ಕಳೆದ ಕೆಲವು ದಿನಗಳಿಂದ ಕೊಡಗಿನ ಚೆಂಬು, ಸುಳ್ಯದ ಸಂಪಾಜೆ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ ಭಯದ ವಾತಾವರಣ ಇದೆ. ಹೀಗಾಗಿ ಉದ್ಯೋಗದಲ್ಲಿ ಇರುವ ಕೆಲವರು ತಮ್ಮ ಮನೆಯಲ್ಲಿರುವ ಸಾಮಾಗ್ರಿಗಳ ಸಾಗಾಟ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಕು ಪ್ರಾಣಿಗಳ ಒಡನಾಟ ವಿವರಿಸಲು ಸಾಧ್ಯವಿಲ್ಲ. ಈ ವೇಳೆ ಚಾರ್ಲಿ ಸಿನಿಮಾ ನೆನಪಿಗೆ ಬರುತ್ತಿದೆ.
ಚೆಂಬು ಪ್ರದೇಶದಲ್ಲಿ ಹಲವಾರು ಮಂದಿಯಲ್ಲಿ ಆತಂಕ ಇದ್ದರೂ ಅನಿವಾರ್ಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಖಾಸಗಿ ಉದ್ಯೋಗ ಇದ್ದು ನಗರದಲ್ಲಿ ಕೆಲಸ ಮಾಡುವವರು ತಾತ್ಕಾಲಿಕವಾಗಿ ವಾಸ್ತವ್ಯ ಸ್ಥಳಾಂತರಕ್ಕೆ ಚಿಂತನೆ ನಡೆಸಿದ್ದಾರೆ. ಸಾಕು ಪ್ರಾಣಿಗಳು ಇರುವ ಮಂದಿ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ಅಡಿಕೆ ಹಳದಿ ರೋಗ ಕಂಡುಬಂದು ಕೃಷಿ ನಾಶವಾದ ಕಾರಣ ಹೈನುಗಾರಿಕೆ ಸೇರಿದಂತೆ ವಿವಿಧ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹೈನುಗಾರಿಕೆ ಇರುವವರು ಧೈರ್ಯದಿಂದಲೇ ಬದುಕು ಸಾಗಿಸುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel