7.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಆಧಾರ್ ದೃಢೀಕರಣವನ್ನು ಬಳಸಿಕೊಂಡು ಚಾರ್ ಧಾಮ್ ಮತ್ತು ಹೇಮಕುಂಡ್ ಸಾಹಿಬ್ ಯಾತ್ರೆ 2025 ಕ್ಕೆ ನೋಂದಾಯಿಸಿಕೊಂಡಿದ್ದಾರೆ.ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಈ ಮಹತ್ವದ ತೀರ್ಥಯಾತ್ರೆಗೆ ಆಧಾರ್ ಆಧಾರಿತ ನೋಂದಣಿಯನ್ನು ವ್ಯವಸ್ಥೆ ಮಾಡಿದೆ. ನೋಂದಣಿಗಳು ಮಾರ್ಚ್ 20 ರಿಂದ ಪ್ರಾರಂಭವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವಾಲಯವು , ಆಧಾರ್ ಬಳಿಕ ನೋಂದಣಿಯ ಕ್ರಮವು ನಕಲನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಯಾತ್ರಿಕರಿಗೆ ಯಾತ್ರೆಯನ್ನು ನಡೆಸುವ ಅವಕಾಶವನ್ನು ನೀಡುತ್ತದೆ ಎಂದು ಹೇಳಿದೆ. ಆಧಾರ್ ಆಧಾರಿತ ಡಿಜಿಟಲ್ ಪರಿಶೀಲನೆಯು ನೋಂದಣಿ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ದಾಖಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಆಧಾರ್ ಆಧಾರಿತ ಆನ್‌ಲೈನ್ ನೋಂದಣಿಯೊಂದಿಗೆ, ಅಧಿಕಾರಿಗಳು ಯಾತ್ರಿಕರ ಚಲನವಲನಗಳನ್ನು ಮೇಲ್ವಿಚಾರಣೆ ನಡೆಸಲು ಕೂಡಾ ಸಾಧ್ಯವಾಗುತ್ತದೆ. ದೇವಾಲಯಗಳಲ್ಲಿ ಜನದಟ್ಟಣೆಯನ್ನು ತಪ್ಪಿಸಲು, ಹವಾಮಾನ ಸಂಬಂಧಿತ ಮಾಹಿತಿಯನ್ನು ಕೂಡಾ ಸುಧಾರಿಸಬಹುದು, ಮಾಹಿತಿ ನೀಡಲು ಸಾಧ್ಯವಿದೆ. ಆಧಾರ್-ಲಿಂಕ್ಡ್ ನೋಂದಣಿಯು ನೋಂದಾಯಿತ ಯಾತ್ರಿಕರ ನಿಜವಾದ ಸಂಖ್ಯೆಯ ಆಧಾರದ ಮೇಲೆ ವಸತಿ, ಸಾರಿಗೆ, ಆಹಾರ ಮತ್ತು ವೈದ್ಯಕೀಯ ನೆರವಿನ ಉತ್ತಮ ಯೋಜನೆ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ, ಯಾತ್ರಿಕರು ಮತ್ತು ಅಧಿಕಾರಿಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಸುಧಾರಣೆ, ತುರ್ತು ಸಂದರ್ಭಗಳನ್ನು ಉತ್ತಮವಾಗಿ ಪರಿಹರಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…
ಕಡಬ ತಾಲೂಕಿನ ಯೇನೆಕಲ್ಲು ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿದೆ. ಈ ಸಂದರ್ಭಹವ್ಯಾಸಿ…
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿದ್ದು, ಹಸಿರು ಪರಿವರ್ತನೆಯಂತಹ ಕ್ಷೇತ್ರದಲ್ಲಿ…
ಈಗಿನಂತೆ ಎ.1 ರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ…