ನಗರದಲ್ಲಿ ಮಾತ್ರಾ ಕಂಡುಬರುತ್ತಿದ್ದ ಸಂಸ್ಕೃತಿಯೊಂದು ಈಗ ಗ್ರಾಮೀಣ ಭಾಗಕ್ಕೂ ತಲಪಿದೆ. ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾಗಿಯಾಗಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಕಾರಣವಾಗಿದೆ. ಆ ವಿಡಿಯೋದಲ್ಲಿ ವಿದ್ಯಾರ್ಥಿಗಳ ಹುಚ್ಚಾಟ ಕಾಲೇಜು ಆವರಣದಲ್ಲಿಯೇ ನಡೆದಿರುವಂತೆ ಕಂಡುಬಂದಿದ್ದು, ಯೂನಿಫಾರಂ ಹರಿಯುವುದು ಸೇರಿದಂತೆ ಮಳೆ ನೀರಿನಲ್ಲಿ ಹುಚ್ಚಾಟ ಮಾಡುವ ರೀಲ್ಸ್ ಈಗ ವೈರಲ್ ಆಗಿರುವುದು.
ಈಚೆಗಷ್ಟೇ ಪುತ್ತೂರಿನಲ್ಲಿ ವಿದ್ಯಾರ್ಥಿಗಳ ಪ್ರೇಮಪ್ರಕರಣವೊಂದು ಭಾರೀ ಚರ್ಚೆಯಲ್ಲಿ ಇರುವಾಗಲೇ ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜಿನ ವಿದ್ಯಾರ್ಥಿಗಳ ರೀಲ್ಸ್ ವೈರಲ್ ಆಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುವುದಕ್ಕೆ ಕಾರಣವಾಗಿರುವುದು. ಬಹಳ ಸುಂದರವಾದ ಚಿತ್ರೀಕರಣ ಹಾಗೂ ಎಡಿಟಿಂಗ್ ಮಾಡಿದ್ದಾರೆ ವಿದ್ಯಾರ್ಥಿಗಳು. ಈ ವಿಡಿಯೋದಲ್ಲಿ ಕಾಲೇಜು ಗೇಟಿನ ಹೊರಭಾಗದಲ್ಲಿ ನಮಿಸುವುದರಿಂದ ತೊಡಗಿ ಮಳೆಯಲ್ಲಿ ಆಟಗಳು, ಕಾಲೇಜು ಯೂನಿಫಾರಂ ಹರಿದು ನರ್ತಿಸುವ ದೃಶ್ಯಗಳೂ ಇದೆ. ಈ ಎಲ್ಲಾ ಹುಚ್ಚಾಟಗಳು ಕಾಲೇಜು ಆವರಣದಲ್ಲಿಯೇ ನಡೆದಿರುವಂತೆ ಕಾಣಿಸುತ್ತಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಹಾಗೂ ತೀವ್ರ ವಿರೋಧಕ್ಕೂ ಕಾರಣವಾಗಿರುವುದು.ಗ್ರಾಮೀಣ ಭಾಗದಲ್ಲಿ ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ವತಿಯಿಂದ ನಡೆಸಲ್ಪಡುವ ಕಾಲೇಜಿನಲ್ಲಿ ಈ ಘಟನೆ ನಡೆದಿರುವುದು ವಿಷಾದದ ಸಂಗತಿ. ನಗರದಲ್ಲಿ ವಿದ್ಯಾರ್ಥಿಗಳು ರೀಲ್ಸ್ ಹುಚ್ಚಾಟ ನಡೆಸುವುದು ಇದೆ, ಆದರೆ ಪ್ರಶಾಂತವಾದ ,ಕಲಿಕೆಗೆ ಪೂರಕವಾಗಿರುವ ಪ್ರದೇಶದಲ್ಲಿ ರೀಲ್ಸ್ ಹುಚ್ಚಾಟ ಆಘಾತಕಾರಿ ಸಂಗತಿಯಾಗಿದೆ. ಕೆಲವು ಸಮಯದ ಹಿಂದೆ ಕುಕ್ಕೆ ಸುಬ್ರಹ್ಮಣ್ಯದ ಇದೇ ಕಾಲೇಜು ವಿದ್ಯಾರ್ಥಿಗಳು ಬಿಸಲೆ ಪ್ರದೇಶದಲ್ಲಿ ನಡೆಸಿರುವ ಘಟನೆಗಳೂ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಗ್ರಾಮೀಣ ಭಾಗದಲ್ಲೂ ಪೋಷಕರು ವಿದ್ಯಾರ್ಥಿಗಳು ನಿತ್ಯದ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕಾದ ಅಗತ್ಯವೂ ಇಲ್ಲಿ ಕಾಣುತ್ತದೆ.
ಈ ಬಗ್ಗೆ ಆಡಳಿತವು ಗಮನಹರಿಸುವುದು ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಉತ್ತಮವಾದ ಶಿಕ್ಷಣ ಸಂಸ್ಥೆ, ಪದವಿ ಯಂತಹ ಶಿಕ್ಷಣಕ್ಕೆ ಧಾರ್ಮಿಕ ಸಂಸ್ಥೆ ಆದ್ಯತೆ ಇರುವುದು ಗಮನಿಸಬೇಕಾದ ಅಂಶ. ಆದರೆ ಅಂತಹ ಉದ್ದೇಶವನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳುವುದು ಶಿಕ್ಷಣ ಸಂಸ್ಥೆಗೂ ಕಳಂಕದ ಕೆಲಸ. ಹೀಗಾಗಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಅಗತ್ಯವಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ. ( ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರೀಲ್ಸ್ ನಾವು ಪ್ರಕಟ ಮಾಡುತ್ತಿಲ್ಲ , ಆದರೆ ಇಂತಹ ಘಟನೆಗಳು ನಡೆಯಬಾರದು ಎಚ್ಚರವಾಗಿರಬೇಕು ಎನ್ನುವುದು ನಮ್ಮ ಕಾಳಜಿ, ಈ ದೃಷ್ಟಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ಅಭಿಪ್ರಾಯಗಳಿಗೆ ಮಾನ್ಯತೆ ನೀಡಿದ್ದೇವೆ – ರೂರಲ್ ಮಿರರ್.ಕಾಂ)