#ಡಿಜಿಟಲ್‌ಇಂಡಿಯಾ | ಜಾತ್ರೆಯಲ್ಲಿ ವ್ಯಾಪಾರಿಗಳ ಕ್ಯಾಶ್‌ ಲೆಸ್ ವ್ಯವಹಾರ | ಗಮನ ಸೆಳೆದ ಕುಕ್ಕೆ ಜಾತ್ರೆ |

Advertisement
Advertisement

ದೇಶವು ಡಿಜಿಟಲ್‌ ವ್ಯವಹಾರ ಆರಂಭವಾಗಿ ವರ್ಷಗಳು ಉರುಳಿದವು. ನೋಟ್‌ ಬ್ಯಾನ್‌ ಬಳಿಕ ಕ್ಯಾಶ್‌ ಲೆಸ್ ವ್ಯವಹಾರಕ್ಕೆ ಸರ್ಕಾರವು ಆದ್ಯತೆ ನೀಡಿತ್ತು. ಇದೀಗ ಜಾತ್ರೆಯಲ್ಲೂ ಡಿಜಿಟಲ್‌ ವ್ಯವಹಾರ ಆರಂಭಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯದ ಜಾತ್ರಾ ಉತ್ಸವದ ವೇಳೆ ಡಿಜಿಟಲ್‌ ವ್ಯವಹಾರ ಗಮನ ಸೆಳೆಯಿತು.

Advertisement

ಡಿಜಿಟಲ್‌ ವ್ಯವಹಾರ ಆರಂಭಗೊಂಡಾಗ ಅನೇಕರು ಗಾಬರಿಗೊಂಡರು. ಬೀದಿ ಬದಿಯ ವ್ಯಾಪಾರಿಗಳು  ಡಿಜಿಟಲ್‌ ವ್ಯವಸ್ಥೆಗೆ ಬರುವುದು  ಕಷ್ಟ ಎಂದು ಹೇಳಿಕೊಂಡಿದ್ದರು. ಆದರೆ ನಿರೀಕ್ಷೆಗೂ ಮೀರಿ ಇದೀಗ ಡಿಜಿಟಲ್‌ ವ್ಯವಹಾರದಲ್ಲಿ ಬೀದಿ ಬದಿಯ ವ್ಯಾಪಾರಿಗಳು, ಸಂತೆ, ಜಾತ್ರೆಯ ವ್ಯವಹಾರದಲ್ಲೂ ಈಗ ಡಿಜಿಟಲ್‌ ವ್ಯವಹಾರ ಆರಂಭಗೊಂಡಿದೆ. ಜನರೂ ಪಾವತಿಗೆ ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ವೇಳೆ ರಸ್ತೆ ಬದಿ ಮಾಲೆ ಇತ್ಯಾದಿ ಮಾರಾಟ ಮಾಡುವ ವ್ಯಾಪರಸ್ಥರಲ್ಲೂ ಪೋನ್‍ಪೇ, ಗೂಗಲ್‍ಪೇ ಮುಂತಾದ ಕ್ಯಾಶ್ ಲೆಸ್ ವ್ಯವಸ್ಥೆ ಜಾರಿಗೆ ಬಂದಿತ್ತು.

Advertisement
Advertisement

ಜಾತ್ರೆ, ಸಂತೆ ಇತ್ಯಾದಿಗಳಲ್ಲಿ ಈಗ ಡಿಜಿಟಲ್‌ ವ್ಯವಹಾರ, ಕ್ಯೂಆರ್‌ ಕೋಡ್‌ ಬಳಕೆ ಮಾಡದೇ ಇದ್ದರೆ ವ್ಯವಹಾರವೂ ಕಡಿಮೆ ಎನ್ನುವ ಸ್ಥಿತಿ ಬಂದಿದೆ ಎನ್ನುತ್ತಾರೆ ವ್ಯಾಪಾರಿ ಸೀತಮ್ಮ. ಹಿಂದೆಲ್ಲಾ ಜನರು ಸಂತೆಗೆ ಬರುವಾಗ ಹಣ ತರುತ್ತಿದ್ದರು. ಈಗ ಮೊಬೈಲ್‌ ತರುತ್ತಾರೆ, ಅದರಲ್ಲೇ ಹಣ ಪಾವತಿ ಮಾಡುತ್ತಾರೆ. ಕ್ಯೂ ಆರ್‌ ಕೋಡ್‌, ಡಿಜಿಟಲ್‌ ವ್ಯವಸ್ಥೆ ನಮ್ಮಲ್ಲಿ ಇಲ್ಲದೇ ಇದ್ದರೆ ವ್ಯವಹಾರ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ವ್ಯಾಪಾರಿ ಬಸಪ್ಪ.

ಹಣ ಕಳೆದು ಹೋಗುವ ಭಯ, ಕಳ್ಳರ ಭಯ, ಪಿಕ್‌ ಪಾಕೆಟ್‌ ಇತ್ಯಾದಿಗಳಿಂದ ತಪ್ಪಿಸಿಕೊಳ್ಳಲೂ ಡಿಜಿಟಲ್‌ ವ್ಯವಹಾರ ಅನುಕೂಲವಾಗಿದೆ. ತುಂಬಾ ಜನರು ಸೇರಿದಾಗ ನೆಟ್ವರ್ಕ್‌ ಸಮಸ್ಯೆ ಕಂಡುಬರುತ್ತದೆ. ಆಗ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಇಂತಹ ಜಾತ್ರೆಗಳಲ್ಲಿ ಈಗ ನೆಟ್ವರ್ಕ್‌ ಕಡೆಗೂ ಗಮನ ಹರಿಸಬೇಕಾಗಿದೆ.

Advertisement
Advertisement
ನಿಮ್ಮ ಅಭಿಪ್ರಾಯಗಳಿಗೆ :

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "#ಡಿಜಿಟಲ್‌ಇಂಡಿಯಾ | ಜಾತ್ರೆಯಲ್ಲಿ ವ್ಯಾಪಾರಿಗಳ ಕ್ಯಾಶ್‌ ಲೆಸ್ ವ್ಯವಹಾರ | ಗಮನ ಸೆಳೆದ ಕುಕ್ಕೆ ಜಾತ್ರೆ |"

Leave a comment

Your email address will not be published.


*