Advertisement
MIRROR FOCUS

ಹವಾಮಾನ ಬದಲಾವಣೆ | ಮಹಿಳೆಯರ ಮೇಲೂ ಹೆಚ್ಚು ಪರಿಣಾಮ | ಹವಾಮಾನ ಬದಲಾವಣೆಯ ಕಾರ್ಯಯೋಜನೆಯಲ್ಲಿ ಮಹಿಳೆಯ ಪಾತ್ರವೂ ಬಹುಮುಖ್ಯ |

Share

ಇತ್ತೀಚೆಗೆ ದುಬೈನಲ್ಲಿ(Dubai) ನಡೆದ COP 28 ಸಂದರ್ಭದಲ್ಲಿ, ಹವಾಮಾನ ಬದಲಾವಣೆಯನ್ನು(Climate Change) ನಿಭಾಯಿಸಲು ಕಾರ್ಯತಂತ್ರ ರೂಪಿಸಲು ಜಾಗತಿಕ ನಾಯಕರು(Global Leaders) ಒಂದಾಗಿದ್ದರು. ಈ ಸಮಯದಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ವಿಶೇಷ ಗಮನ ಸೆಳೆಯಿತು. ಹವಾಮಾನ ಕ್ರಿಯೆಯ ನಿರ್ಧಾರ(decision making) ತೆಗೆದುಕೊಳ್ಳುವಲ್ಲಿ ಮಹಿಳೆಯರ ಪಾತ್ರವೂ ಬಹುಮುಖ್ಯವಾಗಿದೆ. ಸಮಾವೇಶದಲ್ಲಿ 110 ನಾಯಕರಲ್ಲಿ 7 ಮಹಿಳೆಯರು ಮಾತ್ರ ಇದ್ದರು.

Advertisement
Advertisement

ಹವಾಮಾನ ಬದಲಾವಣೆಯು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ. ಹವಾಮಾನ ಬದಲಾವಣೆಯು ಶತಮಾನದ ಮಧ್ಯಭಾಗದ ವೇಳೆಗೆ ಹೆಚ್ಚುವರಿ 158 ಮಿಲಿಯನ್ ಮಹಿಳೆಯರು ಮತ್ತು ಹುಡುಗಿಯರನ್ನು ಬಡತನಕ್ಕೆ ತಳ್ಳುತ್ತದೆ ಎಂದು ಯುನೈಟೆಡ್ ನೇಷನ್ಸ್ ವುಮೆನ್ ವರದಿ ಮಾಡಿದೆ, ಹಾಗೆ 16 ಮಿಲಿಯನ್ ಪುರುಷರ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಮಹಿಳೆಯರನ್ನು ಹವಾಮಾನ ಚರ್ಚೆಗಳಲ್ಲಿ ಹಾಗೂ ಅವರ ದೃಷ್ಟಿಕೋನವನ್ನು ಈಗ ಸೇರಿಸುವುದು ಅತೀ ಅಗತ್ಯ ಇದೆ.

Advertisement

ಛತ್ತೀಸ್‌ಗಢದಲ್ಲಿ ಟ್ರಾನ್ಸ್‌ಫಾರ್ಮ್ ರೂರಲ್ ಇಂಡಿಯಾದ ಸಹಾಯಕ ನಿರ್ದೇಶಕರಾದ ನೀರಜಾ ನಿತಿನ್ ಕುದರಿಮೋತಿ ಅವರು ನೀಡಿರುವ ಒಂದು ಸಂದರ್ಶನದಲ್ಲಿ,  ಹವಾಮಾನ ಬದಲಾವಣೆಯು ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ  ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದರು. ಇದು ಸಣ್ಣ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರಗಳನ್ನು ಮಾತ್ರವಲ್ಲದೆ, ಭಾರತದಂತಹ ಮಧ್ಯಮ-ಆರ್ಥಿಕ ರಾಷ್ಟ್ರಗಳ ಗ್ರಾಮೀಣ ವಿಭಾಗಗಳಲ್ಲಿನ ಮಹಿಳೆಯರನ್ನೂ ಒಳಗೊಂಡಿದೆ. ಈ ಪ್ರದೇಶಗಳು ಸಾಮಾನ್ಯವಾಗಿ ಬಡತನದಿಂದ ಬಳಲುತ್ತವೆ. ಅವರಿಗೆ ಈ ಬದಲಾವಣೆಯ ಅರಿವು ತಿಳುವಳಿಕೆಗೆ ಬರುವುದಿಲ್ಲ, ಬಂದರೂ ಅವರ ಧ್ವನಿ ಕ್ಷೀಣವಾಗಿರುತ್ತದೆ.

ಬರಗಾಲಕ್ಕೆ ತುತ್ತಾದ ಮಹಿಳೆಯರು: ಗ್ರಾಮೀಣ ಪ್ರದೇಶಗಳಲ್ಲಿನ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಪ್ರವಾಹ ಘಟನೆಗಳು, ಬರಗಳು ಮತ್ತು ಬೆಳೆ ನಷ್ಟದಿಂದ ಅಳೆಯಲಾಗುತ್ತದೆ. ಈ ದುರಂತಗಳು ಪ್ರಧಾನವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತವೆ.  ಬರಗಾಲದ ಅವಧಿಯಲ್ಲಿ, ಮಹಿಳೆಯರು ತಮ್ಮ ಮನೆಗಳಿಂದ ಮೈಲುಗಳಷ್ಟು ದೂರದಲ್ಲಿರುವ ಜಲಾಶಯಗಳಿಂದ ನೀರನ್ನು ತರುವ ಜವಾಬ್ದಾರಿಯನ್ನು ಹೆಚ್ಚಾಗಿ ಹೊರುತ್ತಾರೆ. ಮನೆಯ ಕೆಲಸಗಳ ಜೊತೆಗೆ ಈ ಪ್ರಯಾಸಕರವಾದ ನೀರು-ತರುವ ಕೆಲಸ ಮಹಿಳೆಯರ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ವಿಶ್ವಾದ್ಯಂತ, ಜಲಾಶಯಗಳಿಂದ ನೀರು ತರುವ ಜವಾಬ್ದಾರಿಯನ್ನು ಹೊಂದಿರುವ ಹುಡುಗಿಯರ ಸಂಖ್ಯೆ ಹುಡುಗರಿಗಿಂತ ಹೆಚ್ಚಿದೆ. ಅಂದಾಜಿನ ಪ್ರಕಾರ 70% ಮನೆಗಳಲ್ಲಿ ನೀರು ಸಂಗ್ರಹಿಸುವ ಜವಾಬ್ದಾರಿಯನ್ನು ಮಹಿಳೆಯರೇ ಹೊರುತ್ತಾರೆ. ಜಾಗತಿಕವಾಗಿ ಸುಮಾರು 1.8 ಬಿಲಿಯನ್ ವ್ಯಕ್ತಿಗಳಿಗೆ ತಮ್ಮ ಸ್ವಂತ ಮನೆಗಳಲ್ಲಿ ನೀರಿನ ಪ್ರವೇಶವನ್ನು ಹೊಂದಿರುವುದಿಲ್ಲ. ಹೀಗಾಗಿ ನೀರು ತರುವ ಶ್ರಮ ಹಾಗೂ ಸಮಯ ಇದೆರಡೂ ಕಳೆದು ಹೋಗುತ್ತದೆ. ಇದು ಮಹಿಳೆಯರ ಮೇಲೆಯೇ ಹೊರೆಯಾಗುತ್ತದೆ.

Advertisement

ಶಾಖದ ಅಲೆಯಿಂದ ಬಳಲುತ್ತಿರುವ ಮಹಿಳೆಯರು: ಭಾರತೀಯ ಹವಾಮಾನ ಇಲಾಖೆಯು ಮಾರ್ಚ್ 2022 ಅನ್ನು 1901ರ ನಂತರದ ಅತ್ಯಂತ ಬಿಸಿ ತಿಂಗಳು ಎಂದು ಘೋಷಿಸಿತು. ಈ ಅವಧಿಯಲ್ಲಿನ  ತಾಪಮಾನವು ಭಾರತದಲ್ಲಿ 25 ಸಾವುಗಳಿಗೆ ಕಾರಣವಾಯಿತು. ಆದರೆ ಪಾಕಿಸ್ತಾನದಲ್ಲಿ ಸಾವಿನ ಸಂಖ್ಯೆ ಸರಿಸುಮಾರು 65 ಕ್ಕೆ ತಲುಪಿದೆ. ಶಾಖದ ಅಲೆಗಳು ಹಲವಾರು ತೀವ್ರ ಸವಾಲುಗಳನ್ನು ಒಡ್ಡುತ್ತವೆ. 

ಹವಾಮಾನದ ಬದಲಾವಣೆ ಹಲವಾರು ಪರಿಣಾಮಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತಂದೊಡ್ಡುತ್ತಿದೆ.ಇದಕ್ಕಾಗಿ ಸಾಮೂಹಿತ ಚಿಂತನೆಗಳು ಅಗತ್ಯ ಇದೆ. ಅದರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಅಗತ್ಯವಾಗಿ ಬೇಕಿದೆ.

Advertisement

Source: Ground Report

During COP 28 held recently in Dubai, global leaders congregated to strategize on tackling climate change. However, in the assemblage of state heads during this period, female representation remained scarce. This under representation of women in climate action decision making is not a mere coincidence. This trend was also evident in the previous COP 27, where just 7 outof 110 leaders were women.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ CET ಫಲಿತಾಂಶ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಪರೀಕ್ಷೆ(Exam) ಬರೆದು ಫಲಿತಾಂಶದ(Result) ನಿರೀಕ್ಷೆಯಲ್ಲಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ(PUC Student) ಕರ್ನಾಟಕ ಪರೀಕ್ಷಾ ಪಾಧಿಕಾರ(Karnataka…

6 hours ago

ಲೋಕಸಭೆ ಸಮರ : ಇಂದು 5 ನೇ ಹಂತದ ಮತದಾನ : 8 ರಾಜ್ಯಗಳ 49 ಕ್ಷೇತ್ರಗಳಲ್ಲಿ ಮತದಾನ

ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…

6 hours ago

Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?

ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್‌…

10 hours ago

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ | ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ |

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

1 day ago