Orintal magpie robin bird, ಮಡಿವಾಳ ಹಕ್ಕಿ.(copsychus saularie)
ಮುಂಜಾವಿನಲ್ಲಿ ಹೂಗಳನ್ನು ಕೊಯ್ಯುತ್ತಿರಬೇಕಾದರೆ, ಅಲ್ಲೇ ತನ್ನಿಷ್ಟದ ಮರದ ಮೇಲೆ ಕುಳಿತು ಈ ಹಕ್ಕಿ ಹಾಡುತ್ತಿದ್ದರೆ ಕತ್ತು ತಿರುಗಿಸಿ ನೋಡದಿರಲಾಗದು. ನೆಲವ ಕೆದಕಿ, ಹುಳು ಹುಪ್ಪಟೆಗಳನ್ನು ತಿನ್ನುತ್ತಾ ನಮ್ಮ ಅಕ್ಕಪಕ್ಕದಲ್ಲೇ ಕಂಡು ಬರುವ ಹಕ್ಕಿ ಈ ಮಡಿವಾಳ ಹಕ್ಕಿ.
ಕಪ್ಪು ಬಿಳುಪಿನ ಬಣ್ಣದಲ್ಲಿ ಸೊಗಸಾಗಿ, ಮಡಿಯಾಗಿ ಕಾಣುತ್ತಿರುವುದರಿಂದಲೇ ಬಹುಶಃ ಮಡಿವಾಳ ಹಕ್ಕಿಯೆಂದು ಹೆಸರು ಬಂದಿದೆಯೇನೋ! ಕೆರೆಕಟ್ಟೆಗಳ ಬದಿಯಲ್ಲಿ ಬಟ್ಟೆ ಒಗೆಯುವ ಕಲ್ಲುಗಳ ಹತ್ತಿರ ಹೆಚ್ಚಾಗಿ ಕಂಡು ಬರುತ್ತವೆ. ಗಾತ್ರದಲ್ಲಿ (19 ರಿಂದ 20 cm) ಇರುತ್ತದೆ. ಮಧುರವಾದ ಸಿಳ್ಳೆಯ ದನಿಯಿಂದ ತನ್ನತ್ತ ಸೆಳೆಯುತ್ತದೆ. ಅಲ್ಲದೆ ಇತರ ಹಕ್ಕಿಗಳ ಸ್ವರಗಳ ಅನುಕರಣೆಯನ್ನೂ ಮಾಡುತ್ತದೆ. ‘ಹಾಡು ಹಕ್ಕಿ’ ಎಂಬ ಹೆಸರೂ ಇದೆ. ಕಪ್ಪು , ಬಿಳುಪು ಈ ಹಕ್ಕಿಯ ಬಣ್ಣ. ಒಂದು ಕಾಲದಲ್ಲಿ ಪಂಜರದಲ್ಲೂ ಈ ಹಕ್ಕಿಯನ್ನು ಸಾಕುತ್ತಿದ್ದುದರಿಂದ ‘ಕೇಜ್ ಬರ್ಡ್ ‘ಎಂದೂ ಹೇಳುತ್ತಾರೆ. ಭಾರತ ಉಪಖಂಡ, ಆಗ್ನೇಯ ಏಷ್ಯಾದ ಭಾಗಗಳಲ್ಲಿ ಕಂಡುಬರುತ್ತವೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ : ರಾಧಾಕೃಷ್ಣ ರಾವ್ ಯು ಬಾಳಿಲ