ಗ್ರಾಹಕರ ಜೇಬಿಗೆ ಇಂದಿನಿಂದ ಮತ್ತೆ ಕತ್ತರಿ ಬೀಳಲಿದೆ. ಇಂದಿನಿಂದ ಕರ್ನಾಟಕದಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿನ #NandiniMilk ದರ 3 ರೂಪಾಯಿ ಹೆಚ್ಚಳವಾಗಿದೆ. ಜುಲೈ 21 ರಂದು ನಡೆದ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ #KMF, ಇಂದಿನಿಂದ ಪ್ರತಿ ಲೀಟರ್ ನಂದಿನಿ ಹಾಲಿನ ದರವನ್ನು 3 ರೂಪಾಯಿ ಹೆಚ್ಚಳ ಮಾಡಿದೆ.
ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ ಎಂದು ಕೆಎಂಎಫ್ ಎಂಡಿ ಜಗದೀಶ್ ತಿಳಿಸಿದ್ದಾರೆ. 39 ರೂಪಾಯಿ ಇದ್ದ ನಂದಿನಿ ಹಾಲಿನ ದರ ಈಗ 42 ರೂ. ಆಗಿದೆ. ಆಂಧ್ರ ಪ್ರದೇಶದಲ್ಲಿ ಲೀಟರ್ ಹಾಲಿಗೆ 56 ರೂ., ಕೇರಳದಲ್ಲಿ 51 ರೂ. ಇದೆ. ಮಹಾರಾಷ್ಟ್ರದಲ್ಲಿ 54 ರೂ., ತಮಿಳುನಾಡಿನಲ್ಲಿ ಹಾಲಿಗೆ 44 ರೂ. ಇದೆ ಎಂದು ಮಾಹಿತಿ ನೀಡಿದರು. ದರ ಕಡಿಮೆ ಹಿನ್ನೆಲೆಯಲ್ಲಿ ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ರೈತರ ಆದಾಯವನ್ನು ಗಮನದಲ್ಲಿಟ್ಟುಕೊಂಡು ದರ ಹೆಚ್ಚಳ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಕೆಎಂಎಫ್ ಎಂಡಿ ಜಗದೀಶ್ ಮನವಿ ಮಾಡಿದರು.
ಯಾವ್ಯಾವ ಪಾಕೇಟ್ ಹಾಲು ಎಷ್ಟಿದೆ?: ಟೋನ್ಡ್ ಹಾಲು ನೀಲಿ ಪಾಕೆಟ್‌ನ ದರ ಪ್ರತಿ ಲೀಟರ್ ಹಿಂದೆ 39 ರೂಪಾಯಿ ಇತ್ತು. ಪರಿಷ್ಕೃತ ದರ 42 ರೂಪಾಯಿಗೆ ಹೆಚ್ಚಳವಾಗಿದೆ. ಹಾಗೇ ಹೋಮೋಜಿನೈಸ್ಡ್ ಹಸುವಿನ ಹಾಲು ಹಿಂದೆ ಪ್ರತಿ ಲೀಟರ್‌ಗೆ 40 ರೂಪಾಯಿ ಇತ್ತು.. ಇದು ಇಂದಿನಿಂದ 43 ರೂಪಾಯಿ ಆಗಲಿದೆ. ಅದೇ ರೀತಿ ಶುಭಂ ಅಂದ್ರೆ ಕೇಸರಿ ಪಾಕೆಟ್ ಅಥವಾ ಸ್ಪೆಷಲ್ ಹಾಲಿನ ದರ ಹಿಂದೆ ಪ್ರತಿ ಲೀಟರ್‌ಗೆ 45 ರೂಪಾಯಿ ಇದ್ದು, ಪರಿಷ್ಕೃತ ದರ 48 ರೂಪಾಯಿಗೆ ಹೆಚ್ಚಳವಾಗಿದೆ. ಇನ್ನು ಮೊಸರು ಪ್ರತಿ ಲೀಟರ್‌ಗೆ ಹಿಂದೆ 47 ರೂಪಾಯಿ ಇತ್ತು. ಇಂದಿನಿಂದ ಪ್ರತಿ ಲೀಟರ್ ಮೊಸರಿನ ಬೆಲೆ 50 ರೂಪಾಯಿಗೆ ಹೆಚ್ಚಳವಾಗಿದೆ. ಉಳಿದಂತೆ 200 ಮಿಲಿ ಪಾಕೆಟ್‌ನ ನಂದಿನಿ ಮಜ್ಜಿಗೆ ಬೆಲೆ ಹಿಂದೆ 7 ರೂಪಾಯಿ ಇತ್ತು.. ಪರಿಷ್ಕೃತ ದರ 9 ರೂಪಾಯಿಗೆ ಹೆಚ್ಚಳವಾಗಿದೆ.
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…
ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…