ಮಳೆಗಾಲ ಸಿದ್ಧತೆ | ಚರಂಡಿ ಹೂಳೆತ್ತಲು ಜಿಲ್ಲಾಧಿಕಾರಿ ಸೂಚನೆ

April 17, 2025
6:35 PM

ಮಂಗಳೂರು ಮಹಾನಗರಪಾಲಿಕೆಯ ಎಲ್ಲಾ 60 ವಾರ್ಡುಗಳಲ್ಲಿ  ತೆರೆದ ಚರಂಡಿಗಳಲ್ಲಿರುವ ಹೂಳೆತ್ತಲು ತಕ್ಷಣವೇ ಕ್ರಮ ಕೈಗೊಳ್ಳಲು ಮಹಾನಗರಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ   ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

Advertisement

ಅವರು ಮಹಾನಗರಪಾಲಿಕೆ ಕಚೇರಿಯಲ್ಲಿ  ಮಳೆಗಾಲಕ್ಕೆ ಕೈಗೊಳ್ಳಬಹುದಾದ ಪೂರ್ವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಳೆ ನೀರು ಹರಿದು ಹೋಗುವ  ಎಲ್ಲಾ ಚರಂಡಿ, ಮುಖ್ಯ ಚರಂಡಿ  ಹಾಗೂ ರಾಜಕಾಲುವೆಗಳಲ್ಲಿ   ತಕ್ಷಣದಿಂದಲೇ ಹೂಳೆತ್ತಲು ಪ್ರಾರಂಭಿಸಬೇಕು. ಮಳೆ ನೀರು ಸರಾಗವಾಗಿ ಹರಿದು  ನದಿ ಮತ್ತು ಸಮುದ್ರಗಳನ್ನು  ಯಾವುದೇ ಅಡೆತಡೆಗಳಿಲ್ಲದೆ  ಸೇರುವಂತಾಗಬೇಕು. ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ  ಅವರು ಎಚ್ಚರಿಸಿದರು.

ಸಾರ್ವಜನಿಕರು ತಮ್ಮ ಮನೆಯ  ತ್ಯಾಜ್ಯ ವಸ್ತುಗಳು ಅಥವಾ ಕಟ್ಟಡದ ಅವಶೇಷಗಳನ್ನು ಮಳೆ ನೀರು ಹರಿಯುವ ಚರಂಡಿ ಅಥವಾ  ರಾಜ ಕಾಲುವೆಗಳಿಗೆ    ಎಸೆಯಬಾರದು. ಇಂತಹ  ಕೃತ್ಯ ಎಸಗುವವರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳುವಂತೆ  ಅವರು ನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಜನವಸತಿ ಪ್ರದೇಶಗಳಲ್ಲಿ   ಚರಂಡಿ ಹೂಳೆತ್ತಲು ಈಗಾಗಲೇ ಆರಂಭಿಸಲಾಗಿದೆ. ಸಾರ್ವಜನಿಕರು ಚರಂಡಿ ಹೂಳೆತ್ತುವ ಸಂಬಂಧ  ದೂರುಗಳನ್ನು ನೀಡಲು  ಮಹಾನಗರ ಪಾಲಿಕೆ  ಸಹಾಯವಾಣಿ (0824-2220306/ ವಾಟ್ಸಾಪ್ ಸಂಖ್ಯೆ:9449007722) ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರ  ನರೇಶ್ ಶಣೈ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇ 2- 6 | ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ
May 1, 2025
7:55 AM
by: The Rural Mirror ಸುದ್ದಿಜಾಲ
ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮುಕ್ತಾಯ | ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ | ಜೋಗ ಇನ್ನು ಮತ್ತಷ್ಟು ಆಕರ್ಷಕ |
May 1, 2025
7:38 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |
April 30, 2025
1:54 PM
by: ಸಾಯಿಶೇಖರ್ ಕರಿಕಳ
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ
April 30, 2025
10:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group