ಕೆಲ ದಿನಗಳ ಹಿಂದಷ್ಟೇ ಹಿಮಾಚಲ ಪ್ರದೇಶ ಸೇರಿದಂತೆ ಆಸುಪಾಸಿನ ರಾಜ್ಯದಲ್ಲಿ ಭಾರೀ ಮಳೆಯಾಗಿತ್ತು. ಅದರಲ್ಲೂ ಹಿಮಾಚಲ ಹಾಗೂ ಗುಡ್ಡಗಾಡು ಪ್ರದೇಶದಲಿ ಮೇಘಸ್ಫೋಟ ಸಂಭವಿಸಿತ್ತು. ಈ ಘಟನೆಯಿಂದ ಸುಮಾರು 100 ಕ್ಕೂ ಹೆಚ್ಚು ಭಾರೀ ಮಳೆಗೆ ಬಲಿಯಾಗಿದ್ದರು. ಇದೀಗ ಮತ್ತೆ ಮೇಘಸ್ಫೋಟ, ಭಾರೀ ಮಳೆಯಾಗುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಜನರು ಭಾರೀ ಮಳೆಗೆ ಬಲಿಯಾಗಿದ್ದಾರೆ. ಹಿಮಾಚಲ ಹಾಗೂ ಆಸುಪಾಸಿನ ರಾಜ್ಯಗಳ ಗುಡ್ಡಗಾಡು ಪ್ರದೇಶಗಳಲ್ಲಿಯೇ ಏಕೆ ಮೇಘಸ್ಫೋಟ, ಭಾರೀ ಮಳೆಯಾಗುತ್ತದೆ…?
ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಗುಡ್ಡಗಾಡು ರಾಜ್ಯಗಳು ಭಾರೀ ಮಳೆಯ ತೀವ್ರತೆಗೆ ಸಾಕ್ಷಿಯಾಗುತ್ತಿವೆ. ಧಾರಾಕಾರ ಮಳೆಯು ಪ್ರವಾಹ ಮತ್ತು ಭೂಕುಸಿತಗಳನ್ನು ಉಂಟುಮಾಡುತ್ತಿದೆ, ಅಪಾರ ಹಾನಿಯನ್ನುಂಟುಮಾಡುತ್ತದೆ. ಸರ್ಕಾರ, ಇಲಾಖೆಗಳು ಎಷ್ಟು ಎಚ್ಚರಿಕೆ ವಹಿಸಿದರೂ ಪ್ರಕೃತಿಯ ಈ ಮುನಿಸಿಗೆ ಯಾವ ಮುಂಜಾಗ್ರತಾ ಕ್ರಮಗಳೂ ಸಾಕಾಗುತ್ತಿಲ್ಲ. ನಿರಂತರ ಮಳೆಯಿಂದಾಗಿ ಈ ರಾಜ್ಯಗಳಲ್ಲಿ ವಾಹನಗಳು ಕೊಚ್ಚಿಹೋಗಿವೆ, ಕಟ್ಟಡಗಳನ್ನು ನೆಲಸಮಗೊಳ್ಳುತ್ತಿವೆ, ಸೇತುವೆಗಳು ನಾಶವಾಗಿವೆ. ಶಿಮ್ಲಾದಲ್ಲಿ ದೇವಾಲಯದ ಕುಸಿತ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ.
ಒಂದು ಗಂಟೆಯೊಳಗೆ 10 ಚದರ ಕಿಲೋಮೀಟರ್‌ಗಳಲ್ಲಿ 10 ಸೆಂಟಿಮೀಟರ್‌ಗಿಂತ ಹೆಚ್ಚು ಮಳೆಯು ಸಂಭವಿಸಿದಾಗ ಮೇಘಸ್ಫೋಟಗಳು ಸಂಭವಿಸುತ್ತವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮೇಲೆ ಕೇಂದ್ರೀಕೃತವಾಗಿರುವ ಮಳೆಯ ಮೋಡಗಳು ಸಾಧಾರಣವಾಗಿ ಬೆಟ್ಟಗಳ ನಡುವೆ ಸಿಲುಕಿಕೊಂಡು ಮಳೆಯ ಚಟುವಟಿಕೆ ನಡೆದಾಗ ಭಾರೀ ಮಳೆಗೆ ಕಾರಣವಾಗುತ್ತದೆ. ದೇಶದ ಎಲ್ಲಾ ಕಡೆಯೂ ಮುಂಗಾರು ಕಡಿಮೆಯಾದರೂ ಹಿಮಾಚಲ, ಉತ್ತರಾಖಂಡದ ಈ ಪ್ರದೇಶಗಳಲ್ಲಿ ಮಳೆ ಇರುತ್ತದೆ. ಇದಕ್ಕೆ ಕಾರಣ ಭಾರೀ ಬೆಟ್ಟಗಳು. ಭಾರೀ ಮಳೆಯಾದ ತಕ್ಷಣವೇ ಇಲ್ಲಿನ ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಸಂಭವಿಸುತ್ತದೆ.ಈಗಲೂ ಅದೇ ಸಂಭವಿಸುತ್ತಿದೆ.
(Source: Agencies)
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…