ಕರ್ನಾಟಕದಲ್ಲೂ ಚೆಸ್‌ ಪ್ರತಿಭೆಗಳಿದ್ದಾರೆ | ಗ್ರಾಮೀಣ ಭಾಗದಲ್ಲೂ ಚೆಸ್‌ ಬೆಳೆಯಬೇಕು |”ಚೆಸ್‌ ಇನ್‌ ಸ್ಕೂಲ್”‌ ಆರಂಭವಾಗಲಿ |

July 20, 2025
9:37 PM
ಪ್ರತೀ ಮಗುವಿಗೂ ಚೆಸ್‌ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಚೆಸ್‌ ತರಬೇತಿ ನೀಡುವ ಬಗ್ಗೆ ರಾಜ್ಯ ಚೆಸ್‌ ಎಸೋಸಿಯೇಶನ್‌ ಈಗಾಗಲೇ ಶುರು ಮಾಡಿದೆ. ತುಮಕೂರು, ಶಿವಮೊಗ್ಗದಲ್ಲಿ ಈ ಪ್ರಯತ್ನ ನಡೆಯುತ್ತಿದೆ.  ಇದು ವ್ಯಾಪಕವಾಗಬೇಕು, ಎಲ್ಲಾ ಜಿಲ್ಲೆಗಳಲ್ಲೂ ಆರಂಭವಾಗಬೇಕು ಎಂಬುದು ಎಸೋಸಿಯೇಶನ್‌ ಉದ್ದೇಶ. "ಚೆಸ್‌ ಇನ್‌ ಸ್ಕೂಲ್"ಗಾಗಿ ಸಮಿತಿಯೂ ರಚನೆ ಆಗಿದೆ.

ಇಂದು ಚೆಸ್‌ ಆಟವು ಜನಪ್ರಿಯವಾಗುತ್ತಿದೆ.ಯಾವುದೇ ಕ್ರೀಡೆ, ಕಲೆ ಮತ್ತು ದೈಹಿಕ ಚಟುವಟಿಕೆಗಳು ನಮ್ಮ ಗ್ರಹಿಕೆಗಳನ್ನು ,ನಡವಳಿಕೆಗಳನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿವೆ. ಜೊತೆಗೆ ತಾರತಮ್ಯವನ್ನು , ಸಂಘರ್ಷವನ್ನು ನಿವಾರಿಸುತ್ತವೆ .ಆದ್ದರಿಂದ ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ, ಸುಸ್ಥಿರ ಅಭಿವೃದ್ಧಿ, ಶಾಂತಿ, ಸಹಕಾರ, ಒಗ್ಗಟ್ಟು, ಸಾಮಾಜಿಕವಾಗಿ ತೊಡಗಿಸಿಕೊಳ್ಳುವಿಕೆ ಮತ್ತು ಆರೋಗ್ಯವನ್ನು ಕೂಡಾ ಉತ್ತೇಜಿಸುವಲ್ಲಿ ಕ್ರೀಡೆ ಅದರಲ್ಲೂ ಚೆಸ್  ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಇಂದು ಚೆಸ್ ಒಂದು ಜಾಗತಿಕ ಆಟವಾಗಿದ್ದು ಪರಸ್ಪರ ಗೌರವವನ್ನು ಉತ್ತೇಜಿಸುವಲ್ಲೂ ಪ್ರಮುಖ ಪಾತ್ರ ವಹಿಸಿದೆ.

ಚೆಸ್ ಅತ್ಯಂತ ಪ್ರಾಚೀನ, ಬೌದ್ಧಿಕ ಮತ್ತು ಸಾಂಸ್ಕೃತಿಕ ಆಟಗಳಲ್ಲಿ ಒಂದು. ಕ್ರೀಡೆ, ವೈಜ್ಞಾನಿಕ ಚಿಂತನೆ ಮತ್ತು ಕಲೆಯ ಅಂಶಗಳ ಸಂಯೋಜನೆಯನ್ನು ಚೆಸ್‌  ಹೊಂದಿದೆ. ಎಲ್ಲರನ್ನೂ ಒಳಗೊಳ್ಳುವ ಚಟುವಟಿಕೆಯಾಗಿ, ಎಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು. ಭಾಷೆ, ವಯಸ್ಸು, ಲಿಂಗ, ದೈಹಿಕ ಸಾಮರ್ಥ್ಯ ಅಥವಾ ಸಾಮಾಜಿಕ ಸ್ಥಾನಮಾನದ ಅಡೆತಡೆಗಳನ್ನು ಮೀರಿ ಎಲ್ಲರೂ ಆಡಬಹುದಾದ ಆಟವೂ ಚೆಸ್.‌ ಈಗ ಯಾವುದೇ ಮೋಸ, ವಂಚನೆ, ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದ ಆಟವೂ ಚೆಸ್.

ಚದುರಂಗವು ಇಬ್ಬರು ಆಟಗಾರರ ತಂತ್ರದ ಆಟ. ರಾಜನನ್ನು ಕಟ್ಟಿ ಹಾಕಲು ಪ್ರಯತ್ನಿಸುವ ಚಿಂತನಶೀಲ ನಡಿಗೆ. ಪ್ರತಿಯೊಂದೂ ನಡಿಗೆಯೂ ಎಚ್ಚರದ್ದೇ. ಇಂತಹ ಆಟದಲ್ಲಿ 2,000 ಕ್ಕೂ ಹೆಚ್ಚು ಗುರುತಿಸಬಹುದಾದ ಹೆಜ್ಜೆಗಳು ಇವೆ. ವಿಶ್ವದಾದ್ಯಂತ ಆಟವಾಡುವ ಚೆಸ್‌  1924 ರಲ್ಲಿ ಪ್ಯಾರಿಸ್‌ನಲ್ಲಿ ಅಂತರರಾಷ್ಟ್ರೀಯ ಚೆಸ್ ಫೆಡರೇಶನ್ (FIDE)  ಸ್ಥಾಪನೆಯಾದ ದಿನಾಂಕವನ್ನು ಗುರುತಿಸಲು 2019 ರ ಡಿಸೆಂಬರ್ 12 ರಂದು ಸಾಮಾನ್ಯ ಸಭೆಯು ಜುಲೈ 20 ಅನ್ನು “ವಿಶ್ವ ಚೆಸ್ ದಿನ” ಎಂದು ಘೋಷಿಸಿತು.

ಭಾರತದಲ್ಲೂ ಸಾಕಷ್ಟು ಚೆಸ್‌ ಪ್ರತಿಭೆಗಳಿದ್ದಾರೆ. ರಾಜ್ಯವೂ ಅದಕ್ಕೆ ಹೊರತಾಗಿಲ್ಲ. ರಾಜ್ಯದಲ್ಲಿ ಸುಮಾರು 7 ರಿಂದ 8 ಸಾವಿರ ಚೆಸ್‌ ಆಟಗಾರರು ಇದ್ದಾರೆ. ಸ್ಥಳೀಯ ಮಟ್ಟದಿಂದ ತೊಡಗಿ ಫಿಡೇ ಪಂದ್ಯಾಟಗಳಲ್ಲಿ ಆಟವಾಡುವ ಅನೇಕರು ಇದ್ದಾರೆ. ಮಕ್ಕಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇಂದು ಅಂತರಾಷ್ಟ್ರೀಯ ಚೆಸ್ ದಿನ. ಕರ್ನಾಟಕ ರಾಜ್ಯ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷ (KSCA) ಟಿ ಎನ್‌ ಮಧುಕರ್‌ ಅವರ ಜೊತೆಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ….

ಕರ್ನಾಟಕ ರಾಜ್ಯ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷ ಟಿ ಎನ್‌ ಮಧುಕರ್‌ ಹಾಗೂ ಉಪಾಧ್ಯಕ್ಷ ರಮೇಶ್‌ ಕೋಟೆ
ಕರ್ನಾಟಕ ರಾಜ್ಯ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ವಿಶೇಷವಾಗಿ ಜಿಲ್ಲಾ ಎಸೋಸಿಯೇಶನ್‌ – ಫಲಾನುಭವಿಗಳು ಹಾಗೂ ಆಟಗಾರರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದೇವೆ. ತಾರತಮ್ಯ ನಿವಾರಣೆಗೆ ಪ್ರಮುಖವಾಗಿ ಚೆಸ್‌ ಅಸೋಸಿಯೇಶನ್‌ ನಿರ್ಧಾರ ತೆಗೆದುಕೊಂಡಿದೆ. ಕ್ರೀಡಾಳುಗಳಿಗೆ ಮಾಹಿತಿ ಹಾಗೂ  ಕಾರ್ಯಕ್ರಮ ರೂಪಿಸಿ ಅನುಷ್ಟಾನಗೊಳಿಸುವ ಕೆಲಸ ಮಾಡುತ್ತಿದ್ದೇವೆ.
ಕಾರ್ಯಕ್ರಮ ಆಯೋಜನೆ ವೇಳೆ ಆರ್ಬಿಟರ್‌ಗಳು, ಅಕಾಡೆಮಿ, ಕೋಚ್‌ ಹಾಗೂ ಆಟಗಾರರು, ಹೆತ್ತವರ ಸಮನ್ವಯಕ್ಕೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸುತ್ತಿದ್ದೇವೆ. ನಮ್ಮ ರಾಜ್ಯದ ಯುವ ಆಟಗಾರರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದಾಗ ಅವರ ಮನೋಬಲಕ್ಕಾಗಿ ಹಾಗೂ ಬೆಂಬಲಕ್ಕಾಗಿ ಜಿಎಂ(ಗ್ರ್ಯಾಂಡ್‌ ಮಾಸ್ಟರ್)‌ ಅಥವಾ ಐಎಂ(ಇಂಟರ್‌ ನ್ಯಾಶನಲ್‌ ಮಾಸ್ಟರ್)‌ ಜೊತೆ ತರಬೇತು ಅಥವಾ ಆಟವಾಡಿಸುವ ಮೂಲಕ ಮಾನಸಿಕ ಸ್ಥೈರ್ಯ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ.
ಒಬ್ಬ ಗ್ರಾಮೀಣ ಭಾಗದ ಆಟಗಾರು ಅಥವಾ ಸಾಮಾನ್ಯ ಕ್ರೀಡಾಳುವಿಗೆ ಜಿಎಂ ಜೊತೆ ತರಬೇತಿ ಪಡೆದುಕೊಳ್ಳಲು ಸಮಸ್ಯೆಯಾಗುತ್ತದೆ, ಹೆಚ್ಚಿನ ವೆಚ್ಚಗಳು ಆಗುತ್ತವೆ. ಜಿಎಂ ಅವರ ಜೊತೆ ತರಬೇತಿ ಪಡೆಯಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭ ರಾಜ್ಯ ಎಸೋಸಿಯೇಶನ್‌ ವತಿಯಿಂದ ತರಬೇತಿ ನೀಡುವ ಕೆಲಸ ಮಾಡುತ್ತದೆ. ದೇಶಮಟ್ಟದಲ್ಲಿ ನಮ್ಮ ರಾಜ್ಯದ ಪ್ರತಿಭೆ ಭಾಗವಹಿಸುವಂತೆ ಮಾಡುವುದು ಹಾಗೂ ರಾಜ್ಯಕ್ಕೂ ಹೆಮ್ಮೆ, ಗೌರವವನ್ನು ತರುವ ಬಗ್ಗೆಯೂ ಪ್ರಯತ್ನ ನಡೆಯುತ್ತಿದೆ.
ಇಷ್ಟೇ ಅಲ್ಲ, ಚೆಸ್‌ ವ್ಯಾಪ್ತಿಯ ಸಮಸ್ಯೆಯನ್ನು ಗುರುತಿಸಿ ಸರ್ಕಾರಕ್ಕೆ ತಿಳಿಸಿ , ಅಲ್ಲಿಂದ ಅಗತ್ಯ ಇರುವ  ಪರಿಹಾರ, ಫಲಿತಾಂಶವನ್ನು ತರಲೂ ಪ್ರಯತ್ನ ಮಾಡಿದ್ದೇವೆ. ರಾಜ್ಯ ಚೆಸ್‌ ಎಸೋಸಿಯೇಶನ್‌ ಇದುವರೆಗೂ ಅಂತಹ ಕೆಲಸ ಮಾಡಿದೆ, ಅದನ್ನು ಇನ್ನಷ್ಟು ಬಲಿಷ್ಟ ಮಾಡುವುದು ಹಾಗೂ ವಿಸ್ತಾರ ಮಾಡುವುದು ನಮ್ಮ ಗುರಿ.
ಈಗ ಚೆಸ್‌ ಆಟ ಬೆಳೆಯುತ್ತಿದೆ. ಅದರ ಜೊತೆಗೇ  ಚೆಸ್‌ ನಿರ್ಲಕ್ಷ ಆಟವಾಗುತ್ತಿದೆ. ಚೆಸ್‌ ಆಟವು ವೀಕ್ಷಕರು ಇರುವ ಕ್ರೀಡೆ ಅಲ್ಲ. ಜನರಿಗೆ  ಈ ಆಟ ನೋಡಲು ಉತ್ಸಾಹ ಇರುವುದಿಲ್ಲ. ನಾಲ್ಕು ಗೋಡೆಯ ಒಳಗಡೆ ಆಡುವ ಆಟ. ಪೋಷಕರಿಗೂ ಆಟ ನೋಡುವ ಅವಕಾಶ ಕಡಿಮೆ ಇರುತ್ತದೆ. ಹೀಗಾಗಿ ನಿರುತ್ಸಾಹ ಇರುತ್ತದೆ. ಇಂತಹದ್ದರ ನಡುವೆ ಪಂದ್ಯಾಟಗಳನ್ನು ನಡೆಸಬೇಕು, ಅವುಗಳಿಗೆ ಪ್ರಾಯೋಜಕರು ಬೇಕು, ಅವರಿಗೂ ಪ್ರೋತ್ಸಾಹ, ಪ್ರಯೋಜನಗಳು ಆಗಬೇಕು. ಸದ್ಯ ಆಯಾ ಜಿಲ್ಲೆ ಎಸೋಸಿಯೇಶನ್‌ಪ್ರಮುಖರ, ಆಸಕ್ತಿಯ ಮೇಲೆ ಪಂದ್ಯಾಟ ನಡೆಯುತ್ತಿದೆ. ಒಂದು ಟೂರ್ನಮೆಂಟ್‌ ಆಯೋಜನೆಗೆ 5-6  ಲಕ್ಷ ಖರ್ಚಾಗುತ್ತದೆ. ಈ ವೆಚ್ಚಗಳು ಆಯೋಜಕರಿಂದಲೇ ಖರ್ಚಾಗದ ಹಾಗೆ ಕ್ರಮ ಆಗಬೇಕು. ಇದಕ್ಕಾಗಿ ಪ್ರಾಯೋಜಕರ ಹುಡುಕಿ ಕೊಡಬೇಕು. ಅದಕ್ಕಾಗಿ ಕ್ರಮ ನಡೆಯುತ್ತಿದೆ, ಸಂಪನ್ಮೂಲಗಳ ಕ್ರೋಢೀಕರಣದ ವ್ಯವಸ್ಥೆಯಾಗುತ್ತಿದೆ. ಯಾರಿಗೂ ನಿರಾಸೆಯಾಗದಂತೆ ಕ್ರಮ ಮಾಡಲಾಗುತ್ತಿದೆ.
ಈಗಾಗಲೇ ತರಬೇತಿಯ ಬಗ್ಗೆ  ಘೋಷಣೆ ಆಗಿದೆ. ರಾಜ್ಯ ಎಸೋಸಿಯೇಶನ್‌ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಆಟವಾಡುವವರಿಗೆ ತರಬೇತಿ ನೀಡಲಾಗುತ್ತಿದೆ. ಕನಿಷ್ಟ 10  ಜನರಿಗೆ  ತರಬೇತಿ ನೀಡುವ ವ್ಯವಸ್ಥೆ ಇದಾಗಿದ್ದು ಈಗಾಗಲೇ ಒಂದು ತರಬೇತಿ ನಡೆದಿದೆ. ಪೋಷಕರಿಂದಲೂ ಉತ್ತಮ ಅಭಿಪ್ರಾಯ ಬಂದಿದೆ.  ಎಲ್ಲಾ ವಯೋಮಿತಿಯ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಖರ್ಚು ವೆಚ್ಚವನ್ನು ಎಸೋಸಿಯೇಶನ್‌  ಭರಿಸುತ್ತದೆ.
ಕರ್ನಾಟಕದಲ್ಲಿ 7-8 ಸಾವಿರ ಚೆಸ್ ಆಟಗಾರರು ಇದ್ದಾರೆ. ಅವರಿಗೂ ನ್ಯಾಯ ನೀಡುವ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮಕ್ಕಳಿಗೆ ರಾಜ್ಯ ಚೆಸ್‌ ಅಸೋಸಿಯೇಶನ್‌ ಪ್ರಾಯೋಜಕತ್ವ ನಡೆಸುವ  ಕೆಲಸ ಮಾಡುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ-ರಾಜ್ಯಕ್ಕೆ ಹೆಸರು ತರುವ ಕೆಲಸದತ್ತಲೂ ಎಸೋಸಿಯೇಶನ್‌ ಗಮನಹರಿಸಿದೆ.
ಕರ್ನಾಟಕದಲ್ಲಿ 7-8 ಸಾವಿರ ಚೆಸ್ ಆಟಗಾರರಿದ್ದರೂ ಅದರಲ್ಲಿ ಶೇ.60 ರಷ್ಟು ಬೆಂಗಳೂರಿನ ಜನರು. ಉಳಿದವರು ಇಡೀ ರಾಜ್ಯದ ಆಟಗಾರರು.‌ ಹೀಗಾಗಿ ಈಗ ರಾಜ್ಯದ ಉಳಿದೆಡೆಗೂ ಬೆಂಬಲ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲೂ ರಾಜ್ಯಮಟ್ಟದ ಪಂದ್ಯಾಟ ಆಯೋಜನೆಯಾಗಬೇಕು, ಪ್ರಾಯೋಜಕರೂ ಸಿಗುವ ಹಾಗೆ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಬೆಂಗಳೂರು ಹೊರತುಪಡಿಸಿ ರಾಜ್ಯದ ಅದರಲ್ಲೂ ಗ್ರಾಮೀಣ ಭಾಗದಲ್ಲೂ ಪಂದ್ಯಾಟ ನಡೆಯಬೇಕು. ಗ್ರಾಮೀಣ ಭಾಗದಲ್ಲೂ ಉತ್ತಮ ಆಟಗಾರರು ಇದ್ದಾರೆ. 
ಚೆಸ್‌ ಇನ್‌ ಸ್ಕೂಲ್‌ ಎನ್ನುವುದು ಹೊಸ ಕಲ್ಪನೆ. ಪ್ರತೀ ಮಗು ಕೂಡಾ ಚೆಸ್‌ ಆಡಬೇಕು ಎನ್ನುವುದು ರಾಷ್ಟ್ರೀಯ ಚೆಸ್‌ ಫೆಡರೇಶನ್‌ (AICF) ಆಶಯ.  ಕರ್ನಾಟಕದ ಅದಕ್ಕೂ ಉತ್ಸಾಹ ತೋರಿಸಿದೆ.  ಪ್ರತೀ ಮಗುವಿಗೂ ಚೆಸ್‌ ಕಡ್ಡಾಯವಾಗಬೇಕು. ಅಸ್ಸಾಂ, ಒಡಿಸ್ಸಾದಲ್ಲಿ ಈಗಾಗಲೇ ಪಠ್ಯದ ಜೊತೆಗೆ ಚೆಸ್‌ ಕೂಡಾ ಇದೆ. ಶಾಲೆಯಲ್ಲಿ ಚೆಸ್ ಕಡ್ಡಾಯವಾಗಬೇಕು. ಚೆಸ್‌ ಆಡುವುದರಿಂದ‌ ಮಕ್ಕಳ ಚಿಂತನಾ ಮಟ್ಟ ಬೆಳೆಯುತ್ತದೆ, ಧೈರ್ಯ ಹಾಗೂ ಸವಾಲುಗಳನಮ್ನು ಎದುರಿಸುವ ಮನೋಬಲವೂ ಹೆಚ್ಚುತ್ತದೆ ಎನ್ನುವುದು ಇದರ ಹಿಂದಿನ ಉದ್ದೇಶ.
ಕ್ರೀಡೆ ಮಕ್ಕಳಿಗೆ ಇರಲಿ. ಅದರಲ್ಲಿ ಚೆಸ್‌ ಕೂಡಾ ಒಂದು ಆಯ್ಕೆಯಾಗಲಿ. ಕ್ರೀಡೆ ಅಗತ್ಯ. ಒಳಾಂಗಣ ಆಟದಲ್ಲಿ ಚೆಸ್‌ ಕಡ್ಡಾಯವಾಗಬೇಕು.  ಪ್ರತೀ ಮಗುವಿಗೂ ಚೆಸ್‌ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಚೆಸ್‌ ತರಬೇತಿ ನೀಡುವ ಬಗ್ಗೆ ರಾಜ್ಯ ಚೆಸ್‌ ಎಸೋಸಿಯೇಶನ್‌ ಈಗಾಗಲೇ ಶುರು ಮಾಡಿದೆ. ತುಮಕೂರು, ಶಿವಮೊಗ್ಗದಲ್ಲಿ ಈ ಪ್ರಯತ್ನ ನಡೆಯುತ್ತಿದೆ.  ಇದು ವ್ಯಾಪಕವಾಗಬೇಕು, ಎಲ್ಲಾ ಜಿಲ್ಲೆಗಳಲ್ಲೂ ಆರಂಭವಾಗಬೇಕು ಎಂಬುದು ಎಸೋಸಿಯೇಶನ್‌ ಉದ್ದೇಶ. “ಚೆಸ್‌ ಇನ್‌ ಸ್ಕೂಲ್”ಗಾಗಿ ಸಮಿತಿಯೂ ರಚನೆ ಆಗಿದೆ. 8-10 ಜನರಿಗೆ ಅಲ್ಲಲ್ಲಿ ಶಾಲೆಯನ್ನು ಪ್ರಾಯೋಜಕರಾಗಿ ನೀಡಿ , ಅಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ಹಂತದ ತರಬೇತಿ ನೀಡಲಾಗುತ್ತಿದೆ. 
ಚೆಸ್‌ ಕ್ರೀಡೆಗೆ ಆದ್ಯತೆ, ಬೆಳೆಸುವ ಯೋಜನೆಗೆ ಎಲ್ಲರ ಸಹಕಾರ ಅಗತ್ಯ ಇದೆ. ಚೆಸ್‌ ಎಂದರೆ ತಮಿಳುನಾಡು, ಮಹಾರಾಷ್ಟ್ರದ ಮಕ್ಕಳು ಮಾತ್ರವಲ್ಲನಮ್ಮ ರಾಜ್ಯದ ಮಕ್ಕಳೂ ಆ ಲೆವೆಲ್‌ಗೆ ಹೋಗಬೇಕು, ಹೋಗುತ್ತಾರೆ ಕೂಡಾ. ಇಲ್ಲಿಯೂ ಅಂತಹ ಸಾಮರ್ಥ್ಯದ ಮಕ್ಕಳು ಇದ್ದಾರೆ.
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಜಾನುವಾರುಗಳ ಶೆಡ್ ನಿರ್ಮಾಣಕ್ಕೆ MGNREGA ಯೋಜನೆಯಿಂದ ರೂ 57,000 ಸಹಾಯಧನ
December 4, 2025
9:46 PM
by: ರೂರಲ್‌ ಮಿರರ್ ಸುದ್ದಿಜಾಲ
ಕೂದಲು ಉದುರುವಿಕೆಗೆ ತಡೆಗೆ ಪ್ರೋಟಿನ್ ಭರಿತ ಆಹಾರ
December 4, 2025
9:43 PM
by: ರೂರಲ್‌ ಮಿರರ್ ಸುದ್ದಿಜಾಲ
ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂಆರ್ ಸ್ಕ್ಯಾನ್ ಅಳವಡಿಕೆ
December 4, 2025
9:41 PM
by: ರೂರಲ್‌ ಮಿರರ್ ಸುದ್ದಿಜಾಲ
ಬೆನ್ನು, ಮೊಣಕಾಲುಗಳನ್ನು ಬಲಪಡಿಸಲು ನೆರವಾಗುವ ಆಹಾರ ಕ್ರಮಗಳು
December 4, 2025
9:39 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror