ಬಣ್ಣ ಬಣ್ಣದ ಹಕ್ಕಿಗಳು ಸುಲಭವಾಗಿ ಜನರನ್ನು ತನ್ನತ್ತ ಸೆಳೆಯುತ್ತವೆ. ಕೆಮ್ಮೀಸೆ ಪಿಕಳಾರ ಸಾಮಾನ್ಯವಾಗಿ ಕಂಡು ಬರುತ್ತವೆ ಇವುಗಳ ವರ್ಣ ವ್ಯತ್ಯಾಸಗಳನ್ನಾಧರಿಸಿ ಐದು ಉಪಜಾತಿಗಳಾಗಿ ಗುರುತಿಸಲಾಗಿದೆ. ಅವುಗಳಲ್ಲಿ ಒಂದು ಕೆಂಪು ಕುತ್ತಿಗೆಯ ಪಿಕಳಾರವಾಗಿದೆ.
ಬುಲ್ ಬುಲ್ ಗಾತ್ರದ ಹಕ್ಕಿ( 18 cm, ) ಇದಾಗಿದೆ. ಮೈಬಣ್ಣವು ಹೊಂಬಣ್ಣದ ಅರಶಿನವಾಗಿದ್ದು( ಆಲಿವ್ ಆಯಿಲ್ ಬಣ್ಣ) ರೆಕ್ಕೆಗಳು ಕಂದು ಬಣ್ಣದ್ದಾಗಿವೆ. ಕೊಕ್ಕಿನ ಕೆಳಭಾಗ( ಗಂಟಲಿನ ಭಾಗ) ಕೆಂಪಾಗಿದ್ದು, ತಲೆಯ ಮೇಲೆ ಇತರ ಪಿಕಳಾರದಂತೆ ಜುಟ್ಟಿನಂತಹ ರಚನೆಯಿರುವುದು. ಜೋಡಿಗಳಾಗಿ ಅಥವಾ ಚದುರಿದ ಗುಂಪುಗಳಾಗಿ ಕಂಡು ಬರುತ್ತವೆ. ನಿತ್ಯ ಹರಿದ್ವರ್ಣದ ಕಾಡುಗಳು ಇವುಗಳಿಗೆ ಇಷ್ಟ. ಇವುಗಳು ಸಣ್ಣಪುಟ್ಟ ಕೀಟಗಳನ್ನು, ಹಣ್ಣುಗಳನ್ನು, ತಿಂದು ಜೀವಿಸುತ್ತವೆ.
ಪೊದೆಗಳ ಕವಲುಗಳಲ್ಲಿ ಪಾಚಿ ಹಾಗೂ ಹುಲ್ಲುಗಳನ್ನು ಸಂಗ್ರಹಿಸಿ ಬಟ್ಟಲಾಕಾರದ ಗೂಡು ಕಟ್ಟುತ್ತವೆ.
ಬರಹ :
# ಅಶ್ವಿನಿಮೂರ್ತಿ ಅಯ್ಯನಕಟ್ಟೆ # ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel