ಟು ಕಡಿಮೆಗೆ ಹೇಗೆ ಗೋಡಂಬಿ ಮಾರಾಟ ಮಾಡುತ್ತಾರೆ..? ಇದು ಬಹಳ ಕುತೂಹಲ.
ಸಲಾ ಗ್ರಾಮದಲ್ಲಿ 50 ಎಕರೆಗೂ ಹೆಚ್ಚು ಭೂಮಿ ಗೋಡಂಬಿ ತೋಟಗಳಿಂದ ತುಂಬಿಕೊಂಡಿದ್ದು, ಈ ಗ್ರಾಮವನ್ನು ಭಾರತದ ಗೋಡಂಬಿ ನಗರ ಎಂದು ಕರೆಯಬಹುದಾಗಿದೆ ಕೂಡಾ. ಆದರೆ ಈ ಊರು ಅಷ್ಟೊಂದು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.
2010ರಲ್ಲಿ ಜಾರ್ಖಂಡ್ ಅರಣ್ಯ ಇಲಾಖೆ ನಲಾ ಗ್ರಾಮದ ಮಣ್ಣು ಮತ್ತು ಹವಾಮಾನ ಗೋಡಂಬಿ ಬೆಳೆಗೆ ಅತ್ಯಂತ ಸೂಕ್ತ ಎಂದು ಕಂಡುಹಿಡಿದಿತ್ತು. ಈ ಪ್ರದೇಶದಲ್ಲಿ ಲ್ಯಾಟರೈಟ್ ಮಣ್ಣು ಮಧ್ಯಮ ಮಳೆ, ಸೂರ್ಯನ ಬೆಳಕು ಮತ್ತು ತಾಪಮಾನ ಗೋಡಂಬಿ ಮರಗಳ ಬೆಳವಣಿಗೆಗೆ ಆದರ್ಶ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಗೋಡಂಬಿ ಉತ್ಪಾದನೆ ಆರಂಭವಾಯಿತು . ಈಗ ಗ್ರಾಮದಲ್ಲಿ ಸಾವಿರಾರು ಗೇರುಬೀಜದ ಮರಗಳು ಇದ್ದು, ಪ್ರತಿ ವರ್ಷ ಲಕ್ಷಾಂತರ ಕೆಜಿ ಗೊಂಡಂಬಿ ಉತ್ಪಾದನೆಯಾಗುತ್ತದೆ.
ಗೋಡಂಬಿಯ ಪೌಷ್ಟಿಕಾಂಶದ ಮೌಲ್ಯ ಮತ್ತು ಅದನ್ನು ಸ್ವಚ್ಛಗೊಳಿಸುವ ಮತ್ತು ಬಳಕೆಗೆ ಸಿದ್ಧಪಡಿಸುವ ಪ್ರಕ್ರಿಯೆಯಿಂದಾಗಿ, ಗೋಡಂಬಿ ಬೀಜಗಳ ಬೆಲೆ ಯಾವಾಗಲೂ ಗಗನಕ್ಕೇರುವಂತೆ ಮಾಡುತ್ತಿದೆ. ಸದ್ಯ ಗೋಡಂಬಿ ಪ್ರತಿ ಕಿಲೋಗ್ರಾಂಗೆ ಸುಮಾರು ₹800 ರಿಂದ ₹1000 ವರೆಗೆ ಇರುತ್ತದೆ. ಆದರೆ ಜಾರ್ಖಂಡ್ ಈ ಪ್ರದೇಶದಲ್ಲಿ ಮಾತ್ರಾ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಗೋಡಂಬಿಯನ್ನ ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಖ್ಯ ಕಾರಣವೆಂದರೆ, 2010ರಲ್ಲಿ ಗೋಡಂಬಿ ತೋಟಗಳು ಎಲ್ಲರಿಗೂ ಇಲ್ಲಿ ಪರಿಚಿತವಾದವು. ಅದರ ನಂತರ, ಗೋಡಂಬಿ ಕೃಷಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು. ಸಸ್ಯಗಳು ಗೋಡಂಬಿ ಹಣ್ಣುಗಳನ್ನ ನೀಡಿದ ತಕ್ಷಣ, ರೈತರು ಅವುಗಳನ್ನ ಸಂಗ್ರಹಿಸಿ ರಸ್ತೆಬದಿಯಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಸ್ಥಳವು ಹೆಚ್ಚು ಅಭಿವೃದ್ಧಿ ಹೊಂದಿಲ್ಲದ ಕಾರಣ, ಗ್ರಾಮಸ್ಥರು ಗೋಡಂಬಿಯನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.
ಸಾವಯವ ಕೃಷಿ ಇಂದಿನ ಅವಶ್ಯಕತೆ ಎಂದು ‘ಭಾರತದ ಗ್ರೀನ್ ಹೀರೋ’ ಆರ್.ಕೆ. ನಾಯರ್…
ಬ್ರಹ್ಮಾವರ ಸರ್ಕಾರಿ ಡಿಪ್ಲೋಮಾ ಕೃಷಿ ಕಾಲೇಜನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ…
ಪಿಎಂ ಕುಸುಮ್ ಯೋಜನೆಯಿಂದ ರೈತರ ನೀರಾವರಿ ವೆಚ್ಚ ಕಡಿತ, ಸೌರ ಪಂಪ್ ಬಳಕೆ…
ಅಡಿಕೆ ಸಂಗ್ರಹಣೆಯಲ್ಲಿ ಹುಳು, ಫಂಗಸ್ ಮತ್ತು ಗುಣಮಟ್ಟ ನಷ್ಟ ತಗ್ಗಿಸಲು ವಿಕಿರಣ ತಂತ್ರಜ್ಞಾನ…
ಕರ್ನಾಟಕದಲ್ಲಿ ಶೀತ ಅಲೆ ತೀವ್ರಗೊಂಡಿದ್ದು 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ. ಬೀದರ್ನಲ್ಲಿ…
ಡಾರ್ಜಿಲಿಂಗ್–ಸಿಕ್ಕಿಂ ಹಿಮಾಲಯಗಳಲ್ಲಿ ಮಾರುಕಟ್ಟೆ ಸಂಪರ್ಕದ ಕೊರತೆಯಿಂದ ಕೃಷಿ ಆದಾಯ ಕುಸಿತವಾಗಿದೆ. ಕಳಪೆ ರಸ್ತೆ,…