ಕಿತ್ತಳೆ ತಲೆಯ ನೆಲ ಸಿಳ್ಳಾರ (Orange headed thrush) Zoothera citrina citrina Latham
ಬಣ್ಣ ಬಣ್ಣದ ಮುದ್ದಾದ ಚೆಂಡು ಉರುಳುವಂತೆ ಅತ್ತ ಇತ್ತ ಚುರುಕಾಗಿ ನೆಲದ ಮೇಲೆ ಚಲಿಸುವ ಈ ಹಕ್ಕಿ ದಟ್ಟ ಕಾಡಿನ ತರಗೆಲೆಗಳ ನಡುವೆ ಪುಟು ಪುಟುನೆ ಓಡಾಡಿಕೊಂಡಿರುತ್ತವೆ. ಬಣ್ಣ ಬಣ್ಣದ ಹಕ್ಕಿಯೇ ಕಂದು ತಲೆ ನೆಲ ಸಿಳ್ಳಾರ. ಮೈನಾ ಹಕ್ಕಿಯ( 21 cm) ಗಾತ್ರದ ಈ ಹಕ್ಕಿ ಗುಂಡು ಗುಂಡಾಗಿದೆ.

ಹಕ್ಕಿಯ ರೆಕ್ಕೆ ಬೆನ್ನು, ಬಾಲಗಳು ತೆಳು ನೀಲಿ ಬಣ್ಣದ್ದಾಗಿದೆ. ತಲೆ, ಎದೆ ಹಾಗೂ ಹೊಟ್ಟೆಯ ಭಾಗ ಕಿತ್ತಳೆ ಬಣ್ಣದಲ್ಲಿದೆ.. ಕುತ್ತಿಗೆ ಬೆಳ್ಳಗಿದ್ದು, ಕೆನ್ನೆಯ ಮೇಲೆ ಕರಿ ಪಟ್ಟೆಗಳಿವೆ, ಕಾಲುಗಳು ಉದ್ದವಾಗಿರುತ್ತದೆ. ಹೆಣ್ಣು ಹಕ್ಕಿ ತಿಳಿ ಹಸಿರು ಬಣ್ಣವಿರುತ್ತದೆ, ಕೊಕ್ಕು ಕೆಂಬಣ್ಣ. ಮಳೆಗಾಲ ಚಳಿಗಾಲದಲ್ಲಿ ತೀರಾ ಮೌನಿಯಾಗಿದ್ದು ಗೂಡು ಕಟ್ಟುವ ಜೂನ್ ಸಮಯದಲ್ಲಿ ಸುಮಧುರವಾಗಿ ಶಿಳ್ಳೆಯ ದನಿಯಲ್ಲಿ ಹಾಡುತ್ತದೆ. ದನಿಯನ್ನು ಹಿಗ್ಗಿಸಿ ಕುಗ್ಗಿಸಿ ಕೂಗುವ ಪರಿ ಆಕರ್ಷಿಸದೆ ಇರದು.
ಪಟ್ಟೆ ನೆಲಗುಟುರಹಕ್ಕಿ, ಇದಕ್ಕಿರುವ ಇನ್ನೊಂದು ಹೆಸರು. ಹಿಮಾಲಯ, ತಮಿಳುನಾಡು ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಯು ರಾಧಾಕೃಷ್ಣ ರಾವ್ ಬಾಳಿಲ


Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel