ಎ.10 : ಚೊಕ್ಕಾಡಿ ಹವ್ಯಕ ವಲಯೋತ್ಸವ | ಸಾಮೂಹಿಕ “ರಾಮ ತಾರಕ ಮಂತ್ರ ಜಪ” |

April 5, 2022
11:30 PM
Advertisement

ರಾಮಚಂದ್ರಾಪುರ ಮಠದ ಉಪ್ಪಿನಂಗಡಿ ಮಂಡಲದ ಚೊಕ್ಕಾಡಿ ವಲಯದ ವಲಯೋತ್ಸವ ಹಾಗೂ ಸಾಮೂಹಿಕ “ರಾಮ ತಾರಕ ಮಂತ್ರ ಜಪ” ಎ.10  ರಂದು ಚೊಕ್ಕಾಡಿ ಶ್ರೀ ರಾಮ ದೇವಾಲಯದಲ್ಲಿ ನಡೆಯಲಿದೆ ಎಂದು ಚೊಕ್ಕಾಡಿ ವಲಯಾಧ್ಯಕ್ಷ ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ‌ ತಿಳಿಸಿದ್ದಾರೆ.

Advertisement
Advertisement
Advertisement

ಎ.10 ರಂದು  ಪೂರ್ವಾಹ್ನ ಹತ್ತು ಗಂಟಗೆ ಧ್ವಜಾರೋಹಣ, ಶಂಖನಾದ,ಗುರುವಂದನೆ, ದೇವತಾ ಪ್ರಾರ್ಥನೆ ಮೂಲಕ ಶುಭಾರಂಭಗೊಂಡು ಸಾಮೂಹಿಕ “ರಾಮ ತಾರಕ ಮಂತ್ರ ಜಪ” ಸುಸಂಪನ್ನಗೊಳ್ಳಲಿದೆ. ಬಳಿಕ ವಲಯದ ಗೌರವಾರ್ಪಣೆ  ಹಾಗೂ ಅಪರಾಹ್ನ ಸಭಾ ಕಾರ್ಯಕ್ರಮ ನಡೆಯಲಿದ್ದು ವಿಷ್ಣು ಗುಪ್ತ ವಿಶ್ವ ವಿದ್ಯಾ ಪೀಠದ ಬಗ್ಗೆ ಮರಿಕೆ ಎ ಪಿ ಸದಾಶಿವ ಭಟ್ಟರಿಂದ ವಿಚಾರ ಮಂಡನೆ ನಡೆಯಲಿದೆ ಎಂದು ಚೊಕ್ಕಾಡಿ ವಲಯಾಧ್ಯಕ್ಷ ಟಿ ಆರ್ ಸುರೇಶ್ಚಂದ್ರ, ಕಾರ್ಯದರ್ಶಿ ಗಣೇಶ ಕೆರೆಕ್ಕೋಡಿ , ಉಪಾಧ್ಯಕ್ಷ ಡಾ ಪಿ ಆರ್ ಭಟ್ , ಕೋಶಾಧಿಕಾರಿ ಪಿ. ಕೃಷ್ಣ ಭಟ್ ತಿಳಿಸಿದ್ದಾರೆ.

Advertisement
ವಲಯೋತ್ಸವ ಏಕೆ ?

ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು  ಆಶಯ ಮತ್ತು ನಿರ್ದೇಶನದಂತೆ ಸಂಘಟನಾತ್ಮಕವಾಗಿ ಕೆಲಸ ಕಾರ್ಯಗಳು ಸುಗಮವಾಗುವ ದೃಷ್ಟಿಯಿಂದ ಶ್ರೇಣೀಕೃತ ಸಂಘಟನಾ ರೂಪವಿದ್ದು ಸಾಧಾರಣವಾಗಿ ಪ್ರತೀ 25 ಮನೆಗಳಿಗೆ ಒಬ್ಬರು ಘಟಕ ಪ್ರದಾನರಾಗಿ ಅಂದರೆ ಗುರಿಕ್ಕಾರರಾಗಿ ಶ್ರೀ ಗುರುಗಳಿಂದಲೇ ನೇರ ಪ್ರತಿನಿಧಿ ರೂಪದಲ್ಲಿ ನಿಯೋಜಿಸಲ್ಪಟ್ಟಿರುತ್ತಾರೆ. ಈ ಗುರಿಕ್ಕಾರರ ವ್ಯಾಪ್ತಿಯಲ್ಲಿ ಗುರಿಕ್ಕಾರರನ್ನೂ ಒಳಗೊಂಡು ಐದು ಮನೆಗಳಿಗೊಬ್ಬರಂತೆ ಐದು ಮಂದಿ ಶ್ರೀ ಕಾರ್ಯಕರ್ತರಿರುತ್ತಾರೆ.ಈ ಮೂಲಕ ಗುರುಗಳ ಆಶಯ ಅತೀ ಶೀಘ್ರವಾಗಿ ಮತ್ತು ಸುಲಭವಾಗಿ ಪ್ರತೀ ಮನೆಮನಗಳಿಗೆ ತಲುಪುತ್ತದೆ. ಅಂತೆಯೇ ಕಲ್ಮಡ್ಕ, ಮುಪ್ಪೇರ್ಯಾ, ಬಾಳಿಲ ಕಳಂಜ,ಕೋಟೆ ಮುಂಡುಗಾರು, ಅಮರ ಪಡ್ನೂರು,ಮುಡ್ನೂರಿನ 280 ಹವ್ಯಕ ಮನೆಗಳ ಚೊಕ್ಕಾಡಿ ವಲಯದಲ್ಲಿ ಹನ್ನೊಂದು ಮಂದಿ ಗುರಿಕ್ಕಾರರು ಇರುತ್ತಾರೆ. ಬಿ ನರಸಿಂಹ ಭಟ್, ರಮೇಶ ಎಡಪತ್ಯ,ವೆಂಕಟಸುಬ್ಬಪ್ಪಯ್ಯ, ರಾಮ ಭಟ್ ಕೈಂತಜೆ, ಬಾಳಿಲ ರಾಮಚಂದ್ರ ರಾವ್, ಸುಬ್ರಹ್ಮಣ್ಯ ಮುಂಡುಗಾರು, ಪಿ ಕೃಷ್ಣ ಭಟ್, ಜಯರಾಮ ಪೋನಡ್ಕ, ಕಾರ್ತಿಕೇಶ ಹೆಬ್ಬಾರ, ರಾಮಚಂದ್ರ ಭಟ್ ಅನೆಕಾರ ಹಾಗೂ ತಿರುಮಲೇಶ್ವರ ಕುಡುಂಬಿಲ… ಈ ಹನ್ನೊಂದು ಗುರಿಕ್ಕಾರರ ವ್ಯಾಪ್ತಿಯ ಮನೆಗಳ ಸಮೂಹ ಚೊಕ್ಕಾಡಿ ವಲಯ. ಈ ಚೊಕ್ಕಾಡಿ ವಲಯದ ಸಂಘಟನಾ ವ್ಯವಸ್ಥೆಯ ಅಧ್ಯಕ್ಷರಾಗಿ ಸುರೇಶ್ಚಂದ್ರ ತೊಟ್ಟೆತ್ತೋಡಿ, ಉಪಾಧ್ಯಕ್ಷರಾಗಿ ಡಾಕ್ಟರ್ ಪಿ ಆರ್ ಭಟ್, ಕಾರ್ಯದರ್ಶಿಯಾಗಿ ಗಣೇಶ ಕೆರೆಕ್ಕೋಡಿ,ಕೋಶಾಧಿಕಾರಿಗಳಾಗಿ ಪಿ ಕೃಷ್ಣ ಭಟ್, ಜತೆ ಕಾರ್ಯದರ್ಶಿಯಾಗಿ ರವಿಕಿರಣ ಎಡಪತ್ಯ, ಯುವ ಸಂಘಟಕರಾಗಿ ಗಣೇಶ ತಂಟೆಪ್ಪಾಡಿ, ಬಿಂಧುಸಿಂಧು ಪ್ರದಾನರಾಗಿ ಶಿವಪ್ರಸಾದ ನಡುಮನೆ, ಮಾತೃ ಸಂಘಟಕರಾಗಿ ಶ್ರೀಮತಿ ಗಂಗಾ ಮಹೇಶ್ ಚೂಂತಾರು, ಮುಷ್ಟಿ ಅಕ್ಕಿ ಪ್ರಧಾನರಾಗಿ ಸೂರ್ಯನಾರಾಯಣ ಯಸ್, ಧರ್ಮಕರ್ಮ ಪ್ರಧಾನರಾಗಿ ವೇದಮೂರ್ತಿ ಶ್ರೀ ಸಂದೇಶ ಕಾಯರ, ಸೇವಾ ಪ್ರಧಾನರಾಗಿ ಸದಾಶಿವ ತೆಕ್ಕೆಕರೆ, ಹಾಗೂ ವಿದ್ಯಾ ಪ್ರಧಾನರಾಗಿ ಪ್ರಶಾಂತ ಚೊಕ್ಕಾಡಿ ಶ್ರೀ ಗುರುಗಳಿಂದ ಎರಡು ವರ್ಷಗಳ ಕಾಲಮಿತಿಗೆ ನಿಯೋಜಿಸಲ್ಪಟ್ಟಿರುತ್ತಾರೆ ಹಾಗೂ ಶ್ರೀ ಮಠದ ಅಂಗಸಂಸ್ಥೆಯಾದ ಚೊಕ್ಕಾಡಿ ಶ್ರೀ ರಾಮ ದೇವಾಲಯದ ವ್ಯವಸ್ಥಾ ಪ್ರಮುಖರಾಗಿ ವೇದಮೂರ್ತಿ  ಮಹೇಶ ಚೂಂತಾರು ಅವರ ನೇತೃತ್ವದಲ್ಲಿ ಶ್ರೀ ರಾಮ ಸೇವಾ ಸಮಿತಿಯ ಸದಸ್ಯರೆಲ್ಲರೂ ಸಂಘಟನೆ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂದು ಚೊಕ್ಕಾಡಿ ವಲಯಾಧ್ಯಕ್ಷ ಸುರೇಶ್ಚಂದ್ರ ವಿವರಿಸಿದರು.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಕ್ಷಣಾ ವಲಯದಲ್ಲಿ ಭಾರದ ಸಾಧನೆ : ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು : ಬೇರೆ ರಾಷ್ಟ್ರಗಳಿಂದ ಹೆಚ್ಚಿದ ಬೇಡಿಕೆ
April 20, 2024
3:14 PM
by: The Rural Mirror ಸುದ್ದಿಜಾಲ
ವೆದರ್‌ ಮಿರರ್‌ | 20.04.2024 | ರಾಜ್ಯದ ಹಲವೆಡೆ ಇಂದು ಮಳೆಯ ಮುನ್ಸೂಚನೆ
April 20, 2024
11:35 AM
by: ಸಾಯಿಶೇಖರ್ ಕರಿಕಳ
ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror