ಪ್ರಸಿದ್ಧ ಪಾರಂಪರಿಕ ಕೇಂದ್ರ ತಲಕಾಡು ಬಳಿಯ ಐತಿಹಾಸಿಕ ದೇವಾಲಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಚೋಳರ ಕಾಲಕ್ಕೆ ಸೇರಿದ ದೇವಾಲಯಗಳು ಡಿಸೆಂಬರ್‌ನಲ್ಲಿ ನಿರ್ಲಕ್ಷಿಸಲ್ಟಟ್ಟು ಶಿಥಿಲಗೊಂಡಿರುವುದು ಕಂಡುಬಂದಿದ್ದು, ಅವುಗಳನ್ನು ಸಂಪೂರ್ಣ ನಾಶವಾಗದಂತೆ ರಕ್ಷಿಸಬೇಕು ಎಂದು ಆರೋಪಿಸಿ ಪ್ರವಾಸಿಗರು, ಸ್ಥಳೀಯರು ಮತ್ತು ಇತಿಹಾಸ ಆಸಕ್ತರು ರಾಜ್ಯ ಸರ್ಕಾರ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪುರಾತತ್ವ ಇಲಾಖೆಗಳ ಗಮನಕ್ಕೆ ತಂದಿದ್ದಾರೆ.
ತಲಕಾಡಿನಿಂದ ಸುಮಾರು 10ಕಿ.ಮೀ ಮತ್ತು ಮೈಸೂರಿನಿಂದ 60 ಕಿ.ಮೀ ದೂರದಲ್ಲಿರುವ ತಡಿಮಲಂಗಿ ಮತ್ತು ಕಲಿಯೂರು ಗ್ರಾಮಗಳಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳು ಈಗ ಧೂಳಿಪಟವಾಗುತ್ತಿದೆ. ಈ ದೇವಾಲಯಗಳ ಬಗ್ಗೆ ಹಳ್ಳಿಗರಿಗೂ ಈ ರಚನೆಗಳ ಬಗ್ಗೆ ಕಡಿಮೆ ಮಾಹಿತಿ ತಿಳಿದಿದೆ. ಇನ್ನು ಕಲಿಯೂರು ಗ್ರಾಮದಲ್ಲಿ ವೀರಗಲ್ಲು ಪಾಳು ಬಿದ್ದಿದೆ, ಪುರಾತತ್ವ ಪ್ರಮುಖ್ಯತೆಯನ್ನು ಅರಿತು ಬೆಂಗಳೂರು ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಬೇಕು ಎಂದು ಮೈಸೂರಿನ ಇತಿಹಾಸ ಪ್ರೇಮಿ ಗೋಪಾಲ್ ಬಾಲಕೃಷ್ಣನ್ ಹೇಳಿದ್ದಾರೆ.
ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಯಾವುದೇ ಆಸ್ತಿಯನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಸಂರಕ್ಷರಣೆಗಾಗಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಪಟ್ಟಿಮಾಡಲಾಗುತ್ತದೆ. ಈ ಸಂದರ್ಭದಲ್ಲಿಯೂ ಇದನ್ನು ಮಾಡಬಹುದು, ಕೇಂದ್ರದಿಂದ ಹಣದ ಲಭ್ಯತೆಗೆ ಒಳಪಟ್ಟಿರುತ್ತದೆ ಎಂದು ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…