ಹವಾಮಾನ ಬದಲಾವಣೆಯ ಬಗ್ಗೆ ಸಾಕಷ್ಟು ಆತಂಕ ಎಲ್ಲೆಡೆಯೂ ಕೇಳಿಬರುತ್ತಿದೆ. ಇಡೀ ಪ್ರಪಂಚವೇ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಈ ಬಗ್ಗೆ ಈಚೆಗೆ ನಡೆಸಿದ ಅಧ್ಯಯನ ವರದಿಯು ಆತಂಕವನ್ನು ಹೊರಹಾಕಿದೆ. ವಿಜ್ಞಾನಿಗಳು ಹೇಳುವಂತೆ ಈಗಿನ ಪುರಾವೆಗಳು, ಜಾಗತಿಕ ತಾಪಮಾನದ ಮತ್ತಷ್ಟು ಏರಿಕೆಯ ಸೂಚನೆ ತೋರಿಸುತ್ತವೆ ಮತ್ತು ಅದರ ಪರಿಣಾಮಗಳು ನಿರೀಕ್ಷೆಗಿಂತ ವೇಗವಾಗಿ ಬೆಳೆಯುತ್ತಿದೆ. ಕಾಡುಗಳಲ್ಲಿ ತನ್ನದೇ ಆದ ಮರಗಳನ್ನು ತಣಿಸಲು ಸಾಕಷ್ಟು ತೇವಾಂಶವನ್ನು ಉತ್ಪಾದಿಸಲು ಕಾಡಿನೊಳಗೆ ಸಾಧ್ಯವಾಗುತ್ತಿಲ್ಲ. ಇದೇ ರೀತಿ ಅರಣ್ಯ ನಾಶ, ಮಾಲಿನ್ಯಗಳು ಹೆಚ್ಚಿದರೆ ಪರಿಸರ ಭವಿಷ್ಯದ ಬಗ್ಗೆ ಆತಂಕವನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ.…..ಮುಂದೆ ಓದಿ….
ಹವಾಮಾನ ಬದಲಾವಣೆಯ ಬಗ್ಗೆ ಇತ್ತೀಚೆಗೆ ಗಂಭೀರವಾಗಿ ವಿಜ್ಞಾನಿಗಳ ತಂಡವು ಅಧ್ಯಯನ ಮಾಡುತ್ತಿದೆ. ಈಗಾಗಲೇ ಪ್ರಪಂಚದ ತಾಪಮಾನವು 1.5 ಡಿಗ್ರಿಯಷ್ಟು ಏರಿಕೆಯಾಗಿದೆ. ಅಂದರೆ, ಕೈಗಾರಿಕೆಗಳು ವೇಗ ಪಡೆಯುವ ಪೂರ್ವದಲ್ಲಿನ ಸರಾಸರಿ ತಾಪಮಾನಕ್ಕಿಂತ 1.5 ಡಿಗ್ರಿ ಏರಿಕೆಯಾಗಿದೆ. 2024 ರಲ್ಲಿ ಜಾಗತಿಕ ತಾಪಮಾನ , ಹವಾಮಾನ ಬದಲಾವಣೆಯನ್ನು ನಿಯಂತ್ರಣ ಮಾಡುವ ಪ್ರಯತ್ನಗಳ ಬಗ್ಗೆ ಒತ್ತಡ ಹೆಚ್ಚಿದೆ. ಈ ವಿದ್ಯಮಾನವು ಮತ್ತಷ್ಟು ಅಧ್ಯಯನಕ್ಕೆ ಕಾರಣವಾಯಿತು. ಈಗ ವಿಜ್ಞಾನಿಗಳು ಹೇಳುವಂತೆ , ಇದುವರೆಗಿನ ಸಾಕ್ಷಿಗಳ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯನ್ನು ತೋರಿಸುತ್ತವೆ ಮತ್ತು ಅದರ ಪರಿಣಾಮಗಳು ನಿರೀಕ್ಷೆಗಿಂತ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಹವಾಮಾನ ಬದಲಾವಣೆ ಕಾಣುತ್ತಿದೆ. ಇದು ಒಂದು ನಿರ್ಣಾಯಕ ಮಿತಿಯನ್ನು ಮೀರಿ ಬದಲಾಯಿಸಲಾಗದ ಮತ್ತು ತೀವ್ರವಾದ ಹವಾಮಾನ ಬದಲಾವಣೆಯ ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಸಾಗರದಲ್ಲಿ ಹೆಚ್ಚಾಗುತ್ತಿರುವ ಉಷ್ಣತೆಯು ಪ್ರಬಲವಾದ ಅಟ್ಲಾಂಟಿಕ್ ಚಂಡಮಾರುತಗಳಿಗೆ ಉತ್ತೇಜನ ನೀಡುವುದಲ್ಲದೆ, ಚಂಡಮಾರುತಗಳು ಹೆಚ್ಚು ವೇಗವಾಗಿ ತೀವ್ರಗೊಳ್ಳಲು ಕಾರಣವಾಗುತ್ತವೆ. ಕೆಲವು ಬಾರಿ ವಾಯುಭಾರ ಕುಸಿತವೂ ಕೆಲವೇ ಗಂಟೆಗಳಲ್ಲಿ ಚಂಡಮಾರುತಕ್ಕೆ ತಿರುಗುತ್ತವೆ. ಅಕ್ಟೋಬರ್ 2024 ರಲ್ಲಿ, ಫ್ಲೋರಿಡಾದ ಪಶ್ಚಿಮ ಕರಾವಳಿಯನ್ನು ಅಪ್ಪಳಿಸುವ ಉಷ್ಣವಲಯದ ಚಂಡಮಾರುತದಿಂದ ಗಲ್ಫ್‌ನ ಎರಡನೇ ಅತ್ಯಂತ ಶಕ್ತಿಶಾಲಿ ಚಂಡಮಾರುತಕ್ಕೆ ತಿರುಗಿತು. ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಮಿಲ್ಟನ್ ಚಂಡಮಾರುತಕ್ಕೆ ಕೇವಲ ಒಂದು ದಿನ ಮಾತ್ರ ಬೇಕಾಗಿತ್ತು. ಬೆಚ್ಚಗಿನ ಗಾಳಿಯು ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ, ಅವು ಬಿರುಗಾಳಿಗಳು ಒಯ್ಯಲು ಸಹಾಯ ಮಾಡುತ್ತದೆ . ಅದು ಹೆಚ್ಚಿನ ಮಳೆಯನ್ನು ಉಂಟು ಮಾಡುತ್ತವೆ.
ಜಾಗತಿಕ ತಾಪಮಾನ ಏರಿಕೆಯು ಕಾಡುಗಳಿಂದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಯುಎಸ್ ಪಶ್ಚಿಮ ಮತ್ತು ಕೆನಡಾದಿಂದ ದಕ್ಷಿಣ ಯುರೋಪ್ ಮತ್ತು ರಷ್ಯಾದ ದೂರದ ಪೂರ್ವದವರೆಗೆ ದೊಡ್ಡ ಮತ್ತು ಬಿಸಿಯಾದ ಕಾಳ್ಗಿಚ್ಚುಗಳಿಗೆ ಕಾರಣವಾಗುತ್ತದೆ. ಅಕ್ಟೋಬರ್‌ನಲ್ಲಿ ನೇಚರ್ ಕ್ಲೈಮೇಟ್ ಚೇಂಜ್‌ನಲ್ಲಿ ಪ್ರಕಟವಾದ ಸಂಶೋಧನೆಯು, 2010 ರಲ್ಲಿನ ಕಾಳ್ಗಿಚ್ಚಿನ ಹೊಗೆಯೂ ಹವಾಮಾನ ಪರಿಣಾಮಕ್ಕೆ ಕಾರಣವೆಂದು ಲೆಕ್ಕಹಾಕಿದೆ. ಹೀಗಾಗಿ ಕಾಡಿನಲ್ಲಿ ಹೊತ್ತಿಕೊಳ್ಳುವ ಬೆಂಕಿಯೂ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ.
ಜುಲೈ 2024 ರ ಅಧ್ಯಯನವು, ಕಾಳ್ಗಿಚ್ಚುಗಳಿಂದಾಗಿ ಹಿಂದೆ ಇದ್ದಂತೆ ವಾತಾವರಣದಿಂದ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲುಈಗ ಕಾಡುಗಳು ವಿಫಲವಾಗಿವೆ ಎಂದು ಕಂಡುಹಿಡಿದಿದೆ. ಅಂದರೆ ದಾಖಲೆ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ವಾತಾವರಣವನ್ನು ಪ್ರವೇಶಿಸಿತು, ಇದು ಕೂಡಾ ಹವಾಮಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.