ಸಂಪಾದಕೀಯ ಆಯ್ಕೆ

ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೇಸಿಗೆ ರಜೆ. ಮಕ್ಕಳಿಗೆ ಏನು ಮಾಡುವುದು ಎನ್ನುವ ಚಿಂತೆಯಾದರೆ, ಪೋಷಕರಿಗೆಲ್ಲಾ ಮೊಬೈಲ್‌ನಿಂದ ಬಿಡಿಸುವುದು ಹೇಗೆ ಎನ್ನುವ ಚಿಂತೆ. ಈ ಎರಡೂ ಸಮಸ್ಯೆಗಳನ್ನು ದೂರ ಮಾಡುವುದು ಬೇಸಿಗೆ ಶಿಬಿರ. ಮಕ್ಕಳನ್ನು ರಜೆಯಲ್ಲಿ ಕ್ರಿಯಾಶೀಲರನ್ನಾಗಿಸುವ ಒಂದು ಪ್ರಯತ್ನ ಇದಾಗಿದೆ. ಸುಳ್ಯ ತಾಲೂಕಿನ ಪಂಜದಲ್ಲಿ ನಡೆದ ವಾರದ ಶಿಬಿರ ಇದು. ಮಕ್ಕಳ ಹಬ್ಬ.…ಮುಂದೆ ಓದಿ…..

Advertisement

ಸುಮಾರು 150 ಮಕ್ಕಳು ಪಂಜದಲ್ಲಿ ಕುಣಿದಾಡಿದರು, ಸಂಭ್ರಮಿಸಿದರು. ಚಿತ್ರ ಬಿಡಿಸಿದರು, ಬಣ್ಣ ಮೆತ್ತಿದರು, ಬಣ್ಣ ಹಾಕಿದರು, ಕುಣಿದರು, ಪ್ರಶ್ನಿಸಿದರು, ಮುಖವಾಡ ಮಾಡಿದರು, ಕಾಡಿನ ನಡುವೆ ಹೋದರು, ಬರಿದಾದ ಹೊಳೆಯನ್ನು ನೋಡಿದರು, ಪಕ್ಷಿಗಳ ಹಾಡನ್ನು ಕೇಳಿದರು… ಎಲ್ಲಾ ಮರೆತು ಮಕ್ಕಳು ಖುಷಿ ಪಟ್ಟರು. ಇದೇ ಮಕ್ಕಳ ಹಬ್ಬ. ವಾರಗಳ ಕಾಲ ನಡೆಯುತ್ತಿರುವ ಮಕ್ಕಳ ಹಬ್ಬ ಇದು.……ಮುಂದೆ ಓದಿ…..

ಸೃಜನಶೀಲ ಚಟುವಟಿಕೆಯನ್ನು ಮಕ್ಕಳಿಗೆ ನೀಡಿದರೆ ಮೊಬೈಲ್‌ ನಿಂದ ದೂರ ಇರುತ್ತಾರೆ. ಮಕ್ಕಳಒಳಗಿರುವ ಕಲೆ, ಆಸಕ್ತಿಯನ್ನು ಗುರುತಿಸುವುದೇ ಇಂದು ಪೋಷಕರ ಬಹುದೊಡ್ಡದಾದ ಕೆಲಸ
ಜೀವನ್‌ ಬೆಳ್ಳಾರೆ.
.

ಸುಳ್ಯ ತಾಲೂಕಿನ ಪಂಜದಲ್ಲಿ ಅದ್ವೈತ  ಮಕ್ಕಳ ಬೇಸಿಗೆ ಶಿಬಿರ ಆಯೋಜನೆಗೊಂಡಿದೆ.ಡ್ಯಾನ್ಸ್‌ ಎಂಡ್‌ ಬೀಟ್ಸ್‌ ಪಂಜ ಇವರ ನೇತೃತ್ವದಲ್ಲಿ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಶಿಬಿರ ಇದು. ಈ ಶಿಬಿರದಲ್ಲಿ ಜರ್ನಿ ಥೀಯೇಟರ್ ಮಂಗಳೂರು, ವಿದ್ದು ಉಚ್ಚಿಲ, ತಾರನಾಥ ಕೈರಂಗಳ, ಉಮೇಶ್‌ ಚನ್ನರಾಯಪಟ್ಟಣ, ಶಿವಗಿರಿ ಕಲ್ಲಡ್ಕ, ಮಧೂಸೂಧನ ಉಜಿರೆ, ಹರ್ಷಿತ್‌ ಮರ್ಕಂಜ, ಭುವನ್‌ ಕೈಕಂಬ, ರಾಜ್‌ ಮುಕೇಶ್‌ ಸುಳ್ಯ, ಸೋಮಶೇಖರ ನೇರಳ, ಶಿವರಾಮ ಕಲ್ಮಡ್ಕ, ಸತೀಶ್‌ ಕಳಂಜ, ಲಿಂಗಪ್ಪ ಬೆಳ್ಳಾರೆ, ಪದ್ಮನಾಬ ಕಲಾಸುಮ, ಶರತ್‌ ಮರ್ಗಿಲಡ್ಕ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸೇರಿದಂತೆ ಹಲವು ಸಂಸ್ಥೆಗಳು ಸಹಕರಿಸಿದ್ದವು.

ಜೀವನ್‌ ಬೆಳ್ಳಾರೆ  ಅವರು ಈ ಶಿಬಿರ ಆಯೋಜನೆಯ ಪ್ರಮುಖರು. ಡ್ಯಾನ್ಸ್‌ ತರಬೇತಿ ಮಾಡುವ ಜೀವನ್‌ ಅವರು ಮಾರ್ಚ್‌ ನಂತರ ಮಕ್ಕಳ ಚಟುವಟಿಕೆ ಏನು..? ಎಂಬುದು ಪ್ರತೀ ಬಾರಿಯ ಯೋಚನೆ  ಇರುತ್ತದೆ. ಮಕ್ಕಳು ಸದಾ ಚಟುವಟಿಕೆಯಲ್ಲಿ ಇರಬೇಕು. ಹೀಗಾಗಿ ಎಪ್ರಿಲ್‌ ಮೇಯಲ್ಲಿ ಮಕ್ಕಳಿಗಾಗಿ ಶಿಬಿರ ಮಾಡಬೇಕು ಎಂದು 2019 ರಲ್ಲಿ ಯೋಚನೆ ಬಂದಿತ್ತು. ಕಳೆದ ಎರಡು ವರ್ಷಗಳಿಂದ ಶಿಬಿರ ನಡೆಯುತ್ತಿದೆ. ಈ ವರ್ಷ 3 ಕಡೆ ಶಿಬಿರ ಆಯೋಜನೆ ಮಾಡಿದ್ದಾರೆ. ಮೂರು ಕಡೆ ಸೇರಿ ಒಟ್ಟು 300 ರಷ್ಟು ವಿದ್ಯಾರ್ಥಿಗಳು ಶಿಬಿರಕ್ಕೆ ಆಗಮಿಸಿದ್ದಾರೆ.…….ಮುಂದೆ ಓದಿ…..

ಶಿಬಿರದಲ್ಲಿ ವಿಶೇಷವಾಗಿ ರಂಗಕಲೆ, ರಂಗಗೀತೆ, ವಿವಿಧ ಬಗೆಯ ಕಲೆ, ಮಧುಬನಿ, ಕ್ರಾಫ್ಟ್‌, ಸೃಜನಶೀಲ ಕಲೆಗಳು, ಪರಿಸರ ವೀಕ್ಷಣೆ ಇತ್ಯಾದಿಗಳು ಇರುತ್ತದೆ, ಇದಕ್ಕಾಗಿ ಆಯಾ ಕ್ಷೇತ್ರದಲ್ಲಿ ತಜ್ಞರಾಗಿರುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಲಾಗುತ್ತದೆ ಎನ್ನುತ್ತಾರೆ ಜೀವನ್‌.

ಶಿಬಿರದಲ್ಲಿ 5-16 ವರ್ಷದೊಳಗಿನ ಮಕ್ಕಳು ಇದ್ದಾರೆ. ಮಕ್ಕಳ ಆಸಕ್ತಿ ಉತ್ತಮವಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿಯೇ ಇದ್ದಾಗ ಮಕ್ಕಳೂ ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಎನ್ನುವ ಜೀವನ್, ಮಕ್ಕಳ ಇಂತಹ ಶಿಬಿರಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳು ಒಂದು ವಾರ ಮೊಬೈಲ್‌ ಹಿಡಿಯದ ಹಾಗೆ ಆಯಿತಲ್ಲಾ ಎನ್ನುವುದಕ್ಕಿಂತಲೂ ಮಕ್ಕಳಲ್ಲಿ ಸೃಜನಶೀಲ ಚಿಂತನೆ ಶುರುವಾಯಿತು ಎನ್ನುವುದು ಬಹುಮುಖ್ಯವಾಗುತ್ತದೆ ಎನ್ನುತ್ತಾರೆ.…….ಮುಂದೆ ಓದಿ…..

ಈ ಬಾರಿ ಮೂರು ಶಿಬಿರದಲ್ಲಿ ಗಮನಿಸಿದ್ದೇನೆ, ಎಲ್ಲಾ ಮಕ್ಕಳೂ ಕುತೂಹಲದಿಂದ ಇದ್ದಾರೆ. ಮಕ್ಕಳಲ್ಲಿ ಆಸಕ್ತಿ ಇದೆ. ಎಲ್ಲಾ ಮಕ್ಕಳಿಗೂ ಮೊಬೈಲ್‌ನಲ್ಲಿ ಆಸಕ್ತಿ ಇದೆ ನಿಜ. ಆದರೆ ಅದರಿಂದ ದೂರ ಮಾಡುವುದು, ಮೊಬೈಲ್‌ ದೂರುವುದರ ಬದಲಾಗಿ ಮಕ್ಕಳ ಆಸಕ್ತಿಯನ್ನು ಬೆಳೆಸಬೇಕು, ಬೆಳೆಸುವ ಹಾಗೆ ಪೋಷಕರು ಮಾಡಬೇಕಿದೆ.ಅಂತಹ ಗುರುತಿಸುವಿಕೆ ಹಾಗೂ ಆಸಕ್ತಿಯನ್ನು ಈ ಶಿಬಿರದಲ್ಲಿ ಮಾಡಲಾಗುತ್ತಿದೆ ಅಷ್ಟೇ…. ಎನ್ನುತ್ತಾರೆ ಜೀವನ್‌ ಬೆಳ್ಳಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

31 minutes ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

47 minutes ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

52 minutes ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 hour ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

1 hour ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

9 hours ago