ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಮಳೆ ದೂರವಾಗಿದೆ. ಎಲ್ಲೆಡೆಯೂ ಕುಡಿಯುವ ನೀರಿನ ಸಂಕಷ್ಟವಿದೆ. ಕೃಷಿಗೆ ನೀರಿಲ್ಲದೆ ಒಣಗುತ್ತಿದೆ. ತಾಪಮಾನ 40 ಡಿಗ್ರಿಗಿಂತ ಅಧಿಕವಾಗುತ್ತಿದೆ. ಇದೀಗ ಬಿಸಿ ಗಾಳಿಯ ತಲೆ ಬಿಸಿ ಶುರುವಾಗಿದೆ. ಗ್ರಾಮೀಣ ಭಾಗದಲ್ಲೂ ಉರಿಬಿಸಿಗೆ ತಡೆಯಲಾಗುತ್ತಿಲ್ಲ. ಬಯಲುಸೀಮೆಯಲ್ಲಂತೂ ಸಂಕಷ್ಟವೇ ಸಂಕಷ್ಟ. ನಗರದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇದ್ದರೆ, ಕೃಷಿ ಭೂಮಿಯಲ್ಲಿ, ಗ್ರಾಮೀಣ ಭಾಗದಲ್ಲಿ ಸಂಕಷ್ಟ ಶುರುವಾಗಿದೆ. ಈಗ ಕೃಷಿ ಕಾರ್ಮಿಕರಿಗೆ, ಕೃಷಿಕರಿಗೆ , ಗ್ರಾಮೀಣ ಭಾಗದ ಜನರಿಗೆ ಸಂಕಷ್ಟ ಹೆಚ್ಚಾಗಿದೆ.
ಕೃಷಿ ಕಾರ್ಮಿಕರು ತಮ್ಮ ದೈನಂದಿನ ಆದಾಯಕ್ಕಾಗಿ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಉಳಿದೆಲ್ಲಾ ಕೆಲಸಗಳಲ್ಲಿ ಸಮಯದ ಹೊಂದಾಣಿಕೆ ಮಾಡಿಕೊಳ್ಳಬಹುದಾದರೆ ಕೃಷಿಯಲ್ಲಿ ಸಾಧ್ಯವಿಲ್ಲ. ಕೆಲವು ಕೆಲಸಗಳು ಹಗಲು ವೇಳೆಯೇ ಮಾಡಿಕೊಳ್ಳಬೇಕಿದೆ. ಹೀಗಾಗಿ ನಿತ್ಯವೂ ಬಿಸಿಗಾಳಿಯ ವಿರುದ್ಧ ಹೋರಾಡುತ್ತಿದ್ದಾರೆ. ಕಾರ್ಮಿಕರು ಬಿಸಿಲಿನ ಶಾಖಕ್ಕೆ ಒಡ್ಡಿಕೊಂಡು ಕನಿಷ್ಟ6-7 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ.
ಕರ್ನಾಟಕದಲ್ಲಿ ಇದುವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹ ಸಮಸ್ಯೆ ಇದ್ದಿರಲಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ, ಬಯಲುಸೀಮೆಯಲ್ಲಿ ಬಿಸಿಲಿನ ತಾಪದ ಪರಿಣಾಮಗಳು ಇದ್ದವು. ಹೀಗಾಗಿ ಬೆಳಗ್ಗೆ 7 ಗಂಟೆಗೆ ಕೆಲಸಗಳು ಹೊಲದಲ್ಲಿ ಆರಂಭವಾಗಿ ಮಧ್ಯಾಹ್ನದ ಮೊದಲೇ ಮುಗಿಯುತ್ತಿದ್ದವು. ಇದೀಗ ಬೆಳಗ್ಗೆ 10 ಗಂಟೆಗೇ ತಾಪಮಾನ ಹೆಚ್ಚಾಗುತ್ತಿದೆ. ಕೆಲಸಕ್ಕೆ ಸಮಸ್ಯೆಯಾಗಿದೆ. ಈಗ ದಕ್ಷಿಣ ಕನ್ನದ ಜಿಲ್ಲೆಯಲ್ಲೂ ಅದೇ ಸಮಸ್ಯೆ ಇದೆ. ಬೆಳಗ್ಗೆ 10 ಗಂಟೆಗೇ ತಾಪಮಾನದ ಸಮಸ್ಯೆ ಆರಂಭವಾಗುತ್ತದೆ. 40 ಡಿಗ್ರಿಗಿಂತ ಅಧಿಕ ತಾಪಮಾನವಾಗುವ ಕಾರಣ ಯಾವುದೇ ಕೆಲಸ ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕೃಷಿ ಬೆಳವಣಿಗೆಯ ಮೇಲೆ ಹೊಡೆತ ಬಿದ್ದಿದೆ. ಕೆಲವು ಅನಿವಾರ್ಯತೆಗಳಿಂದ ಕಾರ್ಮಿಕರು ಕೆಲಸಕ್ಕೆ ಹೋಗಲೇಬೇಕಾದ ಸ್ಥಿತಿ ಇದೆ. ಹೀಗಾಗಿ ತಾಪಮಾನವನ್ನು ಸಹಿಸಿಕೊಳ್ಳಲೇಬೇಕಿದೆ.
ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಇದೇ ಸಮಸ್ಯೆ ಇದೆ,ಕಳೆದ ಎರಡು ವಾರಗಳಲ್ಲಿ ಹಲವೆಡೆ 38 ರಿಂದ 41 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ತಮಿಳುನಾಡು ಬಿಸಿಗಾಳಿಯಿಂದ ತತ್ತರಿಸುತ್ತಿದೆ. 2011 ರ ಜನಗಣತಿಯ ಪ್ರಕಾರ, ತಮಿಳುನಾಡು ರಾಜ್ಯದಲ್ಲಿ 9.6 ಮಿಲಿಯನ್ ಕೃಷಿ ಕಾರ್ಮಿಕರಿದ್ದಾರೆ. ಅವರಿಗೆಲ್ಲಾ ಈಗ ಸಮಸ್ಯೆ. ಶಾಖವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಇತ್ತೀಚೆಗೆ ತಲೆತಿರುಗುವಿಕೆ ಮತ್ತು ವಿಪರೀತ ಸುಸ್ತು ಕಂಡುಬರುತ್ತಿದೆ.
ಇತ್ತೀಚಿನ ಮಾಹಿತಿಯಂತೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಪ್ರಕಾರ 70.9% ರಷ್ಟು ಜಾಗತಿಕ ಉದ್ಯೋಗಿಗಳು ಅತಿಯಾದ ಶಾಖಕ್ಕೆ ಒಳಗಾಗುತ್ತಾರೆ ಮತ್ತು ಕಾರ್ಮಿಕರ ಆರೋಗ್ಯದ ಮೇಲೆ ಇದರ ಪರಿಣಾಮಗಳನ್ನು ಬೀರುತ್ತಿದೆ.ಈಗ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಭತ್ತದ ಕೃಷಿ, ಹತ್ತಿ ಕೃಷಿ, ಉದ್ದಿನ ಬೇಳೆ ಕೊಯ್ಲು ಮತ್ತು ಬಾಳೆ ಕೃಷಿಯು ಭರದಿಂದ ಸಾಗುತ್ತಿದೆ. ಈ ಎಲ್ಲಾ ಬೆಳೆ ಗ್ರಾಹಕರಿಗೆ ತಲುಪಲು ಬಿಸಿಗಾಳಿಯ ನಡುವೆ ಹೊಲದಲ್ಲಿ ಕೃಷಿ ಕಾರ್ಮಿಕರ ಅಗತ್ಯವಿದೆ.
ಗ್ರಾಮೀಣ ಭಾಗದಲ್ಲಿ ಹಲವು ಆರ್ಥಿಕ ಸಂಕಷ್ಟಗಳಿವೆ. ವಾರದ ಕೊನೆಗೆ ಸಂಘದ ಕಂತು ಪಾವತಿ ಮಾಡಲೇಬೇಕಿದೆ, ಅದರ ಜೊತೆಗೆ ವಾರದ ಖರ್ಚುಗಳೂ ಇವೆ. ಈ ವೆಚ್ಚ ನಿಭಾಯಿಸಲು ಕೃಷಿ ಕೆಲಸಕ್ಕೆ ಹೋಗಲೇಬೇಕಾದ ಅನೇಕ ಕುಟುಂಬಗಳು ಇವೆ. ತೀರಾ ವಿಪರೀತವಾದ ಸೆಖೆ, ತಾಪಮಾನ ಹಾಗೂ ಬಿಸಿಗಾಳಿಯ ಕಾರಣದಿಂದ ಕೆಲಸ ಮಾಡಲಾಗುತ್ತಿಲ್ಲ, ಇದು ಕೃಷಿಕನಿಗೂ ನಷ್ಟ, ಸಂಕಷ್ಟದ ಪರಿಸ್ಥಿತಿ. ಹೀಗಾಗಿ ಕೃಷಿ ಕಾರ್ಮಿಕನಿಗೂ ಕೃಷಿಕನಿಗೂ ಈಗ ವಿಪರೀತ ತಾಪಮಾನ ಸಮಸ್ಯೆ ತಂದೊಡ್ಡಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…