Advertisement
The Rural Mirror ವಾರದ ವಿಶೇಷ

ಹವಾಮಾನ ಬದಲಾವಣೆಯು ಭಾರತದ ಆರ್ಥಿಕತೆಗೆ ಅಪಾಯವನ್ನು ಉಂಟುಮಾಡುತ್ತಿದೆ

Share

ಹವಾಮಾನ ಬದಲಾವಣೆಯು ಭಾರತದ ಆರ್ಥಿಕತೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತಿದೆ   ಎಂದು ಇತ್ತೀಚೆಗಿನ ಅಧ್ಯಯನ ವರದಿ ಹೇಳಿದೆ.ಹೀಗಾಗಿ ಈಗ ಭಾರತದ ಪ್ರಾಕೃತಿಕ ಸ್ಥಿತಿಗತಿಗಳ ಮೇಲೆ ಹೆಚ್ಚು ಗಮನಹರಿಸುವ ಕೆಲಸ ನಡೆಯುತ್ತಿದೆ.

Advertisement
Advertisement
Advertisement

ವಿಶ್ವ ಆರ್ಥಿಕ ವೇದಿಕೆಯ ಇತ್ತೀಚಿನ ಅಧ್ಯಯನದ ಪ್ರಕಾರ ಹವಾಮಾನ ಬದಲಾವಣೆಯು ಭಾರತದಲ್ಲಿ ಪ್ರಕೃತಿ ಅವಲಂಬಿತ ಆರ್ಥಿಕತೆಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಹೇಳಿದೆ. ಅರಣ್ಯ, ಕೃಷಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆ, ಆಹಾರ, ಪಾನೀಯಗಳು ಮತ್ತು  ನೀರಿನ ಉಪಯುಕ್ತತೆಗಳು ಮತ್ತು ನಿರ್ಮಾಣ ಸೇರಿದಂತೆ ಕೈಗಾರಿಕೆಗಳಿಗೆ ಭಾರತವು ಪ್ರಕೃತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ.

Advertisement

ಭಾರೀ ಮಳೆ ಮತ್ತು ವಿಪರೀತ ಪ್ರವಾಹವು ಭಾರತದಲ್ಲಿ ಈಗ ಪ್ರತಿ ವರ್ಷ ದೇಶದ ಮೇಲೆ ಪರಿಣಾಮ ಬೀರುತ್ತದೆ, ಸಾವಿರಾರು ಜನರಿಗೆ ಸಂಕಷ್ಟ ಉಂಟು ಮಾಡುತ್ತಿದೆ, ಕೆಲವು ಸಂದರ್ಭ ಸ್ಥಳಾಂತರಕ್ಕೂ ಕಾರಣವಾಗುತ್ತಿದೆ. ಜನರ ಜೀವನೋಪಾಯದ ಮೇಲೆ ಪರಿಣಾಮವನ್ನೂ ಉಂಟು ಮಾಡುತ್ತಿದೆ.

ದೇಶದ ಹಲವು ಕಡೆ ಹಿರಿಯ ಕೃಷಿಕರನ್ನು ಮಾತನಾಡಿಸಿದ ಅಧ್ಯಯನ ತಂಡವು ಅವರೆಲ್ಲರ ಅಭಿಪ್ರಾಯದ ಪ್ರಕಾರ,  ಈಚೆಗೆ ಕಡಿಮೆ ಸಮಯದಲ್ಲಿ ಹೆಚ್ಚು ಮಳೆಯಾಗುತ್ತಿದೆ ಅಥವಾ ಮಳೆಯೇ ಇಲ್ಲವಾಗುತ್ತಿದೆ. ಉತ್ತಮ ಮುಂಗಾರು ಮುನ್ಸೂಚನೆಯ ನಂತರ ಕೃಷಿಯಲ್ಲಿ ತೊಡಗಿದ ಬಳಿಕ ನಷ್ಟವಾಗಿದೆ. ಕಾರಣ, ಕೇವಲ ಎರಡು ದಿನ ಮಾತ್ರಾ ಮಳೆಯಾಯಿತು, ನಂತರ ನಿಂತುಹೋಯಿತು. ಆದ್ದರಿಂದ ಬೆಳೆಗಳು ವಿಫಲವಾಗುತ್ತದೆ. ಹಾಗೆಂದು ನಂತರ ಭಾರೀ ಮಳೆಯಾದಾಗ ಕೃಷಿ ಹಾನಿಯಾಗುತ್ತದೆ, ಫಲ ಬಿಡುವ ಸಮಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾದಾಗ ಕೊಳೆಯುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ದೇಶದ ಸುಮಾರು 84 ಶೇಕಡಾ ಕಡೆ ತೀವ್ರವಾದ ಬಿಸಿಯ ವಾತಾವರಣ ಕೃಷಿ ಹಾಗೂ ಪರಿಸರದ ಮೇಲೆ ಪರಿಣಾಮ ಬೀರಿತ್ತು. ನವದೆಹಲಿಯಲ್ಲಿ ಈ ವರ್ಷ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ತಲುಪಿದ್ದರೆ, ಪರಿಸರ, ಅರಣ್ಯ ಇರುವ ಕಡೆಯೂ ಈ ಬಾರಿ 40 ಡಿಗ್ರಿ ದಾಟಿತ್ತು, ಇದು ಕೂಡಾ ಕೃಷಿಯ ಮೇಲೆ ಹಾಗೂ ಕೃಷಿ ಅವಲಂಬಿತ ಉದ್ದಿಮೆಗಳ ಮೇಲೆ ಪರಿಣಾಮ ಬೀರಿತ್ತು.

ಕೈಗಾರಿಕೆಗಳ ಮೇಲೆ ಹವಾಮಾನ ಬದಲಾವಣೆ ಮತ್ತು ವಿಪರೀತ ಹವಾಮಾನದ ಪರಿಣಾಮಗಳು ದೇಶದ ರಾಷ್ಟ್ರೀಯ ಆದಾಯದ 10 ಶೇಕಡಾದಷ್ಟು ಇರಬಹುದು. ಆದರೆ ಇದು ಗಂಭೀರವಾದ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಕೆಲವೇ ಸಮಯದಲ್ಲಿ ಇದು ಅನೇಕ ಕೃಷಿ, ಕೃಷಿ ಉದ್ದಿಮೆಗಳನ್ನು ಸಂಕಷ್ಟಕ್ಕೆ ತಳ್ಳಬಹುದಾಗಿದೆ ಎನ್ನುವುದು ಅಧ್ಯಯನ ವರದಿಯ ಫಲಿತಾಂಶವಾಗಿದೆ.

Advertisement

ಭಾರತದಲ್ಲಿ  ಹವಾಮಾನ ನಿಯಂತ್ರಣದ ಮೇಲೆ ಕೈಗೊಳ್ಳುವ ಪ್ರಯತ್ನಗಳು ಸಾಕಾಗುತ್ತಿಲ್ಲ, ಭಾರತದ ಪ್ರಯತ್ನಗಳನ್ನು ‘ ಸಾಕಾಗುವುದಿಲ್ಲ’ ಎಂದು ಅಧ್ಯಯನ ವರದಿ ಹೇಳಿದೆ.

ಈ ಬಾರಿ ದೇಶದ ಶೇ. 84 ರಷ್ಟು ಭಾರತದ ಜಿಲ್ಲೆಗಳು ಹೀಟ್‌ ವೇವ್‌ ಗೆ ಒಳಗಾಗಿವೆ. ಶೇ 70 ರಷ್ಟು ಜಿಲ್ಲೆಗಳು ಮುಂಗಾರು  ಸಮಯದಲ್ಲಿ ವಿಪರೀತ ಮಳೆಗೂ ತುತ್ತಾಗಿವೆ. ಅಲ್ಲದೆ, ಗುಜರಾತ್, ರಾಜಸ್ತಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮೇಘಾಲಯ ಮತ್ತು ಮಣಿಪುರವು ವಿಪರೀತ ತಾಪಮಾನ ಮತ್ತು ವಿಪರೀತ ಮಳೆಯ ಪರಿಣಾಮಗಳನ್ನು ಎದುರಿಸುತ್ತಿದೆ.

Advertisement

1993 ರಿಂದ 2022 ರ ಅವಧಿಯಲ್ಲಿ ದೇಶದ ವಿವಿಧ ಪ್ರದೇಶಗಳಿಂದ ತಾಪಮಾನ ಮತ್ತು ಮಳೆಯ ದತ್ತಾಂಶದ ಮೌಲ್ಯಮಾಪನವನ್ನು ಆಧರಿಸಿ ಐಪಿಇ ಗ್ಲೋಬಲ್ ಮತ್ತು ಇಎಸ್‌ಆರ್‌ಐ ಇಂಡಿಯಾ ಜಂಟಿಯಾಗಿ ಮಾನ್ಸೂನ್ಸ್ ಇನ್ ಎ ವಾರ್ಮಿಂಗ್ ಕ್ಲೈಮೇಟ್ ಅನ್ನು ನಿರ್ವಹಿಸುವ  ವರದಿಯನ್ನು ತಯಾರಿಸಿದೆ. ಅಧ್ಯಯನದ ಪ್ರಕಾರ, ಈ ದಶಕಗಳಲ್ಲಿ, ತೀವ್ರತರವಾದ ತಾಪಮಾನ ಮತ್ತು ಮಳೆಯ ಘಟನೆಗಳಿಂದ ಅನಿಶ್ಚಿತತೆಯ ಹೆಚ್ಚಳ ಕಂಡುಬಂದಿದೆ.

ಹೀಗಾಗಿ ಭಾರತದಲ್ಲಿ ಹವಾಮಾನ ಬದಲಾವಣೆಯು ಈಗ ಗಂಭೀರವಾದ ಪರಿಣಾಮ ಉಂಟು ಮಾಡುತ್ತಿದೆ. ಇದಕ್ಕಾಗಿ ಈಗ ಹವಾಮಾನ ಬದಲಾವಣೆ ನಿಯಂತ್ರಣದ ಬಗ್ಗೆ ಚರ್ಚೆಗಳು ಆರಂಭವಾಗುತ್ತಿದೆ. ಪರಿಸರ, ಅರಣ್ಯ ಇತ್ಯಾದಿಗಳ ಕಡೆಗೆ ಚಿಂತನೆಗಳು ಹೆಚ್ಚಾಗಿದೆ.

Advertisement

According to a recent study report, climate change is impacting India’s economy. As a result, there is an increased focus on India’s natural conditions and efforts are being made to address this issue.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

7 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

7 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

7 hours ago

ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…

7 hours ago

ಧರ್ಮಸ್ಥಳ ಯಕ್ಷಗಾನ ಮೇಳ |  ಸೇವೆ ಬಯಲಾಟ ಪ್ರದರ್ಶನ

ನಾಡಿನ ಪವಿತ್ರ ಕ್ಷೇತ್ರ  ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…

8 hours ago

ಜೇನು ತುಪ್ಪ ಮಾರಾಟ | ಅರ್ಜಿ ಆಹ್ವಾನ

ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…

8 hours ago