ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ , ವಿವಿಧ ವಿಶೇಷಣೆ, ಅಲಂಕಾರಗಳಿಂದ ವಿದ್ವತ್ ತೋರ್ಪಡಿಸಿ, ಪರೋಕ್ಷವಾಗಿ ಇನ್ನೊಂದು ಮಠವನ್ನು, ಅಲ್ಲಿನ ಸ್ವಾಮೀಜಿಗಳನ್ನು ವ್ಯಂಗ್ಯವಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಕಲಾವಿದ, ವಿದ್ವಾಂಸರೊಬ್ಬರು ನಂತರ ಅದೇ ಮಠಕ್ಕೆ ತೆರಳಿ ಸ್ವಾಮೀಜಿಗಳಿಗೆ ಅಡ್ಡಬಿದ್ದು, ಮಂತ್ರಾಕ್ಷತೆ ಪಡೆದ ಘಟನೆ ನಡೆದಿದೆ.
ಕಾಸರಗೋಡು ಮೂಲದ ಪ್ರಸಿದ್ಧ ಮಠವೊಂದರಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ತಾಳಮದ್ದಲೆ ಸಪ್ತಾಹವೂ ಒಂದು. ಆ ಸಪ್ತಾಹದ ಒಂದು ದಿನ ಇಬ್ಬರು”ವಿದ್ವಾಂಸರು” ಚಾತುರ್ಮಾಸ್ಯ ಹಾಗೂ ಇನ್ನೊಂದು ಮಠವನ್ನು ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದರು.ತಾಳಮದ್ದಲೆ ಅಂದರೆ ಮಾತಿನ ಮಂಟಪ, ವಿದ್ವತ್ ಪ್ರದರ್ಶನ. ಇಲ್ಲಿ ವಿದ್ವತ್ ಪ್ರದರ್ಶನ ಸ್ವಲ್ಪ ಹೆಚ್ಚೇ ನಡೆದಿತ್ತು. ಇಲ್ಲಿ ಒಬ್ಬರು ಚಾತುರ್ಮಾಸ್ಯವನ್ನು ವ್ಯಂಗ್ಯ ಮಾಡಿದ್ದರೆ ಇನ್ನೊಬ್ಬರು, ಪಾತ್ರದಲ್ಲಿ ವ್ಯಕ್ತಪಡಿಸಬೇಕಾದ ಅಭಿವ್ಯಕ್ತಿ, ಪಾತ್ರದ ಪರಿಚಯಕ್ಕಿಂತ ಸ್ವಲ್ಪ ಹೆಚ್ಚೇ “ವಿದ್ವತ್” ಪ್ರದರ್ಶನ ಮಾಡಿದರು. ಈ ವಿಡಿಯೋ ವೈರಲ್ ಆಗಿತ್ತು. ಮೊದಲೇ ಆ ಮಠದ ಜೊತೆಗೆ ಅಷ್ಟಷ್ಟಕ್ಕೇ ಇದ್ದ ಈ “ವಿದ್ವಾನ್” ಪರೋಕ್ಷವಾಗಿ ಇಲ್ಲೂ ವ್ಯಂಗ್ಯ ಮಾಡಿದ್ದರು. ಇದು ಭಕ್ತರ ನಡುವೆ ಚರ್ಚೆಗೆ ಕಾರಣವಾಯಿತು. ಕೊನೆಗೆ ವ್ಯಂಗ್ಯವಾಡಿದ ಮಠ ಹಾಗೂ ಸ್ವಾಮೀಜಿ ಅವರಲ್ಲಿಗೆ ತೆರಳಿ ಅಡ್ಡಬಿದ್ದು, ಮಂತ್ರಾಕ್ಷತೆಯನ್ನು ಪಡೆದುಕೊಂಡಿರುವ ಈ ಫೋಟೊ ವೈರಲ್ ಆಗಿದೆ. ಆದರೆ ಚಾತುರ್ಮಾಸ್ಯವನ್ನು ವ್ಯಂಗ್ಯ ಮಾಡಿದವರು ಆ ಫೋಟೊದಲ್ಲಿ ಕಾಣಲಿಲ್ಲ..!



