Advertisement
ಸುದ್ದಿಗಳು

ರಾಸಾಯನಿಕ ರಹಿತ ದಂತಮಂಜನ ‘ದಂತಸುರಭಿ’ ಲೋಕಾರ್ಪಣೆ | ಜನಜೀವನ ವಿಷದಿಂದ ಅಮೃತದತ್ತ ಸಾಗಲಿ: ರಾಘವೇಶ್ವರ ಶ್ರೀ ಆಶಯ

Share

ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರ- ಸಂಸ್ಕೃತಿಗೆ ಮಹತ್ವದ ಸ್ಥಾನವಿದೆ. ಸಂಸ್ಕೃತಿ- ಸಂಸ್ಕಾರ ಬಿಟ್ಟರೆ ಮುಂದಿನ ಪೀಳಿಗೆ ರಾಕ್ಷಸಕುಲವಾಗಿ ಬೆಳೆಯಬಹುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

Advertisement
Advertisement

ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಶ್ರೀಗಳು ಬುಧವಾರ ಶ್ರೀರಾಮಚಂದ್ರಾಪುರ ಮಠದ ಅಧೀನದ ಗೋಫಲ ಟ್ರಸ್ಟ್ ಹೊಸದಾಗಿ ಅಭಿವೃದ್ಧಿಪಡಿಸಿರುವ ರಾಸಾಯನಿಕ ರಹಿತ ದಂತಮಂಜನ ‘ದಂತಸುರಭಿ’ ಲೋಕಾರ್ಪಣೆ ಮಾಡಿ ಆಶೀರ್ವಚನ ಅನುಗ್ರಹಿಸಿದರು. ಮಂಗಲ ದ್ರವ್ಯಗಳ ದರ್ಶನ, ಬಳಕೆಯಿಂದ ನಮ್ಮ ದಿನ ಆರಂಭವಾಗಬೇಕು ಎಂದು ಶಾಸ್ತ್ರ ಹೇಳುತ್ತದೆ. ಆದರೆ ಬೆಳಿಗ್ಗೆ ಎದ್ದ ತಕ್ಷಣ ವಿಷದೊಂದಿಗೇ ದಿನ ಆರಂಭಿಸುವ ಪದ್ಧತಿ ಬೆಳೆದಿದೆ. ದಂತಮಂಜನ ಹೆಸರಿನಲ್ಲಿ ವಿಷ, ಎಲುಬಿನ ಪುಡಿಯನ್ನು ಬಾಯಿಗೆ ಹಾಕಿಕೊಳ್ಳುತ್ತೇವೆ. ಆದರೆ ಗೋಫಲ ಟ್ರಸ್ಟ್ ನ ವ್ಯಾಪಕ ಚಿಂತನೆ, ಸಾಮಾಜಿಕ ಹೊಣೆಗಾರಿಕೆಯ ಫಲವಾಗಿ ವಿಶ್ವಕ್ಕೆ ವಿಷಮುಕ್ತ, ರಾಸಾಯನಿಕ ರಹಿತ ದಂತಮಂಜನ ಲಭ್ಯವಾಗುತ್ತಿದೆ ಎಂದು ಬಣ್ಣಿಸಿದರು.

ಮಂಗಲದ್ರವ್ಯಗಳನ್ನೇ ಬಳಸಿಕೊಂಡು ಅಭಿವೃದ್ಧಿಪಡಿಸಿರುವ ದಂತಸುರಭಿ, ಸಮಾಜವನ್ನು ವಿಷಮುಕ್ತಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂದು ಹೇಳಿದರು. ವಿಶ್ವಕ್ಕೆ, ಭಾರತೀಯರಿಗೆ, ಸನಾತನ ಸಮಾಜಕ್ಕೆ ಇದು ದೊಡ್ಡ ಕೊಡುಗೆ. ಜನರು ತಮ್ಮ ಜೀವನವನ್ನು ಶುಭಕರ ಮಾಡಿಕೊಳ್ಳಲು ಇಂಥ ವಿಷಮುಕ್ತ ಹಾದಿಯಲ್ಲಿ ನಡೆಯಬೇಕು ಎಂದು ಆಶಿಸಿದರು.

ಚಾತುರ್ಮಾಸ್ಯದ ಸಂದರ್ಭದಲ್ಲಿ ಸ್ವರ್ಣಪಾದುಕೆ ಸೇವೆ ಮಾಡಿಸಿದ ಹಾಲಕ್ಕಿ ಸಮಾಜದ ಶ್ರದ್ಧೆ- ನಿಷ್ಠೆಯನ್ನು ಶ್ಲಾಘಿಸಿದ ಶ್ರೀಗಳು, ಗೋಸೇವೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಬಂದಿರುವ ಹಾಲಕ್ಕಿ ಸಮುದಾಯ ಅಪರೂಪದ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇದು ಉಳಿಯಬೇಕು ಎಂದು ಸೂಚಿಸಿದರು. ಮಲೆಮಹದೇಶ್ವರ ಬೆಟ್ಟದಲ್ಲಿ ಗೋಸಂಕುಲಕ್ಕೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ಸಾವಿರಾರು ಗೋವುಗಳಿಗೆ ಶ್ರೀಮಠ ಮೇವು ಪೂರೈಸಿದ್ದನ್ನು ನೆನೆಸಿ ಪ್ರತಿ ವರ್ಷ ಚಾತುರ್ಮಾಸ್ಯಕ್ಕೆ ಆಗಮಿಸುವ ಕೊಳ್ಳೇಗಾಲ ತಾಲೂಕು ಹನೂರು, ಕೌದಳ್ಳಿಯ ರೈತರ ಮತ್ತು ಮಠದ ಅವಿನಾಭಾವ ಸಂಬಂಧವನ್ನು ವಿವರಿಸಿದ ಶ್ರೀಗಳು, ದೂರದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಸೇವೆಯ ಅವಕಾಶ ಶ್ರೀಮಠದ ಪಾಲಿಗೆ ಒದಗಿಬಂದದ್ದು ನಮ್ಮ ಸುದೈವ ಎಂದು ಹೇಳಿದರು.

ಹೊಸ ಉತ್ಪನ್ನದ ಬಗ್ಗೆ ವಿವರ ನೀಡಿದ ಗೋಫಲ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಬಾಲಸುಬ್ರಹ್ಮಣ್ಯ ಅವರು, “ಗೋಮಯ ಭಸ್ಮ ಮತ್ತು ಇತರ ಆಯುರ್ವೇದ ಉತ್ಪನ್ನಗಳನ್ನು ಬಳಸಿ ಬಾಯಿ ಹಾಗೂ ಹಲ್ಲಿನ ರಕ್ಷಣೆಗಾಗಿ ದಂತಸುರಭಿ ಅಭಿವೃದ್ಧಿಪಡಿಸಲಾಗಿದೆ. 21 ಆಯುರ್ವೇದ ವಸ್ತುಗಳನ್ನು ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ದಂತರಕ್ಷಣೆಗೆ ಅನಿವಾರ್ಯ ಎನ್ನಲಾದ ರಾಸಾಯನಿಕಗಳು, ಇತರ ದಂತಮಂಜನಗಳಲ್ಲಿ ಬಳಸುವ ಮರಳಿನ ಪುಡಿ ಅಥವಾ ಎಲುಬಿನ ಪುಡಿಯಿಂದ ಇದು ಮುಕ್ತವಾಗಿದೆ. ಯಾವುದೇ ಮಾರ್ಜಕಗಳನ್ನೂ ಇದರಲ್ಲಿ ಬಳಸಿಲ್ಲ” ಎಂದು ಸ್ಪಷ್ಟಪಿಸಿದರು.

ಬೆಂಗಳೂರಿನ ಡಾ.ವಿಶ್ವನಾಥ ಭಟ್ ದಂಪತಿ ಸರ್ವಸೇವೆ ನೆರವೇರಿಸಿದರು. ಗೋಫಲ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಭಟ್ ಕೊಂಕೋಡಿ, ಟ್ರಸ್ಟಿಗಳಾದ ಡಾ.ವೈ.ವಿ.ಕೃಷ್ಣಮೂರ್ತಿ, ಮುರಳೀಧರ ಪ್ರಭು, ಕೇಶವ ಪ್ರಸಾದ್ ಮುಳಿಯ, ವ್ಯವಸ್ಥಾಪಕ ನಿರ್ದೇಶಕ ಬಾಲಸುಬ್ರಹ್ಮಣ್ಯ, ಗೋವಿಂದ ಹೆಗಡೆ, ಶಶಿಶೇಖರ ಧರ್ಬೆ, ಕುಮಾರ್, ಪ್ರಕಾಶ ಕುಮಾರ್ ನಲ್ಕ, ಡಾ.ವಿದ್ಯಾ ಸರಸ್ವತಿ, ಅಖಿಲ ಭಾರತ ಆಯುರ್ವೇದ ಸಂಸ್ಥಾನದ ಅಂತರರಾಷ್ಟ್ರೀಯ ವಿಭಾಗದ ಪ್ರಾಧ್ಯಾಫಕ ಡಾ.ರಾಜಗೋಪಾಲ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹಾಲಕ್ಕಿ ಸಮಾಜದ ಮುಖಂಡರಾದ ಹನುಮಂತ ಗೌಡ್ರು ಬೆಳ್ಳಂಬರ, ಬಿ.ಎಸ್.ಗೌಡ್ರು, ಎಸ್.ಟಿ.ಗೌಡ್ರು, ಮಂಜುನಾಥ ಗೌಡ್ರು ಕೆಕ್ಕಾರು, ಶಂಕರಗೌಡ್ರು ಹೆಗ್ರೆ, ಸರ್ವಸಮಾಜದ ಸಂಯೋಜಕ ಕೆ.ಎನ್.ಹೆಗಡೆ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್

ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…

5 hours ago

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

9 hours ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

9 hours ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

19 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

19 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

19 hours ago