#ಚಿಲಿಪಿಲಿ | ಗದ್ದೆ ಮಿಂಚುಳ್ಳಿ | ನಾಚಿಕೆಯ ಸ್ವಭಾವದ ಈ ಹಕ್ಕಿ ಹೀಗಿರುತ್ತದೆ….|

March 4, 2022
9:57 PM

ಮಿಂಚುಳ್ಳಿ ಮೊದಲ ನೋಟದಲ್ಲೇ ಆಕರ್ಷಿಸುವ ಹಕ್ಕಿ. ಹಾಗೆಂದು ಇದು ಅಪರೂಪದ ಹಕ್ಕಿಯಲ್ಲ. ನಮ್ಮ ಸುತ್ತಮುತ್ತಲೇ ಇರುವ ಹಕ್ಕಿಯಾಗಿದೆ. ನಿತ್ಯವೂ ನಮ್ಮ ಮನೆಯ ಹಿಂದೆಯೇ ಕಂಡು ಬರುತ್ತವೆ. ಗುಡ್ಡೆಯಲ್ಲಿರುವ ಬಿಲದಲ್ಲಿ ಈ ಹಕ್ಕಿ ತನ್ನ ಗೂಡು ಮಾಡಿ ಕೊಂಡಿದೆ. ಗಾತ್ರ ( 28 cm) ಈ ಹಕ್ಕಿಯದಾಗಿದೆ.

ಈ ಹಕ್ಕಿ ಜಗತ್ತಿನಾದ್ಯಂತ ಕಂಡು ಬರುತ್ತವೆ. ಭಾರತದಲ್ಲಿ 11 ಬಗೆಯ ಮಿಂಚುಳ್ಳಿಗಳಿವೆ. ಇವು ನಾಚಿಕೆಯ ಸ್ವಭಾವದ ಪಕ್ಷಿಗಳಾಗಿವೆ. ಹೊಟ್ಟೆ, ತಲೆಯಲ್ಲಿ ‌ ಚಾಕಲೇಟ್ ಬಣ್ಣಗಳಿವೆ. ಇದರ ಎದೆ , ಕುತ್ತಿಗೆಯ ಮೇಲೆ ಬಿಳಿ ಬಣ್ಣದ ಮಚ್ಚೆಯಿದೆ. ಕೆಂಪಿನ ಬಲಿಷ್ಟ ಕೊಕ್ಕಿದೆ. ಹಾರುವಾಗ ರೆಕ್ಕೆಯಲ್ಲಿರುವ ಬಿಳಿಬಣ್ಣ ಎದ್ದು ಕಾಣುತ್ತದೆ. ಮಿಡತೆ, ಓತಿಕ್ಯಾತ,ಕಪ್ಪೆಗಳು ಇವುಗಳ ಪ್ರಮುಖ ಆಹಾರ. ಸ್ವರ ಸ್ವಲ್ಪ ಕರ್ಕಶವೆನಿಸುವಂತಿದೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ | # ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಹೊಸರುಚಿ | ಮನೆಲ್ಲೇ ಸುಲಭವಾಗಿ ಮಾಡುವ “ಉಪ್ಪು ಸೊಳೆ ಬೋಳು ಬೆಂದಿ”
March 7, 2026
10:14 PM
by: ದಿವ್ಯ ಮಹೇಶ್
ಅಂಕಗಳಾಚೆಗೆ ಶಿಕ್ಷಣದ ಉದ್ದೇಶ
March 6, 2026
6:56 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror