ಚೋರೆ ಹಕ್ಕಿ ಪಾರಿವಾಳ ಜಾತಿಯ ಹಕ್ಕಿಯಾಗಿದೆ. ಮೈನಾ ಹಕ್ಕಿಗಿಂತ ದೊಡ್ಡದು, ಆದರೆ ಪಾರಿವಾಳಕ್ಕಿಂತ ಗಾತ್ರದಲ್ಲಿ ಸಣ್ಣದು.(28 ರಿಂದ 32 ಸೆ.ಮೀ) .
ಪರ್ವತ ಪಾರಿವಾಳ, ಮುತ್ತು ಕತ್ತಿನ ಪಾರಿವಾಳ, ಕಸೂತಿ ಕತ್ತಿನ ಪಾರಿವಾಳ ಮೊದಲಾದ ಹೆಸರುಗಳು ಈ ಹಕ್ಕಿಗಿವೆ. ಕಾಡಿನ ನಡುವೆ ಇರುವ ಮೈದಾನದಲ್ಲಿ, ಗದ್ದೆಗಳಲ್ಲಿ, ಜೋಡಿ ಹಕ್ಕಿಗಳಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಕಂಡು ಬರುತ್ತವೆ. ಕಾಳು, ಹಣ್ಣುಗಳು ಕೀಟಗಳು, ಹೂವಿನ ಮಕರಂದ ಈ ಹಕ್ಕಿಯ ಆಹಾರವಾಗಿದೆ.
ಬಹಳ ವೇಗವಾಗಿ ಹಾರುತ್ತದೆ. ನೆಲದಿಂದ ಮೇಲೆ ಹಾರ ಬೇಕಾದರೆ ರೆಕ್ಕೆಯನ್ನು ಜೋರಾಗಿ ಪಟಪಟನೆ ಬಡಿಯುತ್ತದೆ. ಹಾರುವ ವೇಗಕ್ಕೆ ಸಿಳ್ಳೆ ಹೊಡೆದಂತೆ ಸದ್ದಾಗುತ್ತದೆ. ತನ್ನ ವಿಶೇಷವಾದ ಕೂಗಿನಿಂದ ಗುರುತಿಸಲ್ಪಡುತ್ತದೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ , #ಚಿತ್ರ : ಯು ರಾಧಾಕೃಷ್ಣ ರಾವ್ ಬಾಳಿಲ
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…