ಚಿಲಿಪಿಲಿ | ವೇಗವಾಗಿ ಹಾರುವ ಚೋರೆ ಹಕ್ಕಿಯ ಸೊಬಗು..! |

December 17, 2021
8:53 AM

ಚೋರೆ ಹಕ್ಕಿ ಪಾರಿವಾಳ ಜಾತಿಯ ಹಕ್ಕಿಯಾಗಿದೆ. ಮೈನಾ ಹಕ್ಕಿಗಿಂತ ದೊಡ್ಡದು, ಆದರೆ ಪಾರಿವಾಳಕ್ಕಿಂತ ಗಾತ್ರದಲ್ಲಿ ಸಣ್ಣದು.(28 ರಿಂದ 32 ಸೆ.ಮೀ) .

ಪರ್ವತ ಪಾರಿವಾಳ, ಮುತ್ತು ಕತ್ತಿನ ಪಾರಿವಾಳ, ಕಸೂತಿ ಕತ್ತಿನ ಪಾರಿವಾಳ ಮೊದಲಾದ ಹೆಸರುಗಳು ಈ ಹಕ್ಕಿಗಿವೆ.‌ ಕಾಡಿನ ನಡುವೆ ಇರುವ ಮೈದಾನದಲ್ಲಿ, ಗದ್ದೆಗಳಲ್ಲಿ, ಜೋಡಿ ಹಕ್ಕಿಗಳಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಕಂಡು ಬರುತ್ತವೆ. ಕಾಳು, ಹಣ್ಣುಗಳು ಕೀಟಗಳು, ಹೂವಿನ ಮಕರಂದ ಈ ಹಕ್ಕಿಯ ಆಹಾರವಾಗಿದೆ.

ಬಹಳ ವೇಗವಾಗಿ ಹಾರುತ್ತದೆ. ನೆಲದಿಂದ ಮೇಲೆ ಹಾರ ಬೇಕಾದರೆ ರೆಕ್ಕೆಯನ್ನು ಜೋರಾಗಿ ಪಟಪಟನೆ ಬಡಿಯುತ್ತದೆ. ಹಾರುವ ವೇಗಕ್ಕೆ ಸಿಳ್ಳೆ ಹೊಡೆದಂತೆ ಸದ್ದಾಗುತ್ತದೆ. ತನ್ನ ವಿಶೇಷವಾದ ಕೂಗಿನಿಂದ ಗುರುತಿಸಲ್ಪಡುತ್ತದೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ , #ಚಿತ್ರ : ಯು ರಾಧಾಕೃಷ್ಣ ರಾವ್ ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ಬಜ್ಜಿ – ಮನೆಯಲ್ಲೇ ಸವಿಯುವ ಕ್ರಿಸ್ಪಿ ಸ್ನ್ಯಾಕ್
March 28, 2026
9:12 AM
by: ದ ರೂರಲ್ ಮಿರರ್.ಕಾಂ
ಸಂಸ್ಥೆಯ ನಿಜವಾದ ಶಕ್ತಿ : ಮಾನವ ಸಂಪನ್ಮೂಲವೇ ಯಶಸ್ಸಿನ ಮೂಲಾಧಾರ
March 27, 2026
2:05 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror