MIRROR FOCUS

ಕರಾವಳಿ ಪ್ರತಿಭೆ ಸಂದೇಶ್ ಶೆಟ್ಟಿ ನಿರ್ದೇಶನದ ಇನಾಮ್ದಾರ್ ಚಿತ್ರ ಅ.27 ರಂದು ತೆರೆಗೆ | ಪುತ್ತೂರಿನಲ್ಲೂ ಕಮಾಲ್ ಮಾಡಲಿದ್ದಾನೆ ಇನಾಮ್ದಾರ್

Share

ಇನಾಮ್ದಾರ್… ಇನಾಮ್ದಾರ್… ಇನಾಮ್ದಾರ್ (Inamdar)…ಎಲ್ಲಿ ನೋಡಿದರೂ ಈ‌ ಚಿತ್ರದ್ದೇ ಸದ್ದು ಸುದ್ದಿ. ಕರಾವಳಿ ಭಾಗದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ, ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದ್ದು, ಇದೇ ಅಕ್ಟೋಬರ್ 27ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ. ನಮ್ಮೂರಿನ ಚಿತ್ರಮಂದಿರ ಪುತ್ತೂರಿನ ಜಿ ಎಲ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲೂ ಶುಕ್ರವಾರ ಬಿಡುಗಡೆಗೊಳ್ಳಲಿದೆ. ನಾಳೆಯಿಂದ ಇನಾಮ್ದಾರ್ ಚಿತ್ರದ ಆನ್ ಲೈನ್ ಬುಕ್ಕಿಂಗ್ ಆರಂಭವಾಗಲಿದೆ. ಕೂಡಲೇ ನಿಮ್ಮ ಟಿಕೆಟ್ ಅನ್ನು ಕಾಯ್ದಿರಿಸಿ.

Advertisement

ಈ ಚಿತ್ರ ನೆಲಮೂಲದ ಕಥೆ ಹಾಗೂ ಪಾತ್ರವರ್ಗದಿಂದ ಗಮನ ಸೆಳೆಯುತ್ತಲೇ ಇದೆ.  ಹಿರಿಯ ನಟ ಅವಿನಾಶ್, ಥ್ರಿಲ್ಲರ್ ಮಂಜು, ಎಂ.ಕೆ ಮಠ, ಪ್ರಮೋದ್ ಶೆಟ್ಟಿ, ಹಿರಿಯ ನಟ ಶರತ್ ಲೋಹಿತಾಶ್ವ (Sarath Lohitashwa) ಸೇರಿದಂತೆ ಬಹುತಾರಾಗಣವಿದೆ. ಹಿರಿಯ ನಟ ಶರತ್ ಲೋಹಿತಾಶ್ವ ಅವರು ಆ್ಯಕ್ಸಿಡೆಂಟ್ ಆಗಿ ಕಾಲಿಗೆ ಆಪರೇಷನ್ ಆಗಿದ್ದರೂ ಕೂಡ ಅದನ್ನು ಲೆಕ್ಕಿಸದೇ ಇನಾಮ್ದಾರ್ ಸಿನಿಮಾದ ಚೇಸಿಂಗ್ ಸೀಕ್ವೆನ್ಸ್ ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಿರ್ದೇಶಕ ಸಂದೇಶ್ ಶೆಟ್ಟಿ, ಇವತ್ತಿನ ಯಂಗ್ ಸ್ಟಾರ್ಸ್ ಬೆಚ್ಚಿಬೀಳೋ ರೇ‌ಂಜ್ ಗೆ ಶರತ್ ಸರ್ ಸಾಹಸ ಮಾಡಿದ್ದಾರೆಂದಿದ್ದಾರೆ.

ನಮ್ಮ ಸಿನಿಮಾದ 70 ಪರ್ಸೆಂಟ್ ಶೂಟಿಂಗ್ ಆಗಿರುವುದು ಕಾಡಲ್ಲೇ‌. ಕರಡಿ ಗುಡ್ಡ, ನಾಗನಕಲ್ಲು ಬರೆ, ಬೆಳಕಲ್ ಆಸುಪಾಸಿನಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದು ಸವಾಲಿನ ಕೆಲಸವೇ. ಅಂತಹ ಕಡೆಯಲೆಲ್ಲಾ ತಂಡದ ಜೊತೆ ಬೆನ್ನೆಲುಬಾಗಿ ನಿಂತು ಶರತ್ ಲೋಹಿತಾಶ್ವ ಕೆಲಸ ಮಾಡಿದ್ರಂತೆ. ಅವರ ಈ ಮನೋಭಾವವನ್ನು ಶ್ಲಾಘಿಸುವ ನಿರ್ದೇಶಕರು, ಹಿರಿಯ ಹಾಗೂ ಕಿರಿಯ ಕಲಾವಿದರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ.

ಅಂದ್ಹಾಗೇ, ನಮ್ಮ ಮಣ್ಣಿನ ಸೊಗಡು, ನಮ್ಮ ನೆಲದ ಶ್ರೀಮಂತಿಕೆಯನ್ನು ಸಾರುವಂತಹ ಸಿನಿಮಾಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಲವು ನಿರ್ದೇಶಕರು ಶ್ರಮವಹಿಸ್ತಿದ್ದಾರೆ. ಆ ದಿಸೆಯಲ್ಲಿ ಸಾಗಿದ ಸಂದೇಶ್ ಶೆಟ್ಟಿ ಆಜ್ರಿ, ಪಶ್ಚಿಮ ಘಟ್ಟದಲ್ಲಿ ಪರಶಿವನನ್ನು ಆರಾಧಿಸುವ ಬುಡಕಟ್ಟು ಜನಾಂಗ ಹಾಗೂ ಬಯಲು ಸೀಮೆಯಲ್ಲಿ ಶಿವಾಜಿ ಮಹರಾಜ್ ನ ಆರಾಧಿಸುವ  ಮನೆತನದ ಕಥೆನಾ ಮುನ್ನಲೆಗೆ ತಂದಿದ್ದಾರೆ. ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥನವನ್ನು ಇನಾಮ್ದಾರ್ ಒಡಲಲ್ಲಿಟ್ಟು ಜಗತ್ತಿನ ಮುಂದೆ ಹರವಿಡಲು ರೆಡಿಯಾಗಿದ್ದಾರೆ. ನಿರ್ದೇಶನದ ಜೊತೆಗೆ ಕರಡಿ ಕಾಮ ಹಾಗೂ ಕಮರ ಕಾಳ ಹೆಸರಿನ ಪಾತ್ರಗಳನ್ನ ನಿಭಾಯಿಸಿದ್ದಾರೆ.

ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ ಶೂಟಿಂಗ್ ಮಾಡಿದ್ದು, ಮುರುಳಿ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಶಿವರಾಜ್ ಮೇಹು ಸಂಕಲನ, ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗಿದೆ. ಚಿತ್ರಕಲಾ ರಾಜೇಶ್, ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಸಂಜು ಬಸಯ್ಯ, ಹಾಲಂಬಿಯಂತಹ ಪ್ರತಿಭೆಗಳು ಸಿನಿಮಾದಲ್ಲಿದ್ದಾರೆ. ನಾಯಕ ರಂಜನ್ ಛತ್ರಪತಿ ಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ  ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದಾರೆ.
Coastal director Sandesh Shetty Ajri's action cut Inamdaar is planned to be released in around 150 theaters across the state and will hit the silver screen on October 27. Nammur's cinema will also be released on Friday at Bharat Cinemas in GL Mall, Puttur. Online booking of Inamdaar movie will start from tomorrow. Book your ticket tomorrow.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

6 hours ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

6 hours ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

6 hours ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

7 hours ago

ಮೇ ಮೊದಲ ವಾರ ಲಕ್ಷ್ಮಿ ನಾರಾಯಣ ಯೋಗ, ಯಾವ ರಾಶಿಗಳಿಗೆ ಲಾಭ.!

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಹವಾಮಾನ ವರದಿ | 27-04-2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.28 ರಿಂದ ಮಳೆಯ ಪ್ರಮಾಣ ಕಡಿಮೆ |

ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…

1 day ago