ಉತ್ತರ ಪ್ರದೇಶದ ವಾರಣಾಸಿಯ ಜನಪ್ರಿಯ ಗಂಗಾ ಆರತಿಯಂತೆ ಹರಿಹರ ಪಟ್ಟಣದ ತುಂಗಭದ್ರಾ ನದಿಯ ದಡದಲ್ಲಿ ತುಂಗಾಭದ್ರಾ ಆರತಿಯನ್ನು ಪರಿಚಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ ಮುಂದಿನ ದಿನಗಳಲ್ಲಿ ಹರಿಹರವನ್ನು ಪ್ರಮುಖ ಯಾತ್ರಾಸ್ಥಳ ಮತ್ತು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಹರಿಹರದ ರಾಘವೇಂದ್ರ ಸ್ವಾಮಿ ಮಠದ ಬಳಿ ತುಂಗಭದ್ರಾ ನದಿ ದಡದಲ್ಲಿ 30 ಕೋಟಿ ರೂಪಾಯಿ ಮೌಲ್ಯದ ದಕ್ಷಿಣ ಭಾರತದಲ್ಲೇ ಮೊಟ್ಟಮೊದಲ ಬಾರಿಗೆ 108 ಯೋಗ ಮಂಟಪಕ್ಕೆ ಬೊಮ್ಮಾಯಿ ಶಂಕುಸ್ಥಾಪನೆ ನೇರವೇರಿಸಿದರು. ಪಂಚಮಸಾಲಿ ಗುರುಪೀಠದ ಮುಖ್ಯಸ್ಥ ವಚನಾನಂದ ಸ್ವಾಮಿಗಳು ಯೋಜನೆಯನ್ನು ಪ್ರಸ್ತಾಪಿಸಿದರು.
ನದಿಗಳ ಮಾಲಿನ್ಯದ ಬಗ್ಗೆ ನದಿಗಳ ಮಾಲಿನ್ಯವನ್ನು ತಡೆಗಟ್ಟುವ ಅಗತ್ಯವನ್ನು ಒತ್ತಿ ಹೇಳಿದ ಬೊಮ್ಮಾಯಿ ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿ ಹರಿಯುವ ಎಲ್ಲಾ ನದಿಗಳು ಕಲುಷಿತವಾಗಿವೆ. ತುಂಗಾಭದ್ರಾ ಸೇರಿದಂತೆ ಅವುಗಳನ್ನು ಸ್ವಚ್ಛಗೊಳಿಸಲು ಸರಕಾರ ಯೋಜನೆ ರೂಪಿಸಿ, ಸಂಸ್ಕ್ರತಿಯ ಪ್ರಗತಿಗೆ ನಾಂದಿ ಹಾಡಲಿದೆ ಎಂದರು.
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ ಚಿಕ್ಕ ದಾಗಿ ಕಟ್…
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…