ದಾನ ಮಾಡದ ಹಣ, ವಿದ್ವಾಂಸರಿಗೆ ಮಾನ್ಯತೆ ಇಲ್ಲದ ರಾಜ್ಯ, ಶೀಲವಿಲ್ಲದ ಹೆಂಗಸು, ಜ್ಞಾನಿಯಿಲ್ಲದ ಸಭೆ, ಜ್ಞಾನವಿಲ್ಲದ ತಪಸ್ಸು, ವೇದಾಧ್ಯಯನವನ್ನು ಮಾಡದ ಬ್ರಾಹ್ಮಣ, ಬಾಣಗಳ ಹೂಟೆಯಿಲ್ಲದ ಯುದ್ಧ –…
“ತನ್ನ ಯೋಗ್ಯತೆಯನ್ನರಿತು ಅಪರಾಧಕ್ಕೆ ತಕ್ಕ ಕೋಪ, ಅರ್ಹತೆಗೆ ತಕ್ಕ ದಾನ, ಆತ್ಮಹಿತವನ್ನು ಸಾಧಿಸುವ ಚೊಕ್ಕಟವಾದ ನಡತೆ, ಸುಖ-ದುಃಖಗಳಲ್ಲಿ, ಏರುಪೇರುಗಳಲ್ಲಿ ಆಳವಾದ ಗಂಗೆಯ ಮಡುವಿನಂತೆ ಕದಲದಿರುವುದು – ಇವು…
“ತನಗಿಂತಲೂ ಬಲಶಾಲಿಯಾದವನೊಡನೆ ಹಗೆತನವನ್ನು ಬೆಳೆಸುವುದು, ಇಹಪರಗಳನ್ನು ವಿಚಾರಿಸದಿರುವುದು, ಲೋಕಮರ್ಯಾದೆಯನ್ನು ಮೀರಿ ನಡೆಯುವುದು, ಬಲ್ಲವರನ್ನು ವಿರೋಧಿಸುವುದು, ಬಹಳ ಮಾತನಾಡುವುದು, ತನ್ನ ಧ್ಯೇಯವೇನೆಂಬುದನ್ನು ನಿಶ್ಚಯಿಸದಿರುವುದು, ಪರರ ಅಭಿಪ್ರಾಯವನ್ನು ಅರಿತುಕೊಳ್ಳದಿರುವುದು- ಇವು…
ಇದು ಒಳ್ಳೆಯದು, ಇದು ಕೆಟ್ಟದು ಎಂಬುದನ್ನು ವಿಚಾರಿಸಿ ಒಳ್ಳೆಯ ಕಾರ್ಯವನ್ನಾರಂಭಿಸಿದಾಗ ಸಂತೋಷ, ದರ್ಪ, ಕೋಪ, ನಾಚಿಕೆ, ಮಾನ, ಅವಮಾನಗಳ ಪ್ರಸಂಗವು ಬಂದರೂ, ಯಾವ ಅಡ್ಡಿಯೇ ಬಂದರೂ ಲೆಕ್ಕಿಸದೆ…
ಒಲಿದ ಹೆಂಗಸನ್ನು ಕೈಬಿಟ್ಟು ಒಲಿಯದವಳಿಗಾಗಿ ಹಂಬಲಿಸುವವನು, ಕೆಟ್ಟ ಜನರಲ್ಲಿ ಸ್ನೇಹವನ್ನು ಬೆಳೆಸುವುದು, ತನಗೆ ಗೊತ್ತಿಲ್ಲದಿದ್ದರೂ ಗೊತ್ತಿದೆಯೆಂದು ಹೇಳುವವನು, ತನ್ನನ್ನು ಕೇಳದಿದ್ದರೂ ತಾನಾಗಿ ಹೇಳತಕ್ಕವನು, ತನ್ನ ಕೈಯಲ್ಲಿ ಸಾಗದಿರುವ…
ಒಂದು ತೀರ್ಮಾನವನ್ನು ಕೈಗೊಳ್ಳಬೇಕಾದಾಗ, ಬಲ್ಲ ನಾಲ್ವರಿಗೆ ಅದನ್ನು ತಿಳಿಸಿ ಪರ್ಯಾಲೋಚಿಸಬೇಕು. ಅನಂತರ ಅದರಲ್ಲಿ ಇಬ್ಬರನ್ನು ಬಿಟ್ಟು ಇನ್ನಿಬ್ಬರೊಡನೆ ವಿಚಾರ ಮಾಡಬೇಕು. ಆಮೇಲೆ ಅವರಲ್ಲೊಬ್ಬನನ್ನು ಕಳೆದು ಒಬ್ಬನೊಡನೆಯೇ ಮಂತ್ರಾಲೋಚನೆಯನ್ನು…
ತನ್ನ ಸುಖದುಃಖಗಳಿಗೆ ಆಗುವ ಬಂಧುಮಿತ್ರರನ್ನು ಕೆಲವರು ತೊರೆದು ಬಿಡುತ್ತಾರೆ. ಕಪಟತನದಿಂದ ಒಳ್ಳೆಯ ಮಾತನ್ನಾಡಿ ಉಂಡು ಜಾರಿ ಹೋಗುವ ನೀಚರೊಡನೆ ಸ್ನೇಹವನ್ನು ಬೆಳೆಸುತ್ತಾರೆ. ಅವರನ್ನು ಪುರಸ್ಕರಿಸುತ್ತಾರೆ. ಇದು ತನ್ನನ್ನು…
ಎಲ್ಲಾ ಜನ್ಮಗಳಿಗಿಂತಲೂ ನರಜನ್ಮ ಶ್ರೇಷ್ಠತಮ. ಮನುಷ್ಯನಾಗಿ ಹುಟ್ಟಿಯೂ ಗುರುಹಿರಿಯರು ಯಾರು, ದಾನಕ್ಕೆ ಪಾತ್ರರು ಯಾರು? ಅಪಾತ್ರರು ಯಾರು? ಎಂದು ವಿಚಾರಿಸಿದೆ, ಅಪಾತ್ರನಿಗೆ ದಾನ ಮಾಡಿ ಪಾತ್ರನನ್ನು ದೂರ…