Advertisement
ವಿಜ್ಞಾನ

#Chandrayaan3 | ಭೂಮಿಯ ಕಕ್ಷೆ ಬಿಟ್ಟು ಯಶಸ್ವಿಯಾದ Chandrayaan3 | ಮುಂದಿನ ನಿಲ್ದಾಣ ಚಂದಿರನ ಅಂಗಳನತ್ತ ಸಾಗುತ್ತಿರುವ ಚಂದ್ರಯಾನ-3 |

Share

ಭಾರತದ ಮಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ಪೂರೈಸಿದೆ. ಚಂದ್ರಯಾನ-3 #Chandrayana-3 ಭೂಮಿಯ ಕಕ್ಷೆಯನ್ನು ಯಶಸ್ವಿಯಾಗಿ ಬಿಟ್ಟಿದ್ದು, ಈಗ ಅದರ ಮುಂದಿನ ನಿಲ್ದಾಣವೇ ಚಂದ್ರಲೋಕ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ#ISRO ಮಂಗಳವಾರ ಚಂದ್ರಯಾನ-3 ಅನ್ನು ಟ್ರಾನ್ಸ್‌ಲೂನಾರ್ ಕಕ್ಷೆಯಲ್ಲಿ ಇರಿಸಲಾಗಿದೆ ಎಂದು ಹೇಳಿದೆ. 

‘ಚಂದ್ರಯಾನ-3 ಭೂಮಿಯ ಸುತ್ತಲಿನ ತನ್ನ ಸುತ್ತಾಟವನ್ನು ಪೂರ್ಣಗೊಳಿಸಿದ್ದು, ಚಂದ್ರನೆಡೆ ಚಲನೆ ಆರಂಭಿಸಿದೆ’ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ‘ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್-ಐಎಸ್‌ಆರ್‌ಎಸಿ ಯಶಸ್ವಿ ಪೆರಿಜಿ-ಫೈರಿಂಗ್ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಇಸ್ರೋ ಚಂದ್ರಯಾನ-3 ಅನ್ನು ಟ್ರಾನ್ಸ್‌ಲೂನಾರ್ ಕಕ್ಷೆಯಲ್ಲಿ ಇರಿಸಿದೆ. ಚಂದ್ರಯಾನ-3 ಚಂದ್ರನ ಬಳಿ ತಲುಪುತ್ತಿದ್ದಂತೆಯೇ ಅದನ್ನು ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಸೇರಿಸಲು ಯೋಜಿಸಲಾಗಿದೆ ಎಂದು ಇಸ್ರೋ ಹೇಳಿದೆ. ಮಂಗಳವಾರದ ಟ್ರಾನ್ಸ್-ಲೂನಾರ್ ಇಂಜೆಕ್ಷನ್ (ಟಿಎಲ್‌ಐ) ನಂತರ, ಚಂದ್ರಯಾನ-3 ಭೂಮಿಯ ಕಕ್ಷೆಯಿಂದ ಹೊರಬಂದಿದೆ ಮತ್ತು ಈಗ ಅದನ್ನು ಚಂದ್ರನ ಹತ್ತಿರಕ್ಕೆ ತೆರಳುವ ಮಾರ್ಗದಲ್ಲಿ ಚಲಿಸುತ್ತಿದೆ. ಇಸ್ರೋ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಮೃದುವಾಗಿ ಇಳಿಸಲು ಪ್ರಯತ್ನಿಸುತ್ತದೆ. ಈ ಹಿಂದೆ, ಜುಲೈ 14 ರಂದು ಚಂದ್ರಯಾನ-3 ಮಿಷನ್ ಉಡಾವಣೆಯಾದ ನಂತರ, ಅದರ ಕಕ್ಷೆಯನ್ನು ನಿರಂತರವಾಗಿ ಐದು ಬಾರಿ ಹೆಚ್ಚಿಸಲಾಗಿತ್ತು.

LVM-M4 ರಾಕೆಟ್‌ನ ಮೂಲಕ ಚಂದ್ರನಿಗೆ ಭಾರತದ ಮೂರನೇ ಮಿಷನ್ ಚಂದ್ರಯಾನ-3 ರ ಯಶಸ್ವಿ ಉಡಾವಣೆಯು ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ದೇಶದ ಮೊದಲ ಕಾರ್ಯಕ್ರಮಕ್ಕೆ ಪ್ರಮುಖ ಶಕ್ತಿ ತುಂಬಿದೆ. ಈ ರಾಕೆಟ್ ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್ಗಾಗಿ ಬಳಸಲ್ಪಡುತ್ತದೆ. ಇಸ್ರೋ ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ಗಗನ್‌ಯಾನ್‌ನ ಯಶಸ್ವಿ ಉಡಾವಣೆಗಾಗಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಅಭಿಯಾನದ ಅಡಿಯಲ್ಲಿ, ಮೂವರನ್ನು 3 ದಿನಗಳ ಕಾಲ ಭೂಮಿಯ 400 ಕಿಲೋಮೀಟರ್ ಕಕ್ಷೆಗೆ ಕರೆದೊಯ್ಯಲಾಗುತ್ತದೆ ಮತ್ತು ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ತರಲಾಗುತ್ತದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳ ಪ್ರಕಾರ, ಜುಲೈ 14 ರಂದು ಚಂದ್ರಯಾನ-3 ಅನ್ನು ಹೊತ್ತ 44.3 ಮೀಟರ್ ಉದ್ದದ LVM-3 ರಾಕೆಟ್ ‘ಮಾನವನನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಕೊಂಡೊಯ್ಯುವ’ ಸಾಮರ್ಥ್ಯದ ರಾಕೆಟ್ ಆಗಿದೆ ಎನ್ನಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

19 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

19 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

20 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

20 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

20 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

2 days ago