2025ರಲ್ಲಿ ತೆಂಗಿನಕಾಯಿ ಆಧಾರಿತ ರಫ್ತು 1 ಬಿಲಿಯನ್ ಯುಎಸ್ ಡಾಲರ್ ಗಳನ್ನು ಮೀರಿದೆ. 2024 ರಲ್ಲಿ 800 ಮಿಲಿಯನ್ ಯುಎಸ್ ಡಾಲರ್ ಗಳಿತ್ತು. ಸುಮಾರು 40% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿದೆ.
ಈ ಬೆಳವಣಿಗೆ ಶ್ರೀಲಂಕಾದ ತೆಂಗಿನಕಾಯಿ ಉದ್ಯಮಕ್ಕೆ ಒಂದು ಪ್ರಮುಖ ಮೈಲಿಗಲ್ಲು. ಮುಂದಿನ ವಿಸ್ತರಣೆಯು ಎದುರಿಸುತ್ತಿರುವ ಪ್ರಾಥಮಿಕ ಸಮಸ್ಯೆ ಎಂದರೆ ಉತ್ಪಾದಕತೆ. ಇದನ್ನು ಗುರುತಿಸಿದ ಸರ್ಕಾರವು 2025ರಲ್ಲಿ ಬೆಳೆ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ತೆಂಗಿನಕಾಯಿ ಕೃಷಿ ಭೂಮಿಯನ್ನು ವಿಸ್ತರಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಿತು. ಆದಾಗ್ಯೂ, ಈ ಕ್ರಮಗಳು ದೀರ್ಘಾವಧಿಯಲ್ಲಿ ಮಾತ್ರ ಫಲಿತಾಂಶಗಳನ್ನು ನೀಡುತ್ತವೆ. 2025 ರಲ್ಲಿ ಲಭ್ಯವಿರುವ ದೇಶಿಯ ಬಳಕೆಯಲ್ಲಿನ ಬದಲಾವಣೆಯಿಂದ ಬೆಳವಣಿಗೆಯಾಗಿದೆ ಎಂದು ಮತ್ತು ಉದ್ಯಮಶೀಲತಾ ಅಭಿವೃದ್ಧಿ ಸಚಿವ ಚತುರಮಗ ಅಬೇಸಿಂಘೆ ಹೇಳಿದ್ದಾರೆ. ತೆಂಗು ಬೆಳೆಯಲ್ಲಿ ಅಭಿವೃದ್ಧಿಗಾಗಿ ತೆಗೆದುಕೊಂಡ ಕ್ರಮಗಳನ್ನು ಅವರು ವಿವರಿಸಿದರು.
ಮನೆಯಲ್ಲಿ ತೆಂಗಿನಕಾಯಿಯ ಹೆಚ್ಚು ಪರಿಣಾಮಕಾರಿ ಬಳಕೆ, ದೈನಂದಿನ ಬಳಕೆಗಾಗಿ ಪರ್ಯಾಯ ಉತ್ಪನ್ನಗಳ ಅಳವಡಿಕೆ, ಮನೆಯ ತ್ಯಾಜ್ಯವನ್ನ ಕಡಿಮೆ ಮಾಡಲು ಸರಳ ತಂತ್ರಜ್ಞಾನಗಳ ಬಳಕೆಯನ್ನು ಮಾಡಲಾಗಿತ್ತು. ಅದೇ ಸಮಯದಲ್ಲಿ, ಸರ್ಕಾರವು ತೆಂಗಿನಕಾಯಿ ರಪ್ತುದಾರರು ತೆಂಗಿನ ಹಾಲು ಮತ್ತು ತೆಂಗು ಆಧಾರಿತ ಉತ್ಪನ್ನಗಳನ್ನು ಮರು- ರಫ್ತು ಉದ್ದೇಶಗಳಗಾಗಿ ಮಾತ್ರ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು. ಕನಿಷ್ಠ ಪ್ರಮಾಣದಲ್ಲಿ ಮಾತ್ರ ಆಮದು ಮಾಡಿಕೊಳ್ಳಲಾಗಿದ್ದರೂ, ಈ ಸಕಾಲಿಕ ನೀತಿ ನಿರ್ಧಾರವು ಸ್ಥಳೀಯ ಮಾರುಕಟ್ಟೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿತು ಮತ್ತು ರಪ್ತು ಉದ್ಯಮದ ವೇಗವನ್ನು ಕಾಪಾಡಿತು ಎಂದು ಅವರು ಹೇಳಿದರು.
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…
ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…