ಎಷ್ಟೋ ಬಾರಿ ಈ ಬಗ್ಗೆ ಬರೆಯಬೇಕು ಎಂಬ ಆಸೆ ಬಂದಿತ್ತು.ಆದರೆ ಇದು ನನಗೆ ಸಂಬಂಧ ಪಟ್ಟದ್ದಲ್ಲ ಎಂದು ಸುಮ್ಮನಾದೆ. ಮೊನ್ನೆ ಒಂದು ವಾರದ ಹಿಂದೆ ಓರ್ವ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿಯಿಂದ ಬರೆಯುವ ಪತ್ರಕರ್ತ ನನ್ನಲ್ಲಿ ತನ್ನ ಅಳಲನ್ನು ತೋಡಿಕೊಂಡ ಪ್ರಕಾರ ತಾನು ಕೃಷಿಕರ ಪರವಾಗಿ ಆಗಿಂದಾಗ್ಗೆ ಬರಹಗಳನ್ನು ಬರೆಯುತ್ತೇನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಬಗ್ಗೆ ಅನಾವಶ್ಯಕ ಕಮ್ಮೆಂಟುಗಳು ಬರುತ್ತಿವೆ.ಇದು ನನಗೆ ಮುಂದೆ ಬರೆಯುವುದೇ ಬೇಡ ಎನಿಸುತ್ತಿದೆ ಎಂದು.…..ಮುಂದೆ ಓದಿ….
ಒಂದಿಪ್ಪತ್ತು ವರ್ಷಗಳ ಹಿಂದೆ ಶಿರಸಿಯ ಓರ್ವ ಅಡಿಕೆಯ ಮೌಲ್ಯ ವರ್ಧನೆ ಕುರಿತು ಸಂಶೋಧನೆ ಮಾಡುತ್ತಿದ್ದರು, ಹಿರಿಯರು ತಮಗೆ ಬಂದ ಕಮೆಂಟುಗಳ ಬಗ್ಗೆ ಇದೇ ರೀತಿ ಹೇಳಿದ್ದರು.ರಾಜ್ಯದ ಹಲವು ಕೃಷಿ ಸಂಶೋಧಕರು ತಮ್ಮ ಸಂಶೋಧನೆಗಳ ಫಲಿತಾಂಶಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದಾಗ ಅವರಿಗೂ ಇದೇ ರೀತಿಯ ಅನುಭವ ಆದ್ದನ್ನು ನನ್ನಲ್ಲಿ ಹಂಚಿಕೊಂಡಿದ್ದರು.ಇದರಿಂದಾಗಿ ಅವರು ಬರೆಯುವುದನ್ನೇ ನಿಲ್ಲಿಸಿದರು.ಅವರಿಂದು ಏನಿದ್ದರೂ ಆಂಗ್ಲ ಭಾಷೆಯಲ್ಲಿ ಮಾತ್ರ ಬರೆಯುತ್ತಿದ್ದಾರೆ.
ನಾನು ಈ ಕ್ಷೇತ್ರದ ಬಗ್ಗೆ ಬರೆಯುವುದು ಆರಂಭ ಮಾಡಿ 42 ವರ್ಷಗಳ ಕಳೆದವು. ನನಗೂ ಮೇಲೆ ತಿಳಿಸಿದ ಅನುಭವ ಹಲವು ಬಾರಿ ಆಗಿದೆ. ಹಲವು ಬೆದರಿಕೆ ಕರೆಗಳೂ ಬಂದಿವೆ. ಆದರೆ ನನ್ನನ್ನು ಬೆಳೆಸಿದ ಈ ಕ್ಷೇತ್ರದ ಬಗ್ಗೆ ಬರೆಯುವುದು ಬಿಟ್ಟಿಲ್ಲ.ಇದನ್ನೇ ನಾನು ಅವರಿಗೆ ತಿಳಿ ಹೇಳಿದೆ. ಕಲಿತ ವಿದ್ಯೆಯನ್ನು ನಮ್ಮ ಮೂಲದ ಒಳಿತಿಗಾಗಿ ನಾವು ಬಳಸಬೇಕೆಂಬ ಕಿವಿ ಮಾತನ್ನು ಹೇಳಿದೆ.
ಕೃಷಿಕರು ಅಲ್ಲದ ಅದೆಷ್ಟೋ ಬರಹಗಾರರು, ಪತ್ರಕರ್ತರು ಹಾಗೂ ಸಂಶೋಧಕರು ಕೃಷಿಕರ ಬಗ್ಗೆ ಕಾಳಜಿಯಿಂದ ಬರೆದವರಿದ್ದಾರೆ, ಬರೆಯುತ್ತಲೇ ಇದ್ದಾರೆ. ಇವರಿಗೂ ಇದೇ ಅನುಭವ.ಇಲ್ಲೂ ಅವರಿಗೆ ನಾನು ಹೇಳಿದ್ದೊಂದೇ ಮಾತು ಅವಹೇಳನ ಯಾವತ್ತೂ ಒಳ್ಳೆಯದು, ಅವು ನಮ್ಮ ಬೆಳವಣಿಗೆಗೆ ಪೂರಕ ಎಂಬುದು.
ಬರವಣಿಗೆಯಿಂದ ಆಗುವ ಲಾಭಗಳೇನು?:
ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳು ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಿಭಾಗಗಳು ಮಾದ್ಯಮಗಳಲ್ಲಿ ಬಂದ ಲೇಖನಗಳು ಮತ್ತು ವರದಿಗಳು ಮಾತ್ರವಲ್ಲದೆ ಸಂಶೋಧಕರ ಲೇಖನಗಳು ಹಾಗೂ ಅಭಿಪ್ರಾಯಗಳನ್ನು ಪಡೆದು ಪರಿಹಾರಗಳನ್ನು ಸೂಚಿಸುತ್ತವೆ.
ಇವಲ್ಲದೆ ಇನ್ನಷ್ಟು ಪ್ರಯೋಜನೆಗಳು ಕೃಷಿ ಕ್ಷೇತಕ್ಕಿದ್ದು ಈ ನಿಟ್ಟಿನಲ್ಲಿ ನಾವು ಮೇಲೆ ಹೆಸರಿಸಿದವರನ್ನು ಪ್ರೋತ್ಸಾಹಿಸಬೇಕು.ಎಲ್ಲಾ ಬರಹಗಳು ಕೃಷಿಕರ ಅನುಭವ, ಅವರ ಹಿತಾಸಕ್ತಿಗೆ ಪೂರಕ ಆಗಿರದೆ ಇದ್ದರೂ ಇವರನ್ನು ಹೀಯಾಳಿಸುವುದು ಇಲ್ಲವೇ ಆಪಾದನೆ ಮಾಡುವುದು ಇತ್ಯಾದಿಗಳನ್ನು ಇನ್ನಾದರೂ ಬಿಡಬೇಕು. ನಮ್ಮಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ ಸಂದರ್ಭದಲ್ಲಿ ಕನಿಷ್ಟ ಬರಹಗಾರರು, ಪತ್ರಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಇರುವ ಮಾಹಿತಿದಾರರು, ಸಂಶೋಧಕರು ಇವರನ್ನೆಲ್ಲ ಪ್ರೋತ್ಸಾಹಿಸೋಣ. ಯಾವುದೇ ಬರಹಗಳು ಪುಸ್ತಕದ ಬದನೇಕಾಯಿ ಅಲ್ಲ, ಅವಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿ. ಇನ್ನು ಕೆಲಸವಿಲ್ಲದೆ ಯಾರೂ ಕೃಷಿಕರ ಪರವಾಗಿ ಧ್ವನಿ ಎತ್ತುವುದಿಲ್ಲ. ಪ್ರತೀ ಒಂದು ಉದ್ಯೋಗ ಇಲ್ಲವೇ ಕೆಲಸದಲ್ಲಿ ಅದರದ್ದೇ ಆದ ತತ್ವಗಳಿರುತ್ತದೆ, ನಿಯಮಗಳಿರುತ್ತವೆ ಇವನ್ನ ಮೀರಿ ಬರಹಗಳು ಬರುವುದು ಅಪರೂಪ. ಬಹು ಪಾಲು ಬರಹಗಾರರು, ಪತ್ರಕರ್ತರು ಹಾಗೂ ಸಂಶೋಧಕರು ಅಧ್ಯಯನ ಮಾಡಿಯೇ ಬರಹಗಳನ್ನು ಪ್ರಕಟಿಸುವುದು ರೂಢಿ. ಆದ್ದರಿಂದ ಇವರನ್ನು ಅನಾವಶ್ಯಕವಾಗಿ ಕಾಮೆಂಟ್ ಮಾಡುವುದನ್ನು ಇನ್ನಾದರೂ ನಿಲ್ಲಿಸಿ ಕೃಷಿಪರ ಕಾಳಜಿ ಇರುವ ಇವರನ್ನು ಬೆಂಬಲಿಸಿ ಕೃಷಿ ಕ್ಷೇತ್ರದ ಅಭಿವೃದ್ಧಿ,ಬೆಳವಣಿಗೆ ಹಾಗೂ ಪ್ರಗತಿಯನ್ನು ಸಾಧಿಸೋಣ. ಲ್ಯಾಬ್ ಟೂ ಲ್ಯಾಂಡ್ ಯಾಕಾಗುವುದಿಲ್ಲ ಎಂಬುದಕ್ಕೂ ಮೇಲೆ ತಿಳಿಸಿದ ಮಾಹಿತಿಗಳೇ ಕಾರಣ.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…