ಚೀನಾವು ವಿಯೆಟ್ನಾಂನಿಂದ ಅಡಿಕೆ ಆಮದು ಮಾಡುವ ಪ್ರಕ್ರಿಯೆಲ್ಲಿ ಹೆಚ್ಚು ಆಸಕ್ತಿ ತೋರಿಸಿದೆ. ಈ ಬಾರಿ ಅಂದರೆ ಕಳೆದ 9 ತಿಂಗಳಲ್ಲಿ ವಿಯೆಟ್ನಾಂನಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಆಮದು ಮಾಡಿಕೊಂಡಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಡಿಕೆಯ ಪೂರೈಕೆಯಲ್ಲಿನ ವ್ಯತ್ಯಾಸದ ಕಾರಣದಿಂದ ಆಮದು ಹೆಚ್ಚಿಸಿಕೊಂಡಿದೆ.…..ಮುಂದೆ ಓದಿ….
ಚೀನಾದ ಲ್ಲಿ ಹೆಚ್ಚು ಅಡಿಕೆ ಉತ್ಪಾದಿಸುವ ಹೈಯಾನ್ ದ್ವೀಪ ಪ್ರಾಂತ್ಯವು ಚಂಡಮಾರುತಗಳಿಂದ ಹಾನಿಗೊಳಗಾಗಿತ್ತು, ಹಾಗೂ ಹವಾಮಾನದ ಕಾರಣದಿಂದ ಉತ್ಪಾದನೆಯಲ್ಲಿ ಕೊರತೆಯೂ ಕಂಡುಬಂದಿತ್ತು. ಹೀಗಾಗಿ ಚೀನಾವು ವಿಯೆಟ್ನಾಂ ಮತ್ತು ಇಂಡೋನೇಷ್ಯಾದಂತಹ ಇತರ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಚೀನಾ ಆಮದು ಕಾರಣದಿಂದ ವಿಯೆಟ್ನಾಂನಲ್ಲೂ ಅಡಿಕೆ ಧಾರಣೆ ಏರಿಕೆಯಾಗಿದೆ.
ಚೀನಾದಲ್ಲಿ ಅಡಿಕೆಯನ್ನು ಕ್ಯಾಂಡಿ ತಯಾರಿಸಲು ಬಳಕೆ ಮಾಡಲಾಗುತ್ತದೆ. ಅಡಿಕೆಯಲ್ಲಿ ಅರೆಕೋಲಿನ್ ಅಂಶಗಳ ಪ್ರಭಾವ ಕಡಿಮೆ ಮಾಡಲು ಮೌಲ್ಯವರ್ಧನೆ ಮಾಡಿ ಎಚ್ಚರಿಕೆಯಿಂದ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಚೀನಾದಲ್ಲಿ ಅಡಿಕೆಯ ಮೌಲ್ಯವರ್ಧನೆಯು ವೇಗ ಪಡೆದಿದೆ, ಕ್ಯಾಂಡಿ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಅಡಿಕೆ ಆಮದು ಪ್ರಮಾಣವೂ ಏರಿಕೆಯಾಗಿದೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…