ಜನರೆಡೆಗೆ ಆಮ್‌ ಆದ್ಮಿ | ನಾಗರಿಕ ಸಮಸ್ಯೆಗಳ ಪರಿಹಾರದ ಕಡೆಗೆ ಹೆಜ್ಜೆ | ಸಾರ್ವಜನಿಕ ಗುಂಪು ಚರ್ಚೆ |

September 9, 2022
9:02 AM
Advertisement

ನಾಗರಿಕ ಸಮಸ್ಯೆಗಳ ಬಗ್ಗೆ ಪ್ರಜೆಗಳ ಸಮಾಲೋಚನೆ, ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಆಮ್‌ ಆದ್ಮಿ ಪಾರ್ಟಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದೊಂದು ಪ್ರಯೋಗ ನಡೆಸುತ್ತಿದೆ.

Advertisement
Advertisement
Advertisement

ಮಂಗಳೂರನ್ನು ಉತ್ತಮ ನಾಗರಿಕ ಸ್ನೇಹಿ ನಗರವನ್ನಾಗಿಸುವ ನಿಟ್ಟಿನಲ್ಲಿ ನಾಗರಿಕ ಕುಂದುಕೊರತೆಗಳನ್ನು ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲು, ನಗರದ ಮೇಲೆ ಕಾಳಜಿ ಇರುವ ಪ್ರಜ್ಞಾವಂತ ನಾಗರಿಕರ ಗುಂಪು ರಚನೆ ಮಾಡುತ್ತಿದೆ. ಮಂಗಳೂರಿನಲ್ಲಿ ಆರಂಭದ ಹೆಜ್ಜೆ ಇರಿಸುತ್ತಿದ್ದು, ಸಾರ್ವಜನಿಕ ಕಾಳಜಿಯ ರಾಜಕೀಯ ರಹಿತ ಚಿಂತನೆ  ಜನರ ಗುಂಪು ರಚನೆ ಮಾಡಿ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಸಲಹೆಯನ್ನು ಪಡೆಯುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರವನ್ನೂ ಸಿದ್ಧಪಡಿಸಿ ಅಧಿಕಾರಿಗಳಿಗೆ ತಲಪಿಸಿ ಪರಿಹಾರ ಕಂಡುಕೊಳ್ಳುವುದು  ಇದರ ಮುಖ್ಯ ಉದ್ದೇಶ. ಆರಂಭದಲ್ಲಿ ಮಂಗಳೂರು ನಗರದಲ್ಲಿ ಈ ಯೋಜನೆ ಹಮ್ಮಿಕೊಂಡು ಮುಂದೆ ದ ಕ ಜಿಲ್ಲೆಯಾದ್ಯಂತ ವಿಸ್ತರಣೆಯಾಗಲಿದೆ ಎನ್ನುತ್ತಾರೆ ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್‌ ಕಾಮತ್.

Advertisement

ಈ ಗುಂಪುಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಭಾಗವಹಿಸಲು ಅವಕಾಶ ಇದೆ. ಅವರೂ ಈ ಸಮಸ್ಯೆಗಳಿಗೆ ತಮ್ಮ ದೃಷ್ಟಿಕೋನದ ಪರಿಹಾರದ ಬಗ್ಗೆ ಸಲಹೆ ನೀಡಬಹುದಾಗಿದೆ. ಪ್ರತೀ ವಾರ್ಡ್‌ ಗಳ ಅಭಿವೃದ್ಧಿ, ಗ್ರಾಮಗಳ ಅಭಿವೃದ್ಧಿಯ ಮೂಲಕ ನಗರ, ಗ್ರಾಮ, ತಾಲೂಕು ಕೇಂದ್ರಗಳ ಅಭಿವೃದ್ಧಿಯಾಗಲಿದೆ. ಇದಕ್ಕಾಗಿಯೇ ಜನರೊಂದಿಗೆ ಸಂವಾದ ನಡೆಯಬೇಕಿದೆ ಎನ್ನುವುದು  ಇದರ ಉದ್ದೇಶ. ಇಂದು ಹಲವು ಕಡೆಗಳಲ್ಲಿ ಜನರಿಂದಲೇ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ಕೆಲಸದಲ್ಲಿ ಪ್ರಜೆಗಳು ಹಸ್ತಕ್ಷೇಪ ಮಾಡದಂತೆ ತಡೆಯುವ ಪ್ರಯತ್ನವಾಗುತ್ತದೆ. ಆದರೆ ಜನರಿಂದಲೇ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ್ದು ಕೂಡಾ ಕರ್ತವ್ಯ. ಇದರ ಜೊತೆಗೆ ನಮ್ಮ ತೆರಿಗೆ ಹಣ, ಪೋಲಾಗದಂತೆ, ಯಾರೂ ಮೋಸ ವಂಚನೆ ಮಾಡದಂತೆಯೂ ಎಚ್ಚರ ವಹಿಸಬೇಕಾಗಿದೆ. ಈ ಎಲ್ಲಾ ಕಾರಣಗಳಿಂದ ಜನರೊಂದಿಗೆ ಸಂವಾದವು ಹೆಚ್ಚು ಫಲ ನೀಡಲಿದೆ ಎನ್ನುವುದು  ಈ ಸಂವಾದಗಳ ಉದ್ದೇಶವಾಗಿದೆ. ಆಮ್‌ ಆದ್ಮಿ ಪಾರ್ಟಿ ಈ ಮೂಲಕ ಹೊಸದೊಂದು ಹೆಜ್ಜೆಯನ್ನು ಇರಿಸಿದೆ.

Advertisement

ಈಗಾಗಲೇ ಮಂಗಳೂರಿನ ಸಿವಿಕ್‌ ಗ್ರೂಪ್‌ ಜೊತೆ ಚರ್ಚೆ ನಡೆಸಿದ ಆಮ್‌ ಆದ್ಮಿ ಪಕ್ಷವು ಮಂಗಳೂರಿನ ನಗರದ ಹಲವು ಮೂಲಭೂತ ಸಮಸ್ಯೆಗಳ ಕಡೆಗೆ ಗಮನಹರಿಸಿದೆ. ರಾಜಕೀಯ ರಹಿತ ವ್ಯಕ್ತಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಮಂಗಳೂರಿನಲ್ಲಿ ಆಮ್‌ ಆದ್ಮಿ ಪಕ್ಷ ಹೆಜ್ಜೆ ಇರಿಸಿದೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 19-04-2024 | ಇಂದು ಉತ್ತಮ ಮಳೆಯ ಮುನ್ಸೂಚನೆ |
April 19, 2024
11:00 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror