ಕವಿಗಳ ಬರಹದ ಅನುಭವವು ವಾಚನದ ಮೂಲಕ ಬೇರೆಯವರಿಗೆ ಅನುಭಾವ ಆಗಬೇಕು

ಕವಿಗಳ ಬರಹದ ಅನುಭವವು ವಾಚನದ ಮೂಲಕ ಬೇರೆಯವರಿಗೆ ಅನುಭಾವ ಆಗಬೇಕು, ಹಾಗಿದ್ದರೆ ಮಾತ್ರ ಯಶಸ್ವಿ ಬರಹಗಾರರಾಗಿ ಮೂಡಿಬರಲು ಸಾಧ್ಯ ಎಂದು ಯುವ ಕವಯತ್ರಿ, ಸಂಘಟಕರು, ಸಮಾಜ ಸೇವಕರು ಆದ ವಿಂಧ್ಯಾ ಎಸ್. ರೈ ಹೇಳಿದರು.

Advertisement
Advertisement

ಅವರು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಆಯೋಜಿಸಿದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ಸುಮಾರು 31 ಕವಿಗಳು ಭಾಗವಹಿಸಿದ್ದು ಜಿಲ್ಲೆಯ ವಿವಿಧ ಕಡೆಗಳಿಂದ ಹೆಚ್ಚಿನ ಯುವ ಕವಿಗಳು ಆಗಮಿಸಿದ್ದರು.

Advertisement

ಪುತ್ತೂರಿನ ಮಕ್ಕಳ ಮಂಟಪದಲ್ಲಿ ಚಿಗುರೆಲೆ ಸಾಹಿತ್ಯ ಬಳಗದ ಉದ್ಘಾಟನೆ ಮತ್ತು ಯುವ ದನಿ -2022 ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದ. ಕ. ಜಿಲ್ಲಾ. ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷರು  ಉಮೇಶ್ ನಾಯಕ್  ಚಿಗುರೆಲೆ ಬಳಗದ ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ಮೇಲ್ವಿಚಾರಕರಾದ ಶ್ರೀಕಾಂತ್ ಪೂಜಾರಿ ಬಿರಾವು ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಜಯ ಹಾರ್ವಿನ್ ಮತ್ತು ಭೀಮರಾವ್ ವಾಷ್ಟರ್ ಹಾಗೂ ಮಕ್ಕಳ ಮಂಟಪದ ಮೇಲ್ವಿಚಾರಕರು ಮತ್ತು ಶಿಕ್ಷಣ ಸಿದ್ಧಾಂತಿ  ಎನ್. ಸುಕುಮಾರ ಗೌಡ ಭಾಗವಹಿಸಿ ನೂತನ ಸಾಹಿತ್ಯ ಬಳಗದ ಕಾರ್ಯಕ್ಕೆ ಶ್ಲಾಘಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಕವಿಗಳ ಬರಹದ ಅನುಭವವು ವಾಚನದ ಮೂಲಕ ಬೇರೆಯವರಿಗೆ ಅನುಭಾವ ಆಗಬೇಕು"

Leave a comment

Your email address will not be published.


*