ಮಿಂಚುಳ್ಳಿ ಮೊದಲ ನೋಟದಲ್ಲೇ ಆಕರ್ಷಿಸುವ ಹಕ್ಕಿ. ಹಾಗೆಂದು ಇದು ಅಪರೂಪದ ಹಕ್ಕಿಯಲ್ಲ. ನಮ್ಮ ಸುತ್ತಮುತ್ತಲೇ ಇರುವ ಹಕ್ಕಿಯಾಗಿದೆ. ನಿತ್ಯವೂ ನಮ್ಮ ಮನೆಯ ಹಿಂದೆಯೇ ಕಂಡು ಬರುತ್ತವೆ. ಗುಡ್ಡೆಯಲ್ಲಿರುವ ಬಿಲದಲ್ಲಿ ಈ ಹಕ್ಕಿ ತನ್ನ ಗೂಡು ಮಾಡಿ ಕೊಂಡಿದೆ. ಗಾತ್ರ ( 28 cm) ಈ ಹಕ್ಕಿಯದಾಗಿದೆ.
ಈ ಹಕ್ಕಿ ಜಗತ್ತಿನಾದ್ಯಂತ ಕಂಡು ಬರುತ್ತವೆ. ಭಾರತದಲ್ಲಿ 11 ಬಗೆಯ ಮಿಂಚುಳ್ಳಿಗಳಿವೆ. ಇವು ನಾಚಿಕೆಯ ಸ್ವಭಾವದ ಪಕ್ಷಿಗಳಾಗಿವೆ. ಹೊಟ್ಟೆ, ತಲೆಯಲ್ಲಿ ಚಾಕಲೇಟ್ ಬಣ್ಣಗಳಿವೆ. ಇದರ ಎದೆ , ಕುತ್ತಿಗೆಯ ಮೇಲೆ ಬಿಳಿ ಬಣ್ಣದ ಮಚ್ಚೆಯಿದೆ. ಕೆಂಪಿನ ಬಲಿಷ್ಟ ಕೊಕ್ಕಿದೆ. ಹಾರುವಾಗ ರೆಕ್ಕೆಯಲ್ಲಿರುವ ಬಿಳಿಬಣ್ಣ ಎದ್ದು ಕಾಣುತ್ತದೆ. ಮಿಡತೆ, ಓತಿಕ್ಯಾತ,ಕಪ್ಪೆಗಳು ಇವುಗಳ ಪ್ರಮುಖ ಆಹಾರ. ಸ್ವರ ಸ್ವಲ್ಪ ಕರ್ಕಶವೆನಿಸುವಂತಿದೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ | # ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ.
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…
ಪಡಿತರ ಚೀಟಿಗೆ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…
ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…
ಎಥೆನಾಲ್ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…