ಕೋಗಿಲೆ, (Asian koel) ಕೋಕಿಲ್,ಕೋಯರಾ.( ಕುಕುಲಿಡೆ ಕುಟುಂಬ)
ಕೋಗಿಲೆಯೆಂದರೆ ನೆನಪಾಗುವುದು ಅದರ ದನಿ. ಸುಂದರವಾಗಿ , ಇಂಪಾಗಿ ಹಾಡುವವರನ್ನು ಯಾವಾಗಲೂ ಕೋಗಿಲೆಯ ಕಂಠಕ್ಕೆ ಹೋಲಿಸುತ್ತಾರೆ. ಪಕ್ಕನೆ ಕಾಗೆಯನ್ನೇ ನೋಡಿದಂತಾಗುತ್ತದೆ. ತರಗತಿಯಲ್ಲಿ ಕಲಿತದ್ದು ಅದನ್ನೇ ಅಲ್ಲವೇ ! ಕೋಗಿಲೆ ಎಂದಿಗೂ ಗೂಡು ಕಟ್ಟಲಾರದು, ಅದು ಏನಿದ್ದರೂ ಕಾಗೆಯ ಗೂಡಲ್ಲೇ ಮೊಟ್ಟೆ ಇಡುತ್ತದೆ. ಕಾಗೆ ಹಾಗೂ ಮರಿಗಳಿಗೆ ಮೋಸ ಮಾಡುತ್ತದೆ. ಇದು ಕೋಗಿಲೆಯ ಅಭ್ಯಾಸ.
ಗಂಡು ಕೋಗಿಲೆಯು ಹೊಳಪಿನ ಕಪ್ಪು ಬಣ್ಣದ ಮದ್ಯಮ(42cm) ಗಾತ್ರದ ಹಕ್ಕಿ. ಹಳದಿ ಬೆರೆತ ಕೊಕ್ಕು, ಕಡು ಕೆಂಪು ಬಣ್ಣದ ಕಣ್ಣು ಗಂಡು ಕೋಗಿಲೆಯದಾಗಿರುತ್ತದೆ.
ಇನ್ನೂ ಹೆಣ್ಣು ಕೋಗಿಲೆ ವಿಭಿನ್ನ ವಾಗಿರುತ್ತದೆ. ಕಂದು ಮೈ ಬಣ್ಣವಾಗಿದ್ದು, ಮೈತುಂಬಾ ಬಿಳಿ ಚುಕ್ಕಿಗಳಿವೆ. ಹಣ್ಣುಗಳು, ಅದರಲ್ಲೂ ಪಪ್ಪಾಯಿ ಹಣ್ಣು ಕೋಗಿಲೆಗೆ ಬಹು ಪ್ರಿಯವಾದುದು. ಹುಳು ಹುಪ್ಪಟೆಗಳೂ ಇವುಗಳ ಆಹಾರವಾಗಿವೆ. ನೆಲಕ್ಕಿಳಿಯದ ಈ ಹಕ್ಕಿಗಳು ಬೇಸಿಗೆಯಲ್ಲಿ ಲವಲವಿಕೆಯಿಂದ ಇರುತ್ತವೆ. ಎಂದಿಗೂ ಗೂಡು ಕಟ್ಟದು.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು ಬಾಳಿಲ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…