Advertisement
ಗ್ರಾಮೀಣ ಧ್ವನಿ

ಬಣ್ಣಗಳು ಕ್ಯಾನ್ವಾಸ್‌ನಲ್ಲಿ ಮಾತ್ರವಲ್ಲ, ನಮ್ಮ ಮನಸ್ಸುಗಳಲ್ಲೂ ಅರಳಲಿ…

Share

“ಚಿತ್ರ ಬಿಡಿಸಿದರೆ ಏನು ಲಾಭ? ಅದರಿಂದ ಹೊಟ್ಟೆ ತುಂಬುತ್ತದೆಯೇ? ಸುಮ್ಮನೆ ಸಮಯ ವ್ಯರ್ಥವಲ್ಲವೇ?” ಇಂತಹ ಮಾತುಗಳನ್ನು ನಮ್ಮ ಸಮಾಜದಲ್ಲಿ ಆಗಾಗ ಕೇಳುತ್ತಿರುತ್ತೇವೆ. ಆದರೆ ಒಂದು ಚಿತ್ರ ಕೇವಲ ಬಣ್ಣಗಳ ಸಂಯೋಜನೆಯಲ್ಲ. ಅದು ಕಲಾವಿದನ ಮನಸ್ಸಿನ ಮಾತು. ಅವನ ಕನಸು, ಸಂಭ್ರಮ, ಸಂವೇದನೆ, ಬದುಕಿನ ಅನುಭವಗಳೆಲ್ಲವೂ ಆ ಬಣ್ಣಗಳಲ್ಲಿ ಅಡಗಿರುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ಕೇವಲ ಕಣ್ಣುಗಳಿದ್ದರೆ ಸಾಲದು; ಮೌನವಾಗಿ ಕಲೆಯನ್ನು ಅನುಭವಿಸುವ ಮನಸ್ಸೂ ಬೇಕು.

ಸುಳ್ಯದಲ್ಲಿ  ರೋಟರಿ ಕ್ಲಬ್‌ ಸುಳ್ಯ, ಇಂಟರಾಕ್ಟ್‌ ಕ್ಲಬ್‌, ರೋಟರಿ ಶಾಲೆ ಸುಳ್ಯ, ಕ್ರಿಯೇಟಿವ್‌ ಸ್ಕೂಲ್‌ ಆಫ್‌ ಆರ್ಟ್‌ ಸುಳ್ಯ, ಸುದ್ದಿ ಮೀಡಿಯಾ ಹಾಗೂ ರಿಷಿ ಫ್ಯಾನ್ಸಿ ಮತ್ತು ಟಾಯ್ಸ್‌ ಅವರ ಸಹಯೋಗದೊಂದಿಗೆ ರೋಟರಿ  ಶಾಲಾ ಆವರಣದಲ್ಲಿ ನಡೆದ “ವರ್ಣ ಚಿತ್ತಾರ ಚಿತ್ರಜಾತ್ರೆ”  ಹೊಸ ಆಲೋಚನೆಗೆ ಬಾಗಿಲು ತೆರೆದಿದೆ. ಸುಳ್ಯದ ಮಟ್ಟಿಗೆ ಇದೊಂದು ವಿಭಿನ್ನ ಪ್ರಯತ್ನ. ಕಲಾವಿದರನ್ನು ನಾಲ್ಕು ಗೋಡೆಗಳ ನಡುವಿನಿಂದ ಜನರ ನಡುವೆ ಕರೆತಂದ ಪ್ರಯೋಗ. ಅಲ್ಲಿ ಕೇವಲ ಚಿತ್ರಗಳ ಪ್ರದರ್ಶನವಿರಲಿಲ್ಲ. ಕಲಾವಿದರ ಕನಸುಗಳ ಪ್ರದರ್ಶನವಿತ್ತು. ಅವರ ಪರಿಶ್ರಮವನ್ನು ತೋರಿಸುವ ಅವಕಾಶವಿತ್ತು. ಪ್ರತಿಭೆಗೆ ಗೌರವ ನೀಡುವ ಮನಸ್ಸುಗಳಿದ್ದವು.

50 ರೂಪಾಯಿಯಿಂದ ಆರಂಭವಾಗಿ 32 ಸಾವಿರ ರೂಪಾಯಿವರೆಗೂ ಕಲಾಕೃತಿಗಳು ಸುಳ್ಯದಲ್ಲಿ ಮಾರಾಟವಾದವು ಎಂಬುದು ಸಣ್ಣ ಸಂಗತಿಯಲ್ಲ. ಕಲೆಗೆ ಬೆಲೆ ಇಲ್ಲ ಎನ್ನುವ ಸಮಾಜದಲ್ಲೂ ಕಲೆಯನ್ನು ಗೌರವಿಸುವ ಮನಸ್ಸುಗಳಿವೆ ಎಂಬುದನ್ನು ಈ ಚಿತ್ರಜಾತ್ರೆ ತೋರಿಸಿಕೊಟ್ಟಿದೆ.

ಸ್ಥಳದಲ್ಲೇ ಚಿತ್ರರಚನೆ, ಕ್ಯಾರಿಕೇಚರ್‌ಗಳ ಸೃಷ್ಟಿ, ಕಲಾವಿದರ ಕೈಚಳಕ… ಇವೆಲ್ಲವನ್ನೂ ಕಣ್ಣಾರೆ ಕಂಡವರು ಅಚ್ಚರಿಪಟ್ಟರು. ಒಂದು ಖಾಲಿ ಹಾಳೆಯ ಮೇಲೆ ಕೆಲವೇ ಕ್ಷಣಗಳಲ್ಲಿ ಜೀವಂತ ಭಾವನೆಗಳು ಮೂಡುವುದನ್ನು ನೋಡುವುದೇ ಒಂದು ಅದ್ಭುತ ಅನುಭವ.  ಅಂತರಾಷ್ಟ್ರೀಯ ಚಿತ್ರಕಲಾವಿದ ವಿಲಾಸ ನಾಯಕ್ ಅವರಂತಹ ಕಲಾವಿದರು ಈ ಜಾತ್ರೆಯಲ್ಲಿ ಭಾಗವಹಿಸಿ ಶುಭಹಾರೈಸಿದ್ದು ಯುವ ಕಲಾವಿದರಿಗೆ ಮತ್ತಷ್ಟು ಪ್ರೇರಣೆ ನೀಡಿದ ಸಂಗತಿ. ಇಡೀ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕಲಾವಿದರುಗಳಾದ ಪ್ರಸನ್ನ ಐವರ್ನಾಡು ಹಾಗೂ ಶ್ರೀ ಹರಿ ಪೈಂದೋಡಿ ಅವರ ಶ್ರಮ ಕಂಡುಬಂದಿತ್ತು.

ಈ ಚಿತ್ರಜಾತ್ರೆಗೆ ಸುಳ್ಯದ ಕೆಲವು ಸಹಕಾರಿ ಸಂಸ್ಥೆಗಳು ಆಯೋಜಕರ ಈ ಪ್ರಯತ್ನಕ್ಕೆ ಸಹಕಾರ ನೀಡಿದ್ದವು. ವ್ಯವಹಾರ, ಲಾಭ, ನಷ್ಟಗಳ ಲೆಕ್ಕಾಚಾರದ ನಡುವೆಯೂ ಸಮಾಜಕ್ಕೆ ಕಲೆ ಬೇಕು, ಕಲಾವಿದರಿಗೆ ಪ್ರೋತ್ಸಾಹ ಬೇಕು ಎನ್ನುವ ಸಂವೇದನೆ ಆ ಸಂಸ್ಥೆಗಳಲ್ಲಿ ಇರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.

ಕಲೆ ಮನುಷ್ಯನನ್ನು ಕೇವಲ ಕಲಾವಿದನನ್ನಾಗಿ ಮಾಡುವುದಿಲ್ಲ; ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಳ್ಳಬಲ್ಲ ಸಂವೇದನಾಶೀಲ ಮನುಷ್ಯನನ್ನಾಗಿಯೂ ಮಾಡುತ್ತದೆ. ಕಲಾವಿದ ಬೆಳೆಯಬೇಕಾದರೆ ಚಪ್ಪಾಳೆ ಮಾತ್ರ ಸಾಕಾಗುವುದಿಲ್ಲ. ಅವನ ಕಲಾಕೃತಿಯನ್ನು ನೋಡುವ ಕಣ್ಣುಗಳು ಬೇಕು. ಅದರ ಹಿಂದಿನ ಪರಿಶ್ರಮವನ್ನು ಗೌರವಿಸುವ ಮನಸ್ಸುಗಳು ಬೇಕು. ಸಾಧ್ಯವಾದಾಗ ಆ ಕಲಾಕೃತಿಯನ್ನು ಖರೀದಿಸಿ ಪ್ರೋತ್ಸಾಹಿಸುವ ಕೈಗಳೂ ಬೇಕು. ಕಲೆ ಜನರ ನಡುವೆ ಬಂದಾಗಲೇ ಅರಳುತ್ತದೆ. ಕಲಾವಿದನಿಗೆ ಸಮಾಜದ ಸಂಪರ್ಕ ಸಿಕ್ಕಾಗಲೇ ಅವನ ಸೃಜನಶೀಲತೆಗೆ ಹೊಸ ಆಯಾಮ ದೊರೆಯುತ್ತದೆ. ಸುಳ್ಯದ ಚಿತ್ರಜಾತ್ರೆ ಈ ದೃಷ್ಟಿಯಿಂದ ಒಂದು ಹೊಸ ಹೆಜ್ಜೆ.

ಸುಳ್ಯದಿಂದ ಆರಂಭವಾದ ಈ ಬಣ್ಣಗಳ ಪಯಣ ಇನ್ನಷ್ಟು ಊರುಗಳಿಗೆ ತಲುಪಬೇಕು. ಇನ್ನಷ್ಟು ಯುವ ಕಲಾವಿದರಿಗೆ ವೇದಿಕೆ ಸಿಗಬೇಕು. ಶಾಲಾ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೂ ಅವಕಾಶ ದೊರೆಯಬೇಕು. ಕಲಾಕೃತಿಗಳನ್ನು ನೋಡುವ, ಮೆಚ್ಚುವ, ಖರೀದಿಸುವ ಸಾಂಸ್ಕೃತಿಕ ಮನೋಭಾವ ಸಮಾಜದಲ್ಲಿ ಬೆಳೆಯಬೇಕು.

ಬಣ್ಣಗಳು ಕ್ಯಾನ್ವಾಸ್‌ನಲ್ಲಿ ಮಾತ್ರ ಅರಳಬಾರದು… ಅವು ನಮ್ಮ ಮನಸ್ಸುಗಳಲ್ಲೂ ಅರಳಬೇಕು. ಸುಳ್ಯದಲ್ಲಿ ಆರಂಭವಾದ ಈ ಸುಂದರ ಪ್ರಯತ್ನ ಮುಂದೆ ಸಾಗಲಿ. ಕಲಾವಿದರ ಕುಂಚಗಳು ಎಂದಿಗೂ ಮೌನವಾಗದಿರಲಿ. ಅವರ ಕನಸುಗಳಿಗೆ ಸಮಾಜವೇ ಕ್ಯಾನ್ವಾಸ್ ಆಗಲಿ…!

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Art is more than a combination of colours; it reflects an artist’s dreams, emotions and life experiences. The Chitra Jaatre held in Sullia brought artists closer to the public, offered young talents a platform and demonstrated that society still has people who value creativity. The event also highlights the importance of cultural sensitivity among institutions, community leaders and citizens. Supporting artists through appreciation and purchasing their work can help nurture a more creative and sensitive society.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

24 ದಿನಗಳಿಂದ ಸದ್ದಿಲ್ಲದೆ ಸಾಗುತ್ತಿದೆ ಸ್ವಚ್ಛತಾ ನಡಿಗೆ – ನಮ್ಮೂರಿನ ಸ್ವಚ್ಛತೆಯ ಜವಾಬ್ದಾರಿ ನಮಗೇ…

ಅಮರಮೂಡ್ನೂರು ಗ್ರಾಮದ ಕೃಷಿಕ ಶಿವರಾಂ ಪೈಲೂರು ಅವರು 24 ದಿನಗಳಿಂದ ಪ್ರತಿದಿನ ಏಕಾಂಗಿಯಾಗಿ…

20 hours ago

ಹವಾಮಾನ ವರದಿ | 17-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ; ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ!

ನವೆಂಬರ್ 18ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್…

22 hours ago

ಆಂಧ್ರ ಕರಾವಳಿಯತ್ತ ಅಕ್ವಾನ್ ಚಂಡಮಾರುತ

ನವೆಂಬರ್ 17ರಂದು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಅಲ್ಲಲ್ಲಿ ಚಳಿ ಮತ್ತು…

1 day ago

ಹವಾಮಾನ ವರದಿ | 16-11-2026 | ಅಕ್ವಾನ್ ಚಂಡಮಾರುತ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ನವೆಂಬರ್ 17ರಂದು ಕಾಸರಗೋಡು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ…

2 days ago

ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ಬೇಡ, ಪೋಷಕಾಂಶ ಸಮರ್ಥ ಬೆಳೆಗಳತ್ತ ಗಮನ ಹರಿಸಿ

ಕೃಷಿಯಲ್ಲಿ ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ನೀಡುವ ಬದಲು ಕಡಿಮೆ ಪೋಷಕಾಂಶ ಬಳಕೆಯಲ್ಲಿ ಉತ್ತಮ…

2 days ago

ರಬ್ಬರ್ ಬೆಲೆಯಲ್ಲಿ ಮತ್ತೆ ಇಳಿಕೆ : 15 ದಿನಗಳಲ್ಲಿ ಕೆ.ಜಿಗೆ ₹17 ಕುಸಿತ

ನವೆಂಬರ್ ಮೊದಲ ವಾರದಲ್ಲಿ ಕೆ.ಜಿಗೆ ₹300 ದಾಟಿದ್ದ ರಬ್ಬರ್ ಧಾರಣೆ ನವೆಂಬರ್ 16ರಂದು…

2 days ago