ಕೇವಲ ಕೃಷಿಯನ್ನು ಮಾತ್ರ ನಂಬದೆ ಅನೇಕ ರೈತರು ಕೋಳಿ ಸಾಕಾಣಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲಿ ಯಾವುದು ಸುಲಭವಲ್ಲ. ಕಾರಣ ನಾವು ಮಾಡುವ ಕೆಲಸದಲ್ಲಿ ನೂರೆಂಟು ವಿಘ್ನಗಳು ಬರುತ್ತವೆ. ಅದೇ ರೀತಿ ಕೋಳಿ ಸಾಕಾಣಿಕೆ ಕೂಡ. ನೋಡುಗರಿಗೆ ಇದು ಸುಲಭದ ಕೆಲಸ ಅನ್ನಿಸಬಹುದು. ಲಾಭ ಜಾಸ್ತಿ ಬರುತ್ತೆ ಎಂದು ಅಂದುಕೊಳ್ಳುತ್ತಾರೆ. ಆದರೆ ಅದರಲ್ಲಿರುವ ಸವಾಲುಗಳು, ಕಷ್ಟಗಳು ಅದರ ಕೆಲಸಕ್ಕೆ ಇಳಿದವರಿಗೆ ಮಾತ್ರ ತಿಳಿಯುತ್ತದೆ.
ಕೋಳಿ ಸಾಕಾಣಿಕೆ ಈಗ ಬಹದೊಡ್ಡ ಉದ್ಯಮವಾಗಿ ಬೆಳೆದಿದೆ. ಆದರೆ ಅದನ್ನು ಸಾಕುವ ಕ್ರಮ, ಅದರ ಆಹಾರ, ಅದಕ್ಕೆ ಬರುವ ರೋಗಗಳ ಬಗ್ಗೆ ತೀವ್ರ ನಿಗ ಇಡಬೇಕಾಗುತ್ತದೆ. ಹೌದು ಈ ಕೋಳಿಗಳಿಗೆ ಅದರಲ್ಲೂ ಈ ಮಳೆಗಾಲದಲ್ಲಿ ಭಯಾನಕವಾಗಿ ಕಾಡುವುದು ಕೋಳಿ ಹೇನು. ಇದನ್ನು ನಿರ್ಮಮೂಲನೇ ಮಾಡಲು ಹರಸಾಹಸವೇ ಪಡಬೇಕಾಗುತ್ತದೆ. ಕೋಳಿ ಹೇನು(chicken Lice) ಮಳೆಗಾಲದಲ್ಲಿ ಮತ್ತು ಅತೀ ಹೆಚ್ಚು ತೇವಾಂಶ ಇರುವ ಗೂಡುಗಳಿದ್ದರೆ ಅದರ ಕಾಟ ಹೆಚ್ಚಿರುತ್ತದೆ. ಅದಕ್ಕೆ ಪರಿಣಾಮಕಾರಿಯಾಗಿ ಔಷಧ ಮಾಡಿದರೆ ಮಾತ್ರ ಅದರಿಂದ ಮುಕ್ತಿ ಸಿಗಬಹುದು. ಇದಕ್ಕೆ ಒಳ್ಳೆಯ ಪರಿಣಾಮಕಾರಿ ಮದ್ದು ಎಂದರೆ ಸೆವಿನ್ ಹೆಸರಿನ ಪೌಡರ್ ಮತ್ತು ಲಿಕ್ವಿಡ್ ಮದ್ದು..
ಇದನ್ನು ಅಂದಾಜು ನೀರಿನಲ್ಲಿ ಮಿಕ್ಸ್ ಮಾಡಿ ರಾತ್ರಿ ವೇಳೆ ಸ್ಪ್ರೇ ಮಾಡಬೇಕು. ಅದು ರಾತ್ರಿ ವೇಳೆಯೇ ಯಾಕೆಂದರೆ ಕೋಳಿಗಳಿಗೆ ಹಗಲೆಲ್ಲಾ ವಿಪರೀತ ಮೈಕೊಡವಿಕೊಳ್ಳುವ ಅಭ್ಯಾಸ ಇರುತ್ತದೆ. ಆದ್ದರಿಂದ ನೀವು ಸ್ಪ್ರೇ ಮಾಡಿದ ಕೂಡಲೇ ಕೊಡವಿಕೊಳ್ಳುವುದರಿಂದ ಮುದ್ದಿನ ಒಳ್ಳೆಯ ಪರಿಣಾಮ ಬೀರುವುದಿಲ್ಲ.
ಹಾಗಾಗಿ ರಾತ್ರಿ ವೇಳೆಯೇ ಸ್ಪ್ರೇ ಮಾಡಬೇಕು. ಕೋಳಿಗಳ ಮೇಲೆ ಹಾಗೂ ಗೂಡಿನೊಳಗಡೆ ಗೋಡೆಗಳ ಮೇಲೆಯೂ ಸ್ಪ್ರೇ ಮಾಡಬೇಕು. ಸಾಧ್ಯವಾದರೆ ಗೂಡಿನ ಹೊರಗಡೆಯೂ ಬಾಗಿಲಿಗೆ ಮತ್ತು ಸಂದುಗಳಿಗೆ ಸ್ಪ್ರೇ ಮಾಡಬೇಕು. ಇದೇ ರೀತಿಯಲ್ಲಿ ನಿರಂತರ 3 ದಿನ ಒಳ್ಳೆಯ ರೀತಿಯಲ್ಲಿ ಸ್ಪ್ರೇ ಮಾಡಬೇಕು.. ಹೀಗೆ ಮಾಡಿದರೆ ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಸಿಗುತ್ತದೆ..
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…