ಚಿಲಿಪಿಲಿ | ಹೂವಿನ ಹಕ್ಕಿಯ ಬಣ್ಣದ ಲೋಕದಲ್ಲಿ ಕಪ್ಪು ಸೂರಕ್ಕಿ

May 13, 2021
11:03 PM
ಕಪ್ಪು ಸೂರಕ್ಕಿ(ಗಂಡು) Loten’s sun bird.( Linnaeus)
ಬೆಳಗ್ಗೆ  ಗರಿಕೆ ಕೊಯ್ಯಲು ಕೆಳಗೆ ಬಗ್ಗುತ್ತಿದ್ದಂತೆ  ಕಿವಿಯ ಪಕ್ಕದಲ್ಲೇನೋ  ಹಾರಿದಂತಾಯಿತು. ಅದೇನೆಂದು ನೋಡಿದಾಗ  ದಾಸವಾಳ ಹೂವಿನ ಗಿಡದಿಂದ ಹಾರಿದ ಪುಟ್ಟ ಕಪ್ಪು ಹಕ್ಕಿ.  ಚೂಪಾಗಿ ಬಗ್ಗಿರುವ ಕೊಕ್ಕಿನ  ಮಿರುಗುವ  ಹಸಿರು ಮಿಶ್ರಿತ ಕಪ್ಪು   ಸೂರಕ್ಕಿ. ಹೂವಿನ ಹಕ್ಕಿಯೆಂದೇ ಗುರುತಿಸ್ಪಡುತ್ತದೆ. ಕಮಾನಿನಂತೆ ಬಾಗಿರುವ ಕೊಕ್ಕು  ಈ ಹಕ್ಕಿಯ‌ ಪ್ರಮುಖ ಆಕರ್ಷಣೆ.
ಈ ಹಕ್ಕಿ ತನ್ನ ಉದ್ದನೆಯ ಕೊಕ್ಕಿನಿಂದ  ಸ್ಟ್ರಾ ದಂತೆ ಹೂವಿನೊಳಗಿನಿಂದ ಮಕರಂದವನ್ನು ಹೀರುತ್ತವೆ.  ಹಾಗಾಗಿ ಹೂ ಅರಳುವ ಸಮಯದಲ್ಲಿ ತೋಟದಲ್ಲಿ ಈ ಹಕ್ಕಿಗಳದ್ದೇ ಪಾರುಪತ್ಯ.  ಮಕರಂದದೊಂದಿಗೆ ,ಜೇಡ, ಕೀಟಗಳೂ ಇವುಗಳ ಆಹಾರವಾಗಿವೆ.  ಪ್ರಪಂಚದಾದ್ಯಂತ 130 ಜಾತಿಯ ಸೂರಕ್ಕಿಗಳನ್ನು ಗುರುತಿಸಲಾಗಿದೆ.
ಪುಟ್ಟ ಹಕ್ಕಿಗಳಾದ ( 13cm) ಇವುಗಳು  ಗಂಡು ಹೆಣ್ಣುಗಳು  ನೋಡಲು    ವಿಭಿನ್ನವಾಗಿರುತ್ತವೆ.  ಗಂಡು   ಆಕರ್ಷಕ  ಹೊಳೆಯುವ ಕಪ್ಪಿನಲ್ಲಿದ್ದರೆ, ಹೆಣ್ಣು ಹಕ್ಕಿ ಪೇಲವ ಬಣ್ಣದಲ್ಲಿರುತ್ತದೆ. ‌
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಚಿತ್ರ : ಯು.ರಾಧಾಕೃಷ್ಣ ರಾವ್‌, ಬಾಳಿಲ
Advertisement
Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಾಯಾಮೃಗ ಮಾಯಾಮೃಗ….
January 30, 2026
7:35 AM
by: ಪ್ರಬಂಧ ಅಂಬುತೀರ್ಥ
ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?
January 28, 2026
8:18 PM
by: ಡಾ.ಚಂದ್ರಶೇಖರ ದಾಮ್ಲೆ
ಹಳ್ಳಿ ಬದುಕು ಶಾಪವಲ್ಲ… ಸಮಾಜದ ಮನಸ್ಥಿತಿ ಶಾಪ…!
January 28, 2026
7:09 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror