ರೀಲ್ಸ್ ಮುಖಾಂತರ ಮಕ್ಕಳು, ಮಹಿಳೆಯರು ತಮ್ಮ ದೇಹದ ಅಂದ ಚಂದ ತೋರಿಸಲು ಪೈಪೋಟಿ : ಲಜ್ಜೆಗೆಟ್ಟ ಈ ಬೆಳವಣಿಗೆಯಿಂದ ಸುಶಿಕ್ಷಿತ ಮಹಿಳೆಯರಿಗೆ ಅವಮಾನ

May 29, 2024
9:18 PM
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಂದ ಹಿಡಿದು ಮಧ್ಯವಯಸ್ಸಿನ ಹಲವು ಮಹಿಳೆಯರು ರೀಲ್ಸ್ ಹೆಸರಿನಲ್ಲಿ ದೇಹವನ್ನು ಪ್ರದರ್ಶನ ಮಾಡುವುದರ ಬಗ್ಗೆ ಹರೀಶ್‌ ಕೆ ಸಿ ಪೆರಾಜೆ ಅವರ ಪೇಸ್‌ಬುಕ್‌ ಬರಹದ ಅಭಿಪ್ರಾಯ ಇಲ್ಲಿದೆ...

ಸಾಮಾಜಿಕ ಜಾಲತಾಣಗಳಲ್ಲಿ(Social media) ಮಕ್ಕಳಿಂದ(Children) ಹಿಡಿದು ಮಧ್ಯವಯಸ್ಸಿನ ಹಲವು ಮಹಿಳೆಯರು(Ladies) ರೀಲ್ಸ್(Reels) ಮುಖಾಂತರ ತಮ್ಮ ದೇಹದ ಅಂದ ಚಂದ, ಉಬ್ಬು ತಗ್ಗುಗಳನ್ನು ಬಹಿರಂಗವಾಗಿ ತೋರಿಸಲು ಈಗೀಗ ಪೈಪೋಟಿಗೆ ಇಳಿದವರಂತೆ ತುಂಡು ಉಡುಗೆ ಕಳಚಿ ಪೂರ್ಣ ದೇಹದ ಸಿರಿ ಪ್ರದರ್ಶನಕ್ಕೆ(Body exhibit) ಒಡ್ಡಿದವರಂತೆ ತಾನು ಹೆಚ್ಚು,ಎಲ್ಲವರಿಗಿಂತ ನನ್ನದೇ ಹೆಚ್ಚು ಕಾಣಲು ರೀಲ್ಸ್ ಮಾಡಿದೆ ಎಂದು ಖುಷಿಯಲ್ಲಿ ದೇಹದ ಯಾವ ಅಂಗವನ್ನು ಗುಪ್ತವಾಗಿ ಇರಿಸಿ ಮಾನ ಉಳಿಸಿಕೊಳ್ಳಬೇಕು ಎನ್ನುವ ಕಿಂಚಿತ್ತು ಪರಿಜ್ಞಾನವಿಲ್ಲದೆ ಪರಸ್ಪರ ಜಿದ್ದಿಗೆ ಬಿದ್ದವರಂತೆ ವಿಡಿಯೋ(Video) ಮಾಡಿ ವ್ಯಾಪಕವಾಗಿ ಹಂಚುತ್ತಿರುವ ವಿಕೃತ ಮನಸ್ಸಿನ ಹುಚ್ಚಾಟಕ್ಕೆ ಅಂಕುಶ ಹಾಕುವವರು ಇಲ್ಲದೆ ಒಟ್ಟು ಸಾಮಾಜಿಕ ಜಾಲತಾಣವೇ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಲಜ್ಜೆಗೆಟ್ಟ ಈ ರೀತಿಯ ಬಳವಣಿಗೆ ಸುಶಿಕ್ಷಿತ ಮಹಿಳೆರನ್ನು(women) ಕೂಡ ಅವಮಾನಿಸಿದೆ.

ಇವುಗಳನ್ನು ನಿಯಂತ್ರಿಸಬೇಕಾದ ಫೇಸ್ಬುಕ್ ಮಾಲೀಕರು ಲಾಭದ ವ್ಯವಹಾರಕ್ಕೆ ಜೋತುಬಿದ್ದಿದ್ದಾರೆ. ರಾಜಕೀಯ ಪಕ್ಷಗಳು, ಸರ್ಕಾರಗಳು ಚುನಾವಣಾ ಬಾಂಡ್ ಎನ್ನುವ ದೇಣಿಗೆ ಸಂಗ್ರಹದ ಅನಿಷ್ಟ ಪದ್ಧತಿಗೆ ಹೊಂದಿಕೊಂಡಿರುವ ಪರಿಣಾಮ ಎಗ್ಗಿಲ್ಲದೇ ನಿರಂತರ ಎಳೆಯರ, ಹಿರಿಯರ ಮೊಬೈಲ್ಗಳಲ್ಲಿ ಬೆತ್ತಲೆ ಚಿತ್ರಗಳದ್ದೇ ಹವಾ ಎನ್ನುವ ಪರಿಸ್ಥಿತಿ ಮತ್ತಷ್ಟು ಉಗಮವಾಗುತ್ತಿದೆ.

ಸಾರ್ವಜನಿಕರು ಈ ಬಗ್ಗೆ ಚಕಾರ ಎತ್ತುವಂತಿಲ್ಲ. ಒಂದು ವೇಳೆ ಮಾಧ್ಯಮದ ಎದುರು ಗಂಡಸರು ಪ್ರಶ್ನೆ ಮಾಡಿದಲ್ಲಿ ಬುದ್ಧಿಜೀವಿ ಮಹಿಳೆಯರು, ಮಹಿಳಾ ಸಂಘಟನೆಯ ಮಹಿಳಾಮಣಿಗಳು ಅದೇ ವೇಳೆ ಮಾಧ್ಯಮದ ಮುಂದೆ ಬಂದು ನೀವುಗಳು ನೋಡುವ ದೃಷ್ಟಿ ಸರಿ ಮಾಡಿಕೊಳ್ಳಿ ಎನ್ನುವ ಉತ್ತರ ಸಿದ್ದವಾಗಿರುತ್ತದೆ.

ಒಂದು ವೇಳೆ ಇಂತಹ ವಿಕೃತ ದೃಶ್ಯಗಳು ಗಂಡಸರಿಂದ ನಿರಂತರವಾಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರೆ ಸಮಾಜದ ಪರಿಸ್ಥಿತಿ ಎಲ್ಲಿಗೆ ತಲುಪುತ್ತಿತ್ತು, ಮಹಿಳಾ ಆಯೋಗ, ಮಹಿಳಾ ಸಂಘಟನೆಗಳು ಯಾವ ರೀತಿಯ ಪ್ರತಿಭಟನೆ ಮಾಡುತ್ತಿದ್ದವು,ಸರ್ಕಾರ ಆ ವೇಳೆಗೆ ಯಾವ ರೀತಿಯಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ನೀಡುವ ವಿಡಿಯೋ ಮಾಡಿದ ಗಂಡಸರನ್ನು ಬಂಧಿಸಿ ಹಡೆಮುರಿ ಕಟ್ಟಿ ಆತನನ್ನು ಬಂಧಿಸಿ ಕೇಸು ಜಡಿದು ಜೈಲಿಗೆ ಅಟ್ಟುತ್ತಿದ್ದರಲ್ಲವೇ?

ಒಂದು ವೇಳೆ ಕೆಲವು ಹೆಂಗಸರು ಹೆಣ್ಣು ಕುಲಕ್ಕೆ ಕೆಡುಕನ್ನು (ಒಳಿತನ್ನು ) ತರಬಲ್ಲ ಇಂತಹ ವಿಡಿಯೋಗಳನ್ನು ರಾಜಾರೋಷವಾಗಿ ನೋಡುಗರ ಕಣ್ಣಿಗೆ ಕಾಣಿಸುವ ಉದ್ದೇಶ ಇಟ್ಟುಕೊಂಡಂತೆ, ಸರ್ಕಾರ ಕೂಡ ಗಂಡಸರು ಬಹಿರಂಗ ಪಡಿಸುವ ತಮ್ಮ ಬೆತ್ತಲೆ ವಿಡಿಯೋಗಳ ಮೇಲೆ ಯಾವುದೇ ನಿರ್ಧಾಕ್ಷಿಣ ಕ್ರಮ ಕೈಗೊಳ್ಳದಿದ್ದರೂ ಪುರುಷರು ಈ ರೀತಿಯ ಮಾನ ಹಾನಿಕರ ವಿಡಿಯೋಗಳನ್ನು ಸಮಾಜದ ಮುಂದೆ ಹರಿಬಿಡಲಾರರು. ಏಕೆಂದರೆ ಅಷ್ಟರ ಮಟ್ಟಿಗೆ ಪುರುಷ ಜನ್ಮ ಪಡೆದವರು ತಮ್ಮ ಶರೀರದ ಮೇಲೆ ಗೌರವವನ್ನು ಉಳಿಸಿಕೊಂಡಿದ್ದಾರೆ.

Advertisement

ಹಾಗೆ ಹಲವಾರು ಮಹಿಳೆಯರು ಅವರುಗಳ ಸಭ್ಯ (ಅಸಭ್ಯ ) ರೀಲ್ಸ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನ ಮಾಡುತ್ತಿರುವಾಗ ನಾವು ಅವರುಗಳ ದೇಹದ ಮೇಲೆ ಅವರುಗಳು ಗಂಡಸರಂತೆ ಗೌರವ ಉಳಿಸಿಕೊಂಡಿದ್ದಾರೆ ಎಂದು ಹೇಳುವುದಿಲ್ಲ. ಒಂದು ವೇಳೆ ಹೇಳಿದರೆ ನೋಡುವ ದೃಷ್ಟಿ ತಪ್ಪಿಹೋಗಿದೆ ಎಂದು ಅರ್ಥವಲ್ಲವೇ?

ಬರಹ :
ಹರೀಶ್ ಪೆರಾಜೆ ಕೆ ಸಿ
( ಫೇಸ್ ಬುಕ್ ವಾಲಿನಿಂದ)

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ; ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಆದ್ಯತೆ
November 10, 2025
7:32 AM
by: ದ ರೂರಲ್ ಮಿರರ್.ಕಾಂ
ಇಲಿಗಳ ಕಾಟಕ್ಕೆ ಇಲ್ಲಿದೆ ಸುಲಭ ಪರಿಹಾರ…!
November 10, 2025
7:26 AM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಕ್ಯಾನ್ಸರ್ ಪ್ರತಿಬಂಧಕ – ಅಧ್ಯಯನ ವರದಿ
November 10, 2025
7:16 AM
by: ರೂರಲ್‌ ಮಿರರ್ ಸುದ್ದಿಜಾಲ
ಪಶ್ಚಿಮಘಟ್ಟಗಳಲ್ಲಿ ಹೊಸ ಸಸ್ಯ ಪ್ರಭೇದಗಳು ಪತ್ತೆ | ಸೊನೆರೆಲಾ ಜಾತಿಯ   ಮೂರು  ಪ್ರಭೇದಗಳು
November 10, 2025
7:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror