ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ ದನವನ್ನು ಕಂಡು ಬಹಳ ಸಂತೋಷವಾಯಿತು. ನಮ್ಮ ದೇಶಿ ದನಗಳೇ ಹಾಗೆ. ನಿಂತ ನಿಲುವು, ಉಬ್ಬಿದ ಭುಜ, ಓಲಾಡುವ ಗಂಗೆದೊಗಲು ಎಂತವರನ್ನೂ ಆಕರ್ಷಿಸಿಯೇ ಬಿಡುತ್ತದೆ. ಆದರೆ ಆಕರ್ಷಣೆಯುಳ್ಳ ಎಲ್ಲವೂ ಹಾಲು ಕರೆಯಲು ಬಿಡಲೇಬೇಕೆಂದೇನೂ ಇಲ್ಲ. ಹಾಲಿರುವುದು ತನ್ನ ಕರುವಿಗಾಗಿಯೇ ವಿನಃ ನಿಮಗಲ್ಲ ಅಂತ ಎಚ್ಚರಿಸುವುದರಲ್ಲಿ ಬಲು ಮುಂದು. ಹಾಗೆ ಮನೆಯವರಲ್ಲಿ ವಿಚಾರಿಸಿದೆ.
ಹಾಲು ಕರೆಯುವ ಮಟ್ಟಿಗೆ ಬಲು ಸಾಧು ದನ. ಆದರೆ ಬೇಜಾರದ ಸಂಗತಿ ಎಂದರೆ ಅದಕ್ಕೊಂದು ಎಲರ್ಜಿ. ಕೆಚ್ಚಲಿನದ್ದೆಲ್ಲ ಸಿಪ್ಪೆ ಆಗಾಗ ಹೋಗುತ್ತಲೇ ಇರುತ್ತದೆ. ಆಗ ನೋವಾದಾಗ ಸ್ವಲ್ಪ ಉಪದ್ರ ಕೊಡುತ್ತದೆ. ಪಶು ವೈದ್ಯರು ಬಂದು ಅನೇಕ ಇಂಜಕ್ಷನ್ ಗಳನ್ನು ಹಚ್ಚಲು ಮುಲಾಮ್ ಅನ್ನು ಕೊಟ್ಟಿದ್ದರು. ಹಚ್ಚಿದ ಮುಲಾಮು ಕರುವಿನ ಹೊಟ್ಟೆಗೆ ಹೋಗದಂತೆ ನೋಡಿಕೊಳ್ಳಿ ಅಂತಲೂ ಎಚ್ಚರಿಸಿದ್ದರು. ಆದರೆ ಕಡಿಮೆಯಂತು ಆಗಿಲ್ಲ ಅಂತ ಬೇಸರಿಸಿದರು.
ನೀವು ಯಾವ ಹಿಂಡಿಯನ್ನು ಹಾಕುವಿರಿ ಅಂತ ಕೇಳಿದೆ . ಸಂತುಲಿತ ಪಶು ಆಹಾರ ಅಂತಂದರು. ಹಳೆಯ ಅನುಭವದ ನನ್ನ ಮನ ಜಾಗೃತಿಗೊಂಡಿತು. 15 ದಿನ ಹಿಂಡಿಯನ್ನು ಬಿಟ್ಟು ನೋಡಿ. ನೆಲಗಡಲೆ ಹಿಂಡಿ ಇತ್ಯಾದಿಯಾಗಿ ಸಹಜ ಆಹಾರವನ್ನು ಕೊಡಿ ಅಂತ ಸೂಚಿಸಿದೆ.
ಹಿಂಡಿಯ ಪರಿಣಾಮ ಆಗಿರಲಾರದು ಅಂತ ಡಾಕ್ಟರ್ ಗಳು ಹೇಳುವರು ಅಂತ ಅಂದಿದ್ದರು. ಆದರೂ ಬಿಟ್ಟು ನೋಡುವೆ ಅಂತ ಹೇಳಿದ್ದರು.
15 ದಿನದ ನಂತರ ಫೋನಾಯಿಸಿದೆ. ಸದಾಶಿವಣ್ಣ ಪೂರ್ತಿ ಗುಣ ಆಗಿದೆ. ಹಾಲು ಕರೆಯಲು ಸರಿಯಾಗಿ ಬಿಡುತ್ತದೆ. ಆದರೆ ಯಾಕೆ ಡಾಕ್ಟರ್ ಗಳು ಒಬ್ಬರೂ ಇದನ್ನು ಹೇಳಿಲ್ಲ ಅಂತ ಆಶ್ಚರ್ಯ ವ್ಯಕ್ತಪಡಿಸಿದರು.
ಅದು ಗುಣವಾದದ್ದು ಆಶ್ಚರ್ಯ ಏನಿಲ್ಲ. ನೈಜ ಆಹಾರವಲ್ಲದ ಯೂರಿಯಾವನ್ನು ಹಿಂಡಿಯ ಖರ್ಚನ್ನು ಕಡಿಮೆಗೊಳಿಸಲು ಬಳಸುವ ದುಷ್ಟ ಯೋಚನೆಯ ಫಲ ಇದು. ದನಗಳ ಆರೋಗ್ಯವನ್ನು, ಅವುಗಳ ಹಾಲಿನ ಮುಖಾಂತರ ಮನುಷ್ಯನ ಆರೋಗ್ಯವನ್ನು ಹಾಳು ಮಾಡುವ ಇಂತಹ ಮಿಶ್ರಣಗಳನ್ನು ಇನ್ನೂ ಇನ್ನೂ ಶಿಫಾರಸು ಮಾಡುವರಲ್ಲ ಅದು ನಿಜವಾದ ಆಶ್ಚರ್ಯ ಅಂತಂದೆ. ಹತ್ತು ಜನರಿಗೆ ಇನ್ನೂ ಹೇಳೋಣ. ದನಗಳ ಆಹಾರದಲ್ಲಿ ಯೂರಿಯಾಗಳಿಂದ ದೂರವಿರೋಣ ಎಂಬ ವಿಷಯವನ್ನು ಹಂಚೋಣ. ಸಹಜ ಆಹಾರವನ್ನೇ ನೀಡೋಣ.
ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ…
ಮಯೂರ.ಕೆ, 7ನೇ ತರಗತಿ, ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ | -…
ಜುಲೈ 9 ರಂದು ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶವ್ಯಾಪಿ…
ಮಗು ಗರ್ಭದಲ್ಲಿದ್ದಾಗಲೇ ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ಕೆಲವು ವೈಜ್ಞಾನಿಕ ಅಧ್ಯಯನಗಳು ಹೇಳಿವೆ.…
ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಸರ್ವೇ ಸಾಮಾನ್ಯ. ಹೀಗೆ ಹಾಸ್ಟೆಲ್ ಇದೆ ಅಂದ…
ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ…