ಈ ಸುಂದರ ವರ್ಣರಂಜಿತ ಹಕ್ಕಿ ನೀಲಿ ತಲೆಯ ಬಂಡೆ ಸಿಳ್ಳಾರ. ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡು ಬರುತ್ತದೆ. ಹೆಚ್ಚಾಗಿ ಕಾಡು ಪ್ರದೇಶದಲ್ಲಿಯೇ ಇರುತ್ತವೆ. ಮೊದಲ ನೋಟಕ್ಕೆ ನಮ್ಮನ್ನು ತನ್ನತ್ತ ಸೆಳೆಯುವಲ್ಲಿ ಖಂಡಿತಾ ಈ ಹಕ್ಕಿ ಯಶಸ್ವಿಯಾಗುತ್ತದೆ.
ತನ್ನ ನೀಲಿಬಣ್ಣದ ಬೆನ್ನು ಮತ್ತು ಕೆಳಗಿನ ಹೊಟ್ಟೆಯ ಭಾಗದಲ್ಲಿರುವ ಮಣ್ಣಿನ ಬಣ್ಣ. ರೆಕ್ಕೆಯ ಬಿಳಿ ಬಣ್ಣಗಳಿಂದ ಆಕರ್ಷಣೀಯವಾಗಿದೆ ಈ ಹಕ್ಕಿ. ಇದು ಹಾರುವಾಗ ಬಲುಚೆಂದ. ಹೆಣ್ಣು ಹಕ್ಕಿಯದು ಸಾಮಾನ್ಯ ಕಂದು ಬಣ್ಣ. ಜೊತೆಗೆ ಗೀರುಗಳಿರುವ ಬೆನ್ನು ಮತ್ತು ಕೆಳಗಿನ ಭಾಗ ಕಂದು-ಬಿಳಿಯ ಪೊರೆಯಂತಿರುವ ಬಣ್ಣವಾಗಿದೆ. ಬುಲ್ ಬುಲ್ ಹಕ್ಕಿ ಗಾತ್ರದ ಈ ಹಕ್ಕಿಯು 17 ಸೆ.ಮೀ ನಷ್ಟು ದೊಡ್ಡದಾಗಿರುತ್ತದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು ಬಾಳಿಲ
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…
ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…
ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…
ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …
ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…
ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…