Advertisement
ಸುದ್ದಿಗಳು

ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ರೈತ ಚಂದ್ರಣ್ಣ ನಾಗನಹಳ್ಳಿ

Share

ಕೃಷಿಯಲ್ಲಿ ಕಷ್ಟಪಡುವುದಕ್ಕಿಂತ ಹೊರಗೆಲ್ಲೋ ಕೆಲಸಕ್ಕೆ ಹೋಗುವುದೇ ಲೇಸು ಎನ್ನುವ ಜನರ ಮಧ್ಯೆ ಸಮಗ್ರ ಕೃಷಿಯಲ್ಲಿ ಯಶಸ್ಸು ಗಳಿದ ರೈತ ಚಂದ್ರಣ್ಣ ನಾಗೇನಹಳ್ಳಿ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಐರಾಣಿ ಗ್ರಾಮದ ರೈತ ಚಂದ್ರಣ್ಣ ನಾಗೇನಹಳ್ಳಿಅವರ ಮಿಶ್ರ ಬೇಸಾಯ ಹಲವು ರೈತರಿಗೆ ಮಾದರಿಯಾಗಿದೆ.

ಚಂದ್ರಣ್ಣ ನಾಗೇನಹಳ್ಳಿ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಹಾಗೂ ನೈಸರ್ಗಿಕ ಬೆಳೆಗಳನ್ನು ಬೆಳೆದು ತನ್ನ ಜಮೀನಿನನ್ನು ಹಸಿರುಮಯವಾಗಿ ಪರಿವರ್ತಿಸಿದ್ದಾರೆ. ಜಮೀನಿನಲ್ಲಿ ಅಡಿಕೆ, ತೆಂಗು, ರಾಮಫಲ, ಕಿತ್ತಳೆ, ನೇರಳೆ, ಲಿಂಬೆ ಬೆಳೆದಿದ್ದಾರೆ. ಸಾರಜನಕ ಸ್ಥರೀಕರಣಕ್ಕಾಗಿ ಗ್ಲೀರಿಸೀಡಿಯಾಗಳನ್ನು ಸುತ್ತಲೂ ಬೆಳೆಸಿದ್ದಾರೆ. ಜತೆಗೆ ಜಾಯಿಕಾಯಿ, ಕರಿಮೆಣಸು, ವೀಳ್ಯದೆಲೆ, ಏಲಕ್ಕಿ, ಬಾಳೆ, ಲವಂಗ, ಹಲಸು, ಪೇರಳೆ, ಮಾವು, ಅಮಟೆಕಾಯಿ, ಸಾಂಬಾರು ಪದಾರ್ಥದಂತಹ ಬೆಳೆಗಳನ್ನು ನೈಸರ್ಗಿಕ ಹಾಗೂ ಸಾವಯವ ಋಷಿಯನ್ನು ಮಾಡಿ ಯಶಸ್ಸು ಕಂಡಿದ್ದಾರೆ.

ಜಮೀನಿನಲಿ ಬೆಳೆದ ಬೆಳೆಗಳಿಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬಳಕೆ ಮಾಡುವುದಿಲ್ಲ. ಬದಲಾಗಿ ಗಿಡಮರಗಳಿಂದ ಉದುರಿದ ಎಲೆಗಳನ್ನೇ ಗೊಬ್ಬರವಾಗಿ ಬಳಕೆ ಮಾಡಿದ್ದಾರೆ. ಎರೆಹುಳು ತೊಟ್ಟಿ ಮಾಡಿಕೊಂಡು ಗೊಬ್ಬರ ತಯಾರಿ ಮಾಡಿದ್ದಾರೆ. ಇವರು ತನ್ನ ಕೃಷಿಯಿಂದ ಕೇವಲ ಅಡಿಕೆ ಬೆಳೆ ಒಂದರಿಂದಲೇ ವರ್ಷಕ್ಕೆ 10 ರಿಂದ 14 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಉಳಿತಾಯ ಬೆಳೆಗಳಿಂದ ಸಾಕಷ್ಟು ಆದಾಯ ಬರುವುದಾಗಿ ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

7 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

7 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

7 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

7 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

1 day ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

1 day ago