ಕಾಡಿನ ಬೀಜ(Tree seeds) ಸಂಗ್ರಹಿಸಿ ಅರಣ್ಯ(Forest) ನರ್ಸರಿಗಳಲ್ಲಿ(Nursery) ಸಸಿ(Plant) ಬೆಳೆಸುವುದೇ ಜೀವ ಕಾಯಕದ ಭಾಗವಾಗಿ ಪ್ರತೀ ವರ್ಷ ಲಕ್ಷಾಂತರ ಸಸಿ ಬೆಳೆಸುವ ಎಲ್ಲ ಬಂಧುಗಳಿಗೆ ವಿಶ್ವ ಪರಿಸರ ದಿನದ ಮೊದಲ ಶುಭಾಶಯಗಳು(World Environment Day). ಇಡೀ ದೇಶಕ್ಕೆ ಮಾದರಿ ಆಗುವಂತೆ ಕೇವಲ 300ಮಿಲಿ ಮೀಟರ್ ಮಳೆ(Rain) ಸುರಿಯುವ ಚಿತ್ರದುರ್ಗ(Chitradurga) ರಾಂಪುರ ಬಾಂಡ್ರಾವಿಯಲ್ಲಿ ಸಾವಿರಾರು ಎಕರೆ ಕಲ್ಲು ಗುಡ್ಡವನ್ನು ಕಮರ ಸೇರಿದಂತೆ ವಿವಿಧ ಸಸ್ಯ ಸಂಕುಲಗಳನ್ನು ರಕ್ಷಣೆ ಮಾತ್ರದಿಂದ ಬೆಳೆಸಿದ ಫಾರೆಸ್ಟ್ ಗಾರ್ಡ್ ಶ್ರೀ ನಾಗಪ್ಪ ಜುಮ್ಮಣ್ಣ ಮೇಟಿಯವರಿಗೆ ಹಸಿರು ನಮನಗಳು. ಈಗ ಇವರಿಲ್ಲ,. ಇವರ ಒಡನಾಟ, ಕಾಡು ಸುತ್ತಾಟದ ನೆನಪುಗಳು ಹಸಿರಾಗಿವೆ.
ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ಪರಿಸರದ ದೇಸಿ ಜ್ಞಾನ ಹಂಚುವ ಕಾರ್ಯಕ್ಕೆ ನಮ್ಮ ಊರು ಕಳವೆಯಲ್ಲಿ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಗ್ರಾಮ ಅರಣ್ಯ ಸಮಿತಿ, ಕರ್ನಾಟಕ ಅರಣ್ಯ ಇಲಾಖೆ ಶಿರಸಿ ವಿಭಾಗ, ವಿವಿಧ ದಾನಿಗಳ ಸಹಾಯದಿಂದ ಆರಂಭವಾಯಿತು. ಈ ಹತ್ತು ವರ್ಷಗಳಲ್ಲಿ ಇಲ್ಲಿಗೆ ಬಂದು ಪರಿಸರದ ಮಾತು, ಪ್ರಾತ್ಯಕ್ಷಿಕೆ ವೀಕ್ಷಿಸಿದ ನಾಡಿನ ಲಕ್ಷಾಂತರ ಆಸಕ್ತರಿಗೆ, ನಿಮ್ಮ ಪರಿಸರ ಪ್ರೀತಿಗೆ ನಮನಗಳು. ಪರಿಸರ ಸಂರಕ್ಷಣೆ ಯಶಸ್ಸು ನಾವು ನೆಟ್ಟ ಗಿಡ ಮರವಾಗುವುದು ಮಾತ್ರವಲ್ಲ ಆ ಮರದ ಕೆಳಗಡೆ ನಾವು ನೆಟ್ಟ ಮರದ ಬೀಜಗಳಿಂದ ಸಸಿ ಜನಿಸುವುದು, ಆಗ ಅರಣ್ಯೀಕರಣದಲ್ಲಿ ಶಿಸ್ತಿನ ಸಾಲು ತಪ್ಪಿ ಕಾಡು ಕೂಡುವ ಕ್ರಿಯೆ ಮಹತ್ವ ಪಡೆಯುತ್ತದೆ.
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್‌ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…
ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…