ಮಲಬಾರ್ ಗಿಳಿ. ನೀಲಿ ರೆಕ್ಕೆಯ ಗಿಳಿ.(Blue-winged parakeet Malabar Parakeet Psittacula columboides) .ಇದು ಉಳಿದ ಗಿಳಿಗಳಿಗಿಂತ ವಿಭಿನ್ನವಾದ ಬಣ್ಣವನ್ನು ಹೊಂದಿರುವ ಮಲಬಾರ್ ಗಿಳಿ ಹೆಚ್ಚಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಸಣ್ಣಪುಟ್ಟ ಹಿಂಡುಗಳಲ್ಲಿ ಕಾಣಸಿಗುತ್ತವೆ. ಸದಾ ಚಟುವಟಿಕೆಯಿಂದಿದ್ದು ಸ್ವರದಿಂದಲೇ ತನ್ನಿರವನ್ನು ಸಾಬೀತುಪಡಿಸುತ್ತದೆ. ಇವುಗಳ ಸ್ವರವೂ ಇತರ ಗಿಳಿಗಳಿಗಿಂತ ಭಿನ್ನವಾಗಿದೆ. ಮೈನಾ ಗಾತ್ರದ(38cm) ಹಕ್ಕಿಯಾಗಿದೆ. ರೆಕ್ಕಗಳು ಗಾಢ ನೀಲಿ ಬಣ್ಣದ್ದಾಗಿರುತ್ತದೆ. ಗಂಡು ಹಕ್ಜಿಗೆ ಕುತ್ತಿಗೆಯ ಸುತ್ತ ಕಾಲರ್ ನಂತೆ ಇದೆ. ಹೆಣ್ಣು ಹಕ್ಕಿಗೆ ಈ ಪಟ್ಟಿ ಇರುವುದಿಲ್ಲ. ಪಶ್ಚಿಮ ಘಟ್ಟಗಳಲ್ಲಿ, ,ಕೇರಳ, ತಮಿಳುನಾಡು ಪ್ರದೇಶಗಳಲ್ಲಿ ಕಂಡು ಬರುತ್ತವೆ. ಹಣ್ಣುಗಳೇ ಇವುಗಳ ಮುಖ್ಯ ಆಹಾರ.
ಬರಹ :
ಅಶ್ವಿನಿಮೂರ್ತಿ ಅಯ್ಯನಕಟ್ಟೆ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel