ತನ್ನ ವರ್ಣಮಯ ಬಣ್ಣಗಳಿಂದಲೇ ಗುರುತಿಸಲ್ಪಡುವ ಈ ಹಕ್ಕಿಯೇ ನೀಲಿಬಾಲದ ಜೇನ್ನೋಣ ಬಾಕ ಅಥವಾ ನೀಲಿ ಬಾಲದ ಕಳ್ಳಿಪೀರ. ಹಸಿರು ಜೇನ್ನೋಣ ಬಾಕದಿಂದ ಗಾತ್ರದಲ್ಲಿ ದೊಡ್ಡದು(31 cm). ಹಲವು ವರ್ಣಗಳಲ್ಲಿರುವ ಇವುಗಳ ಬಾಲದ ಭಾಗ ನೀಲಿಯಾಗಿರುತ್ತದೆ.
ಗುಂಪಾಗಿ ಇರುವ ಇವುಗಳು ಬೇಟೆಯನ್ನು ದೂರದಿಂದಲೇ ಗುರುತಿಸುತ್ತವೆ. ಎತ್ತರದ ಪ್ರದೇಶದಲ್ಲಿ, ವಿದ್ಯುತ್ ತಂತಿಗಳ ಮೇಲೆ ಹೆಚ್ಚಾಗಿ ಕಂಡು ಬರುತ್ತವೆ. ತಮ್ಮ ಬೇಟೆಯನ್ನು ಗುರುತಿಸುವ ಅನುಕೂಲತೆಗಾಗಿ ಈ ಪ್ರದೇಶಗಳ ನ್ನು ಆಯ್ದುಕೊಳ್ಳುತ್ತವೆ.
ಗಂಡು ಹೆಣ್ಣು ಹಕ್ಕಿಗಳೆರಡೂ ಗೂಡು ಕಟ್ಟುವುದರಲ್ಲಿ , ಮೊಟ್ಟೆ, ಮರಿಗಳ ರಕ್ಷಣೆಯಲ್ಲಿ , ಆಹಾರ ಸಂಗ್ರಹದಲ್ಲಿ ಒಟ್ಟಿಗೆ ಪಾಲ್ಗೊಳ್ಳುತ್ತವೆ. ಮಾರ್ಚ್ ನಿಂದ ಜೂನ್ ವರೆಗೆ ಮೊಟ್ಟೆ ಇಡುವ ಕಾಲ. ಈಶಾನ್ಯ ಭಾರತ, ನೇಪಾಳ, ಬಾಂಗ್ಲಾ ದೇಶಗಳಲ್ಲಿ ಸಂತಾನಾಭಿವೃದ್ಧಿ ಮಾಡಿ ಚಳಿಗಾಲದ ಹೊತ್ತಿಗೆ ನಮ್ಮಲ್ಲಿಗೆ ಬರುತ್ತವೆ. ಹೆಚ್ಚಾಗಿ ನೀರಿನ ಆಶ್ರಯದ ಪಕ್ಕದಲ್ಲಿರಲು ಇಷ್ಟ ಪಡುತ್ತವೆ.